ಶೂನ್ಯ ಕಾರ್ಬನ್ ಹೊರಸೂಸುವಿಕೆಯ ಗುರಿ ಸಾಧಿಸಲು ದೊಡ್ಡ ಸಹಾಯ!
ನವದೆಹಲಿ – ಡೀಸೆಲ್‌ನಿಂದ ವಿದ್ಯುದೀಕರಣದತ್ತ ಸಾಗುತ್ತಿರುವ ಭಾರತೀಯ ರೈಲ್ವೆ ಈಗ ಮತ್ತೊಂದು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಜ್ಜಾಗಿದೆ. ಭಾರತದಲ್ಲಿ ಹೈಡ್ರೋಜನ್ ಚಾಲಿತ ರೈಲುಗಳನ್ನು ಪ್ರಾರಂಭಿಸಲು ರೈಲ್ವೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಈ ಹೈಡ್ರೋಜನ್ ರೈಲು ಮಾರ್ಚ್ 2031 ರಲ್ಲಿ ಭಾರತದಲ್ಲಿ ಓಡುವ ಸಾಧ್ಯತೆಯಿದೆ.
1. ಭಾರತದ ಮೊದಲ ಹೈಡ್ರೋಜನ್ ರೈಲನ್ನು ಚೆನ್ನೈನ ‘ಇಂಟೆಗ್ರಲ್ ಕೋಚ್ ಫ್ಯಾಕ್ಟರಿ’ (ಐಸಿಎಫ್) ನಲ್ಲಿ ತಯಾರಿಸಲಾಗುತ್ತಿದೆ. ಹೈಡ್ರೋಜನ್ ಚಾಲಿತ ರೈಲು ಶೂನ್ಯ ಕಾರ್ಬನ್ ಹೊರಸೂಸುವಿಕೆಯ ಗುರಿ ಸಾಧಿಸಲು ದೊಡ್ಡ ಸಹಾಯ ಮಾಡುತ್ತದೆ.
2. 2023-24ರ ಆರ್ಥಿಕ ವರ್ಷದಲ್ಲಿ 35 ‘ಹೈಡ್ರೋಜನ್ ಇಂಧನ ಸೆಲ್’ ಆಧಾರಿತ ರೈಲುಗಳನ್ನು ಅಭಿವೃದ್ಧಿಪಡಿಸಲು ರೈಲ್ವೆ ಸಚಿವಾಲಯ 2 ಸಾವಿರ 800 ಕೋಟಿ ರೂಪಾಯಿಗಳ ನಿಧಿಗೆ ಹಸಿರು ನಿಶಾನೆ ತೋರಿದೆ.
3. ಭಾರತದ ಮೊದಲ ಹೈಡ್ರೋಜನ್ ರೈಲು ಹರಿಯಾಣ ರಾಜ್ಯದ 89 ಕಿಮೀ ಉದ್ದದ ಜಿಂದ್-ಸೋನಿಪತ್ ವಿಭಾಗದಲ್ಲಿ ಓಡುವ ಸಾಧ್ಯತೆಯಿದೆ.
4. ಜನವರಿಯಲ್ಲಿ ‘ಐಸಿಎಫ್’ ನ ಜನರಲ್ ಮ್ಯಾನೇಜರ್ ಯು. ಸುಬ್ಬರಾವ್ ಇವರು, ಭಾರತವು ಇತ್ತೀಚೆಗೆ ವಿಶ್ವದ ಅತಿ ಹೆಚ್ಚು ಸಾಮರ್ಥ್ಯದ ಹೈಡ್ರೋಜನ್ ಚಾಲಿತ ರೈಲು ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಹೆಚ್ಚಿನ ದೇಶಗಳು 500 ರಿಂದ 600 ಅಶ್ವಶಕ್ತಿಯ ಸಾಮರ್ಥ್ಯದ ಹೈಡ್ರೋಜನ್ ರೈಲುಗಳನ್ನು ಅಭಿವೃದ್ಧಿಪಡಿಸಿವೆ, ಆದರೆ ಭಾರತವು 1 ಸಾವಿರ 200 ಅಶ್ವಶಕ್ತಿಯ ಸಾಮರ್ಥ್ಯದ ಎಂಜಿನ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ದೊಡ್ಡ ಯಶಸ್ಸನ್ನು ಸಾಧಿಸಿದೆ, ಎಂದು ಹೇಳಿದರು.