AI India : ಜಾಗತಿಕ ‘ಏಐ’ ನ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೃತಕ ಬುದ್ದಿ ಮತ್ತೆ ) ಪ್ರಯಾಣ ಭಾರತವಿಲ್ಲದೆ ಅಪೂರ್ಣ! – ಪಿಯೂಷ್ ಗೋಯಲ್, ಕೇಂದ್ರ ಸಚಿವ

ಮುಂಬಯಿ – ಭಾರತವಿಲ್ಲದೆ ಜಾಗತಿಕ AI ಯ ಪ್ರಯಾಣ ಅಪೂರ್ಣ ಎಂಬ ಅಭಿಪ್ರಾಯವನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮಾರ್ಚ್ 1 ರಂದು ವ್ಯಕ್ತಪಡಿಸಿದ್ದಾರೆ. ಅವರು ‘ಮುಂಬಯಿ ಟೆಕ್ ವೀಕ್ 2025’ ರ ಮಧ್ಯೆ ಮಾತನಾಡುತ್ತಿದ್ದರು.“ ಅವರು, ‘ಭಾರತಕ್ಕೆ ಎಐ ದೀರ್ಘಾವಧಿಯ ಕಾರ್ಯತಂತ್ರವಾಗಿದ್ದು ಅದು ಅಂತರರಾಷ್ಟ್ರೀಯ ವ್ಯಾಪಾರ ಒಪ್ಪಂದಗಳ ಪ್ರಮುಖ ಭಾಗವಾಗಿದೆ. AI ಇದು ಪರಿವರ್ತನಕಾರಿ ತಂತ್ರಜ್ಞಾನವಾಗಿದ್ದರೂ, ಮಾನವ ಬುದ್ಧಿವಂತಿಕೆಯು ಯಾವಾಗಲೂ ಅದಕ್ಕಿಂತ ಉತ್ತಮವಾಗಿರುತ್ತದೆ. ತಪ್ಪು ಮಾಹಿತಿಯನ್ನು ಪ್ರಕ್ರಿಯೆಗೊಳಿಸಿದರೆ AI ತಪ್ಪು ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ಮಾನವ ಮೇಲ್ವಿಚಾರಣೆ ಅತ್ಯಗತ್ಯ. ಭಾರತದಲ್ಲಿ ಶೇ. 43 ರಷ್ಟು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಇದರ ಪದವೀಧರ ಮಹಿಳೆ AI ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡುತ್ತಿದ್ದಾರೆ’, ಎಂದು ಅವರು ಹೇಳಿದರು.