ಕೇವಲ 7 ದಿನಗಳಲ್ಲಿ 16 ಜನರನ್ನು ಬಲಿಪಡೆದ ಆನೆ

ಚಾಯಿಬಾಸಾ (ಜಾರ್ಖಂಡ್) – ಜಿಲ್ಲೆಯ ನೋವಾಮುಂಡಿ ಪ್ರಖಂಡದ ಜೇಟಿಯಾ ಪಂಚಾಯತ್ ವ್ಯಾಪ್ತಿಯ ಭರಬರಿಯಾ ಗ್ರಾಮದಲ್ಲಿ ಕಾಡಾನೆಯೊಂದು ಒಂದೇ ಕುಟುಂಬದ 6 ಜನರನ್ನು ಹೊಸಕಿ ಸಾಯಿಸಿದೆ. ಜನವರಿ 6 ರಂದು ರಾತ್ರಿ ಇವರೆಲ್ಲರೂ ಮನೆಯಲ್ಲಿ ಮಲಗಿದ್ದಾಗ ಇದ್ದಕ್ಕಿದ್ದಂತೆ ನುಗ್ಗಿದ ಆನೆಯು ಎಲ್ಲರನ್ನೂ ತುಳಿದು ಹಾಕಿದೆ. ಈ ವೇಳೆ ಒಬ್ಬ ಹುಡುಗ ಹೇಗೋ ಪ್ರಾಣ ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಆನೆಯ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಆನೆಯು ಕಳೆದ 7 ದಿನಗಳಲ್ಲಿ ಈ ಭಾಗದ 16 ಜನರನ್ನು ಬಲಿಪಡೆದಿದೆ.
ಅರಣ್ಯ ಇಲಾಖೆಗೆ ಈ ಆನೆಯನ್ನು ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಅನಂತ ಅಂಬಾನಿ ಅವರ ವನ್ಯಜೀವಿ ಸಂರಕ್ಷಣಾ ಸಂಸ್ಥೆ ‘ವನತಾರಾ’ದ ಸಹಾಯವನ್ನು ಕೋರಿದ್ದಾರೆ. ಸರಕಾರ ಮತ್ತು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಈ ಆನೆಯು ದಿನವಿಡೀ ಕಾಡಿನಲ್ಲಿ ಅಡಗಿಕೊಂಡಿದ್ದು, ಕತ್ತಲಾಗುತ್ತಿದ್ದಂತೆ ಗ್ರಾಮಗಳತ್ತ ನುಗ್ಗುತ್ತಿದೆ. ಆ ಸಮಯದಲ್ಲಿ ದಾರಿಯಲ್ಲಿ ಸಿಗುವ ಮನೆಗಳ ಮೇಲೆ ದಾಳಿ ಮಾಡುತ್ತಿದೆ. ಮನೆಯಲ್ಲಿ ಮಲಗಿರುವ ಜನರನ್ನು ಸೊಂಡಿಲಿನಿಂದ ಎತ್ತಿ ಅಪ್ಪಳಿಸಿ ಮತ್ತು ಎಳೆದಾಡಿ ಕೊಲ್ಲುತ್ತಿದೆ.
ಸಂಪಾದಕೀಯ ನಿಲುವುಒಂದು ಆನೆಯನ್ನು ಹಿಡಿಯಲಾಗದ ಆಡಳಿತವು ಯಾವ ಕೆಲಸಕ್ಕೆ ಬರುತ್ತದೆ ? |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !