ಅಬು ಅಜ್ಮಿಯು ಔರಂಗಜೇಬನ ಗೋರಿಯ ಪಕ್ಕದಲ್ಲಿಯೇ ಮಲಗಬೇಕು! – ನಿತೇಶ್ ರಾಣೆ, ಬಂದರು ಅಭಿವೃದ್ಧಿ ಸಚಿವ.

ಮುಂಬಯಿ – ಅಬು ಅಜ್ಮಿ ಔರಂಗಜೇಬನನ್ನು ಅಷ್ಟೊಂದು ಪ್ರೀತಿಸುತ್ತಿದ್ದರೆ, ಅಂತಹ ವ್ಯಕ್ತಿಯನ್ನು ಔರಂಗಜೇಬನ ಸಮಾಧಿಯ ಪಕ್ಕದಲ್ಲಿಯೇ ಮಲಗಿಸಬೇಕು. ಅವರನ್ನು ಸುಮ್ಮನೆ ಅಮಾನತುಗೊಳಿಸಲಾಗುತ್ತದೆಯೇ? ಅಬು ಅಜ್ಮಿಯಂತಹ ವ್ಯಕ್ತಿಯ ಗೋರಿಯನ್ನು ಔರಂಗಜೇಬನ ಗೋರಿಯ ಪಕ್ಕದಲ್ಲಿ ಅಗೆಯಬೇಕು ಎಂದು ಭಾಜಪದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಹೇಳಿದರು. ಅವರು ಅಬು ಅಜ್ಮಿಯವರ ಹೇಳಿಕೆಯ ಕುರಿತು ಮಾತನಾಡುತ್ತಿದ್ದರು.