ಆನೆಗಳಿಂದ ಗ್ರಾಮದ ಮನೆಗಳ ಧ್ವಂಸ

ರಾಮಗಢ (ಜಾರ್ಖಂಡ್) – ಕಳೆದ 24 ಗಂಟೆಗಳಲ್ಲಿ ಇಲ್ಲಿನ ಸಿರ್ಕಾ ಅರಣ್ಯ ಪ್ರದೇಶದಲ್ಲಿ ಆನೆಗಳ ದಾಳಿಗೆ ಇಬ್ಬರು ಮಹಿಳೆಯರು ಸೇರಿದಂತೆ ಐವರು ಬಲಿಯಾಗಿದ್ದಾರೆ. ಆನೆಗಳು ಗ್ರಾಮಕ್ಕೆ ನುಗ್ಗಿ ಮನೆಗಳನ್ನು ಕೂಡ ಧ್ವಂಸಗೊಳಿಸಿವೆ. ಈ ಘಟನೆಗಳಿಂದಾಗಿ ಪರಿಸರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ನಾಗರಿಕರು ಜಾಗರೂಕರಾಗಿರುವಂತೆ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮನವಿ ಮಾಡಿದೆ.
ಆನೆಗಳ ಚಲನವಲನದ ಮೇಲೆ ನಿಗಾ ಇಡಲು ಪ್ರದೇಶದಲ್ಲಿ ಎರಡು ಕ್ಷಿಪ್ರ ಕಾರ್ಯಪಡೆ ಮತ್ತು ಅನೇಕ ಅರಣ್ಯ ರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ತಂಡಗಳು ಕಾಡು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಮುಂದಿನ ಅನಾಹುತಗಳನ್ನು ತಡೆಯಲು ಪ್ರಯತ್ನಿಸುತ್ತಿವೆ. ಅರಣ್ಯ ಇಲಾಖೆಯ ಮಾಹಿತಿಯ ಪ್ರಕಾರ, ಪ್ರಸ್ತುತ ರಾಮಗಢ ಮತ್ತು ಬೊಕಾರೊ ಜಿಲ್ಲೆಗಳ ಗಡಿ ಅರಣ್ಯಗಳಲ್ಲಿ ಸುಮಾರು 42 ಆನೆಗಳು ವಿವಿಧ ಹಿಂಡುಗಳಲ್ಲಿ ಸಂಚರಿಸುತ್ತಿವೆ.
ವಿಡಿಯೋ ಮಾಡುವ ಹುಚ್ಚಿನಿಂದ ಪ್ರಾಣ ಕುತ್ತು
ವಿಭಾಗೀಯ ಅರಣ್ಯಾಧಿಕಾರಿ ನಿತೀಶ್ ಕುಮಾರ್ ಅವರು ಮಾತನಾಡಿ, ಡಿಸೆಂಬರ್ 16 ರಂದು ಮಧ್ಯಾಹ್ನ ಅಮಿತ ಕುಮಾರ್ ರಾಜ್ವಾರ್ ಎಂಬ ಯುವಕ 8 ಕಾಡಾನೆಗಳ ಹಿಂಡಿನ ಬಳಿ ವಿಡಿಯೋ ಮತ್ತು ಫೋಟೋ ತೆಗೆಯಲು ಹೋಗಿದ್ದನು. ಈ ಸಮಯದಲ್ಲಿ ಆನೆಗಳ ಹಿಂಡು ಹಠಾತ್ ದಾಳಿ ನಡೆಸಿ ಅವನನ್ನು ತುಳಿದಿದೆ. ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !