ನವಿ ಮುಂಬಯಿ ವಿಮಾನ ನಿಲ್ದಾಣದ ಬಳಿ ನಡೆಯುವ ಉರುಸ ಸ್ಥಗಿತ !

  • ಮುಂಬಯಿ ಉಚ್ಚನ್ಯಾಯಾಲಯದಿಂದ ಛೀಮಾರಿ

  • ಉರುಸ ಆಚರಿಸಲು ಮುಸ್ಲಿಮರು ವಕ್ಫ್ ಮಂಡಳಿಯಲ್ಲಿ ಕೋರಿದ್ದರು

  • ಸಿಡ್ಕೊ ಭೂಮಿಯಲ್ಲಿ ನಿರ್ಮಿಸಲಾದ ದರ್ಗಾವನ್ನು ಕಳೆದ ವರ್ಷ ಕೆಡವಲಾಗಿತ್ತು !

(ಉರುಸ್ ಎಂದರೆ ಮುಸಲ್ಮಾನರ ಉತ್ಸವ)

ನವಿ ಮುಂಬಯಿ – ಇಲ್ಲಿನ ಮುಂಬರುವ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಹಿಂದೆ ಇದ್ದ ಫುಲ ಪೀರ ಶಾಹ ಬಾಬಾ ದರ್ಗಾದ ಸ್ಥಳದಲ್ಲಿ ಉರುಸಗೆ ಅವಕಾಶ ನೀಡಲಾಗುವುದಿಲ್ಲ, ಎಂದು ಮುಂಬಯಿ ಉಚ್ಚನ್ಯಾಯಾಲಯವು ಆದೇಶಿಸಿದೆ.

1. ಪನವೇಲ ಬಳಿಯವಿರುವ ಸಿಡ್ಕೊ ಭೂಮಿಯಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣದ ಪಕ್ಕದಲ್ಲಿ ನಿರ್ಮಿಸಲಾದ ಫುಲ ಪೀರ ಶಾಹ ಬಾಬಾ ದರ್ಗಾವನ್ನು ನವೆಂಬರ್ 2024 ರಲ್ಲಿ ಕೆಡವಲಾಯಿತು. ನಂತರ ಸಿಡ್ಕೊ ಅಲ್ಲಿ ಬೇಲಿ ಹಾಕಿತು. ಈ ಸಂದರ್ಭದಲ್ಲಿನ ಹೋರಾಟವು ಹಲವು ದಿನಗಳವರೆಗೆ ನಡೆದಿತ್ತು.

2. ದರ್ಗಾದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಡ್ಕೊ ಪ್ರಾಧಿಕಾರಕ್ಕೆ ಅಫಿಡವಿಟ್‌ನಲ್ಲಿ ನೀಡಲಾಗಿತ್ತು.

3. ದರ್ಗಾವನ್ನು ಕೆಡವಲಾದ ಸ್ಥಳದಲ್ಲಿ `ಇಲ್ಲಿ ಉರುಸ ಆಚರಿಸಲು ಅನುಮತಿ ನೀಡಬೇಕು’, ಎಂದು ಸ್ಥಳೀಯರು ಛತ್ರಪತಿ ಸಂಭಾಜಿನಗರದ ವಕ್ಫ್ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಾಗ, ಅಲ್ಲಿನ ಪ್ರಾಧಿಕಾರವು ಅದಕ್ಕೆ ಪರಸ್ಪರ ಅನುಮತಿ ನೀಡಿತು.

4. ಇದರ ವಿರುದ್ಧ ಸಿಡ್ಕೊ ಅರ್ಜಿ ಸಲ್ಲಿಸಿತು. ಈ ಅರ್ಜಿ ಕುರಿತು ನ್ಯಾಯಾಲಯವು ಮೇಲಿನ ತೀರ್ಪು ನೀಡಿತು. ಮುಂದಿನ ವಿಚಾರಣೆ ಫೆಬ್ರವರಿ 25 ರಂದು ನಡೆಯಲಿದೆ.

5. ‘ದರ್ಗಾವನ್ನು ಕೆಡವಿದಾಗ ಅಲ್ಲಿ ಉರುಸಗೆ ಅನುಮತಿ ನೀಡುವುದು ಸೂಕ್ತವಲ್ಲ’, ಎಂದು ಹೇಳಿ ಉಚ್ಚನ್ಯಾಯಾಲಯವು ವಕ್ಫ್ ಮಂಡಳಿ ಪ್ರಾಧಿಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿತು.
ನ್ಯಾಯಮೂರ್ತಿ ಸಂದೀಪ ಮಾರಣೆ ಅವರ ಏಕಸದಸ್ಯ ಪೀಠದ ಮುಂದೆ ಅರ್ಜಿಯ ವಿಚಾರಣೆ ನಡೆಯಿತು.

6. ‘ದರ್ಗಾ ಇಲ್ಲದ ಸ್ಥಳಗಳಲ್ಲಿ ಉರುಸಾಗೆ ಅವಕಾಶ ನೀಡಲಾಗುವುದಿಲ್ಲ’, ಎಂದು ಸಿಡ್ಕೊ ಪರವಾಗಿ ಅಡ್ವೊಕೇಟ್ ಜನರಲ್ ಬೀರೇಂದ್ರ ಸರಾಫ ವಾದಿಸಿದರು. ಅದನ್ನು ನ್ಯಾಯಾಲಯ ಒಪ್ಪಿಕೊಂಡಿತು. ಈ ಸಮಯದಲ್ಲಿ ನ್ಯಾಯಾಲಯವು, “ಈ ದರ್ಗಾವನ್ನು ಕೆಡವಿರುವಾಗ ಉರುಸ್‌ಗೆ ಅನುಮತಿ ಏಕೆ ನೀಡಲಾಯಿತು? ಎನ್ನುವ ಪ್ರಶ್ನೆಯಿದೆ’ ಎಂದು ಹೇಳಿತು.

ಸಂಪಾದಕೀಯ ನಿಲುವು

  • ಭೂಮಿ ಸಿಡ್ಕೊಗೆ ಸೇರಿದ್ದರೂ ಉರುಸ ಆಯೋಜಕರು ವಕ್ಫ್ ಪ್ರಾಧಿಕಾರದಿಂದ ಹೇಗೆ ಅನುಮತಿ ಕೋರುತ್ತಾರೆ ? ಅವರ ಸಂಬಂಧ ಏನು? ಮತ್ತು ಜಮೀನು ಅವರ ಸ್ವಾಧೀನದಲ್ಲಿಲ್ಲದಿದ್ದರೂ ವಕ್ಫ್ ಪ್ರಾಧಿಕಾರವು ಪರಸ್ಪರ ಅನುಮತಿಯನ್ನು ಹೇಗೆ ನೀಡುತ್ತದೆ?
  • ದರ್ಗಾವನ್ನು ಕೆಡವಿದ ನಂತರವೂ, ಮತಾಂಧರು ಅಲ್ಲಿ ಮತ್ತೆ ಉರುಸ್ ಆಚರಿಸಲು ಯೋಜಿಸುತ್ತಿದ್ದಾರೆ. ಇದು ಅವರ ಧಾರ್ಮಿಕ ಮತಾಂಧತೆಯನ್ನು ತೋರಿಸುತ್ತದೆ !
  • ಸಿಡ್ಕೊ ಅರ್ಜಿ ಸಲ್ಲಿಸಿರದಿದ್ದರೆ, ಪ್ರತಿವರ್ಷ ಉರುಸ್ ಆಚರಿಸುವ ಮೂಲಕ ಮತ್ತೆ ಭೂಮಿಯನ್ನು ಕಬಳಿಸಲು ಷಡ್ಯಂತ್ರವನ್ನು ಮತಾಂಧರು ರಚಿಸುತ್ತಿದ್ದರು ಎನ್ನುವುದನ್ನು ಗಮನಿಸಬೇಕು !