ಮೂಢನಂಬಿಕೆ ಮತ್ತು ಶ್ರದ್ಧೆಯ ನಡುವಿನ ಗಡಿರೇಖೆಯನ್ನು ಸ್ಪಷ್ಟಪಡಿಸಿದ ಮದ್ರಾಸ್ ಉಚ್ಚ ನ್ಯಾಯಾಲಯ!

ಚೆನ್ನೈ (ತಮಿಳುನಾಡು) – ಒಬ್ಬ ವ್ಯಕ್ತಿಯು ತನ್ನ ಸ್ವಂತ ಜಾಗದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ, ತನ್ನ ಸ್ನೇಹಿತರು ಮತ್ತು ನೆರೆಹೊರೆಯವರನ್ನು ಕರೆದು ಶಾಂತಿಯುತವಾಗಿ ಪೂಜೆ ಸಲ್ಲಿಸುತ್ತಿದ್ದರೆ, ಅದರಲ್ಲಿ ಸರಕಾರ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸರಕಾರಿ ಅಧಿಕಾರಿಗಳು ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳಿಗೆ ತಲೆಬಾಗಬಾರದು. ದೇವರು ಅಥವಾ ಮೂರ್ತಿಗಳು ಮಾನವರಿಗೆ ಹಾನಿ ಮಾಡುವುದಿಲ್ಲ. ಇಂತಹ ನಂಬಿಕೆಗಳು ಮೂಢನಂಬಿಕೆಗಳಾಗಿವೆ, ಇವುಗಳನ್ನು ಶ್ರದ್ಧೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಒಂದು ಪ್ರಕರಣದಲ್ಲಿ ತೀರ್ಪು ನೀಡಿದೆ.
ಈ ಪ್ರಕರಣವೇನು?
ತಮಿಳುನಾಡಿನ ಎನ್ನೋರ್ ಜಿಲ್ಲೆಯ ನೆಟ್ಟುಕುಪ್ಪಂನ ಭಜನಾ ಕೋವಿಲ್ ಸ್ಟ್ರೀಟ್ ಪ್ರದೇಶದಲ್ಲಿ ವಾಸಿಸುವ ಕಾರ್ತಿಕ ಎಂಬುವವರು ತಮ್ಮ ಮನೆಯಲ್ಲಿ ಶಿವಶಕ್ತಿ ಶ್ರೀ ದಕ್ಷೇಶ್ವರಿ, ಶ್ರೀ ವಿನಾಯಕ ಮತ್ತು ಶ್ರೀ ವೀರಭದ್ರ ಸ್ವಾಮಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಿಯಮಿತವಾಗಿ ಪೂಜೆ ಮಾಡುತ್ತಿದ್ದನು. ಆತನ ಮನೆಯ ಅಕ್ಕ-ಪಕ್ಕದ ಕೆಲವು ಜನರು ಕೂಡ ಆ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜೆ ಪ್ರಾರಂಭವಾದ ನಂತರ, ಆ ಭಾಗದ ಕೆಲವು ಜನರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದರು. ‘ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಪೂಜೆಯಿಂದಲೇ ಜನರು ಸಾಯುತ್ತಿದ್ದಾರೆ’ ಎಂಬ ಚರ್ಚೆ ಸುತ್ತ-ಮುತ್ತ ಹರಡಿತು. ಸ್ಥಳೀಯ ನಿವಾಸಿಗಳು ದೂರು ನೀಡಿದ ನಂತರ, ಅಧಿಕಾರಿಗಳು ಮೂರ್ತಿಗಳನ್ನು ಜಪ್ತಿ ಮಾಡಿದರು. ಈ ಕ್ರಮವನ್ನು ವಿರೋಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಯಿತು. ಏಪ್ರಿಲ್ 2025 ರ ವಿಚಾರಣೆಯಲ್ಲಿ, ನ್ಯಾಯಾಲಯವು ಮೂರ್ತಿಗಳನ್ನು ಮತ್ತೆ ಅರ್ಜಿದಾರರಿಗೆ ಹಸ್ತಾಂತರಿಸುವಂತೆ ಆದೇಶಿಸಿತು. ಅಲ್ಲದೆ, ‘ಧ್ವನಿವರ್ಧಕದಿಂದ ಜನರಿಗೆ ತೊಂದರೆಯಾಗುವಂತೆ ಬಳಸಬಾರದು ಮತ್ತು ಯಾರಿಂದಲೂ ದೇಣಿಗೆ ಸಂಗ್ರಹಿಸಬಾರದು’ ಎಂದೂ ಕೂಡ ಕೋರ್ಟ್ ಸೂಚಿಸಿತು.
ಆದೇಶ ಪಾಲಿಸದ ಆರೋಪ
ಈ ಆದೇಶದ ನಂತರವೂ ಮೂರ್ತಿಗಳನ್ನು ಹಿಂತಿರುಗಿಸಲಿಲ್ಲ ಎಂದು ಆರೋಪಿಸಿ ಕಾರ್ತಿಕ ಅವರು ನ್ಯಾಯಾಲಯದ ನಿಂದನೆ ಅರ್ಜಿಯನ್ನು ಸಲ್ಲಿಸಿದರು. (ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರಕಾರದ ಅವಧಿಯಲ್ಲಿ ಅಲ್ಲಿನ ಆಡಳಿತ ಮತ್ತು ಪೊಲೀಸರು ನ್ಯಾಯಾಲಯದ ಆದೇಶವನ್ನೂ ಪಾಲಿಸುವುದಿಲ್ಲ ಎಂಬುದನ್ನು ಗಮನಿಸಬೇಕು! – ಸಂಪಾದಕರು) ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭರತ ಚಕ್ರವರ್ತಿ ಅವರು, ಅರ್ಜಿದಾರರು ತಿರುವೊಟ್ಟಿಯೂರು ತಾಲೂಕು ಕಚೇರಿಗೆ ಹೋಗಿ ಮೂರ್ತಿಗಳನ್ನು ಪಡೆದುಕೊಳ್ಳುವಂತೆ ನಿರ್ದೇಶಿಸಿದರು. ಹಾಗೆಯೇ, ಅರ್ಜಿದಾರರ ಮನೆಯಲ್ಲಿ ಅನುಮತಿಯಿಲ್ಲದೆ ಮಂದಿರ ನಿರ್ಮಿಸಿದ್ದರೆ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲಿಯಾದರೂ ಕಾಣಿಕೆ ಪೆಟ್ಟಿಗೆ ಇಟ್ಟಿದ್ದರೆ ಅದರ ವಿರುದ್ಧವೂ ಕ್ರಮ ಕೈಗೊಳ್ಳಲು ತಿಳಿಸಲಾಯಿತು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ