Col Sofiya Qureshi Family : ನನ್ನ ಮಗ ಕರ್ನಲ್ ತಾಜುದ್ದೀನ್ ಇವನು ಮಠದ ಆಶೀರ್ವಾದದಿಂದ ಜನಿಸಿದ!

  • ಭಾರತೀಯ ಸೇನೆಯ ಪತ್ರಿಕಾಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಖುರೇಶಿ ಅವರ ಮಾವನವರ ಮನೋಗತ

  • ಮಗ ಮತ್ತು ಸೊಸೆ ದೇಶ ಸೇವೆ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ

ಬೆಳಗಾವಿ – ಸದ್ಯ ಭಾರತ-ಪಾಕಿಸ್ತಾನದ ನಡುವಿನ ಯುದ್ಧದ ಕುರಿತ ಪತ್ರಿಕಾಗೋಷ್ಠಿಯನ್ನು ಭಾರತೀಯ ಸೇನೆಯಿಂದ ಕರ್ನಲ್ ಸೋಫಿಯಾ ಖುರೇಶಿ ಅವರು ಉದ್ದೇಶಿಸುತ್ತಿರುವುದರಿಂದ ಅವರ ಹೆಸರು ಎಲ್ಲೆಡೆ ಪ್ರಸಾರವಾಗಿದೆ. ಅವರು ಮೂಲತಃ ಬೆಳಗಾವಿಯವರಾಗಿದ್ದು ಅವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರು ತವಗಡ್ ಬಾಳಯ್ಯ ಮಠದ ಆಶೀರ್ವಾದದಿಂದ ಜನಿಸಿದರೆಂದು ಅವರ ತಂದೆ ಗೌಸಸಾಬ್ ಬಾಗೇವಾಡಿ ಅವರು ಹೇಳಿರುವುದು ಬೆಳಕಿಗೆ ಬಂದಿದೆ. ಗೌಸಸಾಬ್ ಅವರು, ಮಠದ ಆಶೀರ್ವಾದದಿಂದ ಜನಿಸಿದ ನನ್ನ ಮಗ ಈಗ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾನೆ. ಸೊಸೆ ಮನೆಗೆ ಬಂದರೆ ಮನೆ ಬೆಳಗುತ್ತದೆ ಎಂಬ ಪದ್ಧತಿ ಇದೆ; ಆದರೆ ನನ್ನ ಸೊಸೆ ಇಡೀ ದೇಶವನ್ನೇ ಬೆಳಗಿದ್ದಾಳೆ, ಎಂದು ಹೇಳಿದರು.

ಗೌಸಸಾಬ್ ಅವರ ಮಾತು ಮುಂದುವರೆಸಿ, ನಾನು ಜಾತಿಯಿಂದ ಮುಸಲ್ಮಾನನಾಗಿರಬಹುದು; ಆದರೆ ನನಗೆ ಮಕ್ಕಳಾಗದಿದ್ದಾಗ ತವಗಡ್ ಬಾಳಯ್ಯ ಮಠದ ಆಶೀರ್ವಾದದಿಂದ ನನಗೆ ಮಕ್ಕಳಾದವು. ನಾವೆಲ್ಲರೂ ದೇಶಭಕ್ತರಾಗಿರುವುದು ಅತ್ಯಂತ ಅವಶ್ಯಕವಾಗಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ನಾಳೆ ಭಾರತ ಪ್ರೇಮಿಗಳು ಮತ್ತು ಹಿಂದೂ ಸಂತರಿಗೆ ಕೃತಜ್ಞತೆ ಹೊಂದಿದ್ದು ಅದನ್ನು ಜಗತ್ತಿನ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸುವ ಈ ಕುಟುಂಬವನ್ನು ಪಾಕಿಸ್ತಾನ ಪ್ರೇಮಿ ಭಾರತೀಯ ನಾಗರಿಕರು ಬಹಿಷ್ಕರಿಸಿದರೆ ಆಶ್ಚರ್ಯಪಡಬೇಕಾಗಿಲ್ಲ!