ಬಾಲಕಿಯ ಹಿರಿಯ ಸಹೋದರನೂ ಇದೇ ರೀತಿ ಮೃತಪಟ್ಟಿದ್ದ

ರಾಜಸ್ಥಾನ – ನಾಗೌರನ ಖಾಸಗಿ ಶಾಲೆಯೊಂದರಲ್ಲಿ ೯ ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಅವಳು ಆಟವಾಡುತ್ತಿದ್ದಾಗ ಕೆಳಗೆ ಬಿದ್ದಳು, ನಂತರ ಶಾಲೆಯ ಸಿಬ್ಬಂದಿ ಅವಳನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು. ೪ ತಿಂಗಳ ಹಿಂದೆ ಅವಳ ಹಿರಿಯ ಸಹೋದರನೂ ಇದೇ ರೀತಿ ಹೃದಯಾಘಾತದಿಂದ ಮೃತಪಟ್ಟಿದ್ದನು.
೧. ಈ ಘಟನೆಯು ನಾಗೌರ್ ಜಿಲ್ಲೆಯ ಗೋಟನ್ ನಗರದ ‘ಗೋಟನ್ ಇಂಟರ್ನ್ಯಾಷನಲ್ ಸ್ಕೂಲ್’ನಲ್ಲಿ ಫೆಬ್ರವರಿ ೨೩ ರಂದು ಬೆಳಗ್ಗೆ ನಡೆದಿದೆ. ಶಾಲೆಯ ಸಂಚಾಲಕ ರಾಮಕುಂವರ ಓಲಾ ಅವರು ಮಾತನಾಡಿ, ತಾಳಣಪುರದ ರಾಜೇಂದ್ರ ಬಾಪೇಡಿಯಾ ಅವರ ಪುತ್ರಿ ದಿವ್ಯಾ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿದಿನದಂತೆ ಶಾಲೆ ಆರಂಭವಾಗುವ ಮೊದಲು ಅವಳು ಇತರ ಮಕ್ಕಳೊಂದಿಗೆ ಮೈದಾನದಲ್ಲಿ ಆಟವಾಡುತ್ತಿದ್ದಳು. ಆಟವಾಡುತ್ತಾ ಇದ್ದಕ್ಕಿದ್ದಂತೆ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಳು.
೨. ಶಾಲೆಯ ಸಿಬ್ಬಂದಿ ಕುಟುಂಬದವರಿಗೆ ಮಾಹಿತಿ ನೀಡುವುದರ ಜೊತೆಗೆ ದಿವ್ಯಾರನ್ನು ಗೋಟನನಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು; ಆದರೆ ಅಷ್ಟರಲ್ಲಾಗಲೇ ಅವಳು ಮೃತಪಟ್ಟಿದ್ದಳು. ವೈದ್ಯರ ಪ್ರಕಾರ, ದಿವ್ಯಾಳ ದೇಹದ ಮೇಲೆ ಯಾವುದೇ ರೀತಿಯ ಬಾಹ್ಯ ಗಾಯದ ಗುರುತುಗಳಿರಲಿಲ್ಲ. ಪ್ರಾಥಮಿಕ ತಪಾಸಣೆಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ನಂಬಲಾಗಿದೆ.
೩. ದಿವ್ಯಾಳ ಹಿರಿಯ ಸಹೋದರ ಅಭಿಷೇಕ ಕೂಡ ಇದೇ ರೀತಿ ಮೃತಪಟ್ಟಿದ್ದನು. ಸೆಪ್ಟೆಂಬರ್ ೯, ೨೦೨೫ ರಂದು ಮನೆಯಲ್ಲಿ ಆಟವಾಡುತ್ತಿದ್ದಾಗ ಅವನು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ವೈದ್ಯರು ತಪಾಸಣೆಯ ನಂತರ ಅವನು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !