ಗೋಪಾಲಪುರ (ಒಡಿಶಾ) – ಭಾರತವು ಮೇ ೧೩ ರಂದು ‘ಭಾರ್ಗವಾಸ್ತ್ರ’ ಎಂಬ ರಾಕೆಟ್‌ನ ಯಶಸ್ವಿ ಪರೀಕ್ಷೆಯನ್ನು ನಡೆಸಿತು. ‘ಭಾರ್ಗವಾಸ್ತ್ರ’ ಡ್ರೋನ್ ವಿರೋಧಿ ವ್ಯವಸ್ಥೆಯಾಗಿದೆ. ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ೩ ಪರೀಕ್ಷೆಗಳನ್ನು ನಡೆಸಲಾಯಿತು. ಈ ಸಮಯದಲ್ಲಿ ೪ ರಾಕೆಟ್‌ಗಳನ್ನು ಉಡಾಯಿಸಲಾಯಿತು ಮತ್ತು ಅವೆಲ್ಲವೂ ಗುರಿಯನ್ನು ತಲುಪಿದವು. ‘ಸೋಲಾರ್ ಡಿಫೆನ್ಸ್ ಅಂಡ್ ಏರೋಸ್ಪೇಸ್ ಲಿಮಿಟೆಡ್’ ‘ಭಾರ್ಗವಾಸ್ತ್ರ’ವನ್ನು ಅಭಿವೃದ್ಧಿಪಡಿಸಿದೆ.