Aurangzeb Villages : ದೇಶದಲ್ಲಿ ಅಸ್ತಿತ್ವದಲ್ಲಿದೆ ಔರಂಗಜೇಬನ 177 ನಗರಗಳು ಮತ್ತು ಹಳ್ಳಿಗಳು !

ನವದೆಹಲಿ – ದೇಶದಲ್ಲಿ 2011 ರ ಜನಗಣತಿಯ ಪ್ರಕಾರ, ಕ್ರೂರ ಮೊಗಲ್ ಬಾದಶಾಹ ಔರಂಗಜೇಬನ ಹೆಸರನ್ನು ಕನಿಷ್ಠ 177 ನಗರಗಳು ಮತ್ತು ಹಳ್ಳಿಗಳು ಹೊಂದಿವೆ. ದೇಶಾದ್ಯಂತ 63 ನಗರಗಳು ಅಥವಾ ಹಳ್ಳಿಗಳನ್ನು ‘ಔರಂಗಾಬಾದ್’ ಎಂದು ಹೆಸರಿಸಲಾಗಿದೆ. ಇವುಗಳಲ್ಲಿ 48 ನಗರಗಳು ಅಥವಾ ಹಳ್ಳಿಗಳು ಉತ್ತರ ಪ್ರದೇಶದಲ್ಲಿವೆ. ಔರಂಗಾಬಾದ್ ಹೊರತುಪಡಿಸಿ, ಔರಂಗಪುರ (35), ಔರಂಗನಗರ (3), ಔರಂಗಜೇಬಪುರ (13), ಔರಂಗಪೊರ (7) ಮತ್ತು ಔರಂಗಬಾರ (1) ಸಹಿತ ಔರಂಗಜೇಬನ ಹೆಸರಿನಲ್ಲಿ 38 ಗ್ರಾಮಗಳೂ ಇವೆ. ಇದರಲ್ಲಿ ‘ಔರಂಗಾಬಾದ್ ಖಾಲ್ಸಾ’, ‘ಔರಂಗಾಬಾದ್ ದಾಲಚಂದ’ ಮುಂತಾದ ಹೆಸರುಗಳೂ ಇವೆ.

1. ಉತ್ತರ ಪ್ರದೇಶದ ಯೋಗಿ ಸರಕಾರದಲ್ಲಿಯೂ ಸಹ, ಮೊಗಲ್ ಕಾಲದ ಚಿಹ್ನೆಗಳ ಹೆಸರುಗಳನ್ನು ವೇಗವಾಗಿ ಬದಲಾಯಿಸಲಾಗುತ್ತಿದೆ.

2. ಮಹಾರಾಷ್ಟ್ರದಲ್ಲಿ ಔರಂಗಜೇಬನ ಹೆಸರಿನಲ್ಲಿ 26 ನಗರಗಳು ಮತ್ತು ಗ್ರಾಮಗಳಿವೆ. ಬಿಹಾರ ಮೂರನೇ ಸ್ಥಾನದಲ್ಲಿದ್ದು, ಅಲ್ಲಿ 12 ಸ್ಥಳಗಳಿಗೆ ಔರಂಗಜೇಬನ ಹೆಸರಿವೆ.

3. ಇದಲ್ಲದೆ, ಆಂಧ್ರಪ್ರದೇಶದಲ್ಲಿ (4), ಗುಜರಾತ್ (2), ಹರಿಯಾಣ (7), ಮಧ್ಯಪ್ರದೇಶ (7), ರಾಜಸ್ಥಾನ (1), ಉತ್ತರಾಖಂಡ (3), ಬಂಗಾಳ (1) ಸೇರಿದಂತೆ ಇತರ 7 ರಾಜ್ಯಗಳಲ್ಲಿ ಅನೇಕ ಹಳ್ಳಿಗಳು ಮತ್ತು ನಗರಗಳು ಔರಂಗಜೇಬನ ಹೆಸರಿನಲ್ಲಿವೆ.

4. ದೆಹಲಿಯಲ್ಲಿ ಕೆಲವು ವರ್ಷಗಳ ಹಿಂದೆ, ಔರಂಗಜೇಬ್ ರಸ್ತೆಯನ್ನು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡಲಾಗಿದೆ.

ಸಂಪಾದಕೀಯ ನಿಲುವು

  • ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ, ಮೊಗಲರ ಗುಲಾಮಗಿರಿಯ ಹೆಸರುಗಳನ್ನು ಬದಲಾಯಿಸದಿರುವುದು ಹಿಂದೂಗಳಿಗೆ ಮತ್ತು ಅವರು ಇಲ್ಲಿಯವರೆಗೆ ಆಯ್ಕೆ ಮಾಡಿದ ಸರ್ವಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿ!
  • ‘ಛಾವಾ’ ಸಿನಿಮಾ ನೋಡಿದ ನಂತರ ಈಗಲಾದರೂ ಅದನ್ನು ಬದಲಾಯಿಸಲು ಸಾಧ್ಯವಾಗುತ್ತದೆಯೇ? ಅದೇ ನಿಜವಾದ ಪ್ರಶ್ನೆ!