Gujarat Demolition Drive Continue : ಗುಜರಾತನಲ್ಲಿ ಬಾಂಗ್ಲಾದೇಶಿಗಳ ಅಕ್ರಮ ನಿರ್ಮಾಣಗಳ ತೆರವು ಕಾರ್ಯಾಚರಣೆ ಮತ್ತೆ ಆರಂಭ!

2 ಲಕ್ಷ 50 ಚದರ ಮೀಟರ್ ಭೂಮಿ ಅತಿಕ್ರಮಣ ಮುಕ್ತವಾಗಲಿದೆ

ಕರ್ಣಾವತಿ (ಗುಜರಾತ) – ಇಲ್ಲಿನ ಚಾಂಡೋಲಾ ಕೆರೆ ಪ್ರದೇಶದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾದೇಶಿಗಳನ್ನು ತೆರವುಗೊಳಿಸಲು ಬುಲ್ಡೋಜರ್ ಕಾರ್ಯಾಚರಣೆ ಪ್ರಾರಂಭವಾಗಿದೆ. ಮೇ 20 ರಂದು ಬೆಳಿಗ್ಗೆ 6 ಗಂಟೆಯಿಂದ ಅತಿಕ್ರಮಣ ತೆರವುಗೊಳಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಈ ಬುಲ್ಡೋಜರ್ ಕಾರ್ಯಾಚರಣೆಯು ಸುಮಾರು 3-4 ದಿನಗಳ ಕಾಲ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿಗಳ ಸಂಖ್ಯೆ ಎಷ್ಟು ದೊಡ್ಡದಾಗಿದೆ ಎಂದರೆ, ಈ ಸ್ಥಳವನ್ನು ‘ಮಿನಿ ಬಾಂಗ್ಲಾದೇಶ’ ಎಂದು ಕರೆಯಲಾಗುತ್ತಿದೆ.

1. ಇಲ್ಲಿನ ಅಕ್ರಮ ವಸತಿಗಳನ್ನು ಕೆಡವುವ ಎರಡನೇ ಹಂತವು ಮೇ 20 ರಿಂದ ಪ್ರಾರಂಭವಾಗಿದೆ. ತೆರವು ಪ್ರಕ್ರಿಯೆಯ ಸಮಯದಲ್ಲಿ ಭದ್ರತೆಗಾಗಿ 3 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ, 60 ಜೆಸಿಬಿಗಳು ಮತ್ತು 40 ಕ್ರೇನ್ ಯಂತ್ರಗಳನ್ನು ಬಳಸಲಾಗುತ್ತಿದೆ. ಮೊದಲ ಹಂತದಲ್ಲಿ 1 ಲಕ್ಷ 50 ಚದರ ಮೀಟರ್ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿತ್ತು. ಎರಡನೇ ಹಂತದಲ್ಲಿ 2 ಲಕ್ಷ 50 ಚದರ ಮೀಟರ್ ಭೂಮಿಯನ್ನು ಅತಿಕ್ರಮಣ ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. ಇದರ ಅಡಿಯಲ್ಲಿ 8 ಸಾವಿರ ಅಕ್ರಮ ಮನೆಗಳನ್ನು ಕೆಡವಲು ಸಾಧ್ಯವಾಗುತ್ತದೆ.

2. 2025 ರಲ್ಲಿ ಕರ್ಣಾವತಿಯಿಂದ 250 ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಲಾಗಿತ್ತು, ಅವರಲ್ಲಿ 207 ಜನರು ಚಾಂಡೋಲಾ ಪ್ರದೇಶದವರೇ ಆಗಿದ್ದರು. ಪ್ರತಿ ವರ್ಷ ಚಾಂಡೋಲಾದಿಂದ ಸುಮಾರು 10 ರಿಂದ 40 ಬಾಂಗ್ಲಾದೇಶಿ ಒಳನುಸುಳುಕೋರರನ್ನು ಬಂಧಿಸಲಾಗುತ್ತದೆ.

3. ನುಸುಳುಕೋರರ ಅನೇಕ ಬೆಂಬಲಿಗರು ಕಾರ್ಯಾಚರಣೆಯನ್ನು ನಿಲ್ಲಿಸಲು ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದರೂ, ಉಚ್ಚ ನ್ಯಾಯಾಲಯವು ಈ ಕಾರ್ಯಾಚರಣೆಯನ್ನು ನಿಲ್ಲಿಸಲು ನಿರಾಕರಿಸಿದೆ.

ಸಂಪಾದಕೀಯ ನಿಲುವು

  • ಇಷ್ಟು ದೊಡ್ಡ ಪ್ರಮಾಣದ ಭೂಮಿ ಅತಿಕ್ರಮಣಕ್ಕೆ ಒಳಗಾಗುತ್ತಿದ್ದರೂ, ನಿದ್ರಿಸುತ್ತಿದ್ದ ಆಡಳಿತದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸುವುದಿಲ್ಲ!
  • ಕಳೆದ 25 ವರ್ಷಗಳಿಂದ ಗುಜರಾತನಲ್ಲಿ ಭಾಜಪ ಸರಕಾರವಿದ್ದರೂ, ಕೇವಲ ಒಂದು ನಗರದ ಒಂದು ಭಾಗದಲ್ಲಿ ಬಾಂಗ್ಲಾದೇಶಿ ಒಳನುಸುಳುಕೋರರು ಇಷ್ಟು ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣ ಮಾಡಿರುವುದು ಜನರು ಅಪೇಕ್ಷಿಸುವುದಿಲ್ಲ!