Malanggad Police Notice : ಮಲಂಗಗಡಕ್ಕೆ ಹೋಗುವ ಹಿಂದೂಗಳಿಗೆ ಪೋಲೀಸರಿಂದ ನೋಟೀಸ್

ಠಾಣೆ – ಕಲ್ಯಾಣ್‌ನ ಮಲಂಗಗಡ್‌ನಲ್ಲಿ ಮಾಘಿ ಪೂರ್ಣಿಮಾಗೆ ಉತ್ಸವ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಹಿಂದುತ್ವನಿಷ್ಟರಿಗೆ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಇದರಿಂದಾಗಿ ಹಿಂದೂ ಭಕ್ತರಲ್ಲಿ ಆಕ್ರೋಶದ ಅಲೆ ಎದ್ದಿದೆ. ಮಲಂಗಗಡದಲ್ಲಿನ ನವನಾಥನ ಸ್ಥಳದಲ್ಲಿ ದರ್ಗಾವನ್ನು ನಿರ್ಮಿಸುವ ಮೂಲಕ ಮುಸ್ಲಿಮರು ಅಲ್ಲಿ ಪೂಜೆ ಮಾಡುವುದನ್ನು ವಿರೋಧಿಸುತ್ತಾರೆ. ಇದರ ವಿರುದ್ಧ ಹಲವು ವರ್ಷಗಳಿಂದ ಹಿಂದೂಗಳ ಹೋರಾಟ ನಡೆಯುತ್ತಿದೆ. ”ಹಿಂದೂಗಳಿಗೆ ನೋಟಿಸ್ ಕಳುಹಿಸುವುದು, ಎಂದರೆ ಹಿಂದೂ ಸಮಾಜದ ಶಾಂತಿ ಕದಡುವುದು, ಎಂದು ಆಗುವುದು. ವಾಸ್ತವದಲ್ಲಿ ಮಲಂಗಗಡವನ್ನು ಮುಸ್ಲಿಮರು ಅತಿಕ್ರಮಿಸಿಕೊಂಡಿದ್ದಾರೆ ಮತ್ತು ಅಲ್ಲಿನ ಹಿಂದೂಗಳ ಸ್ಥಾನವನ್ನು ಕಾಯ್ದುಕೊಳ್ಳುತ್ತಿರುವ ಹಿಂದೂಗಳಿಗೆ ಮಾತ್ರ ನೋಟಿಸ್ ಕಳುಹಿಸಲಾಗಿದೆ, ಇದು ದುರದೃಷ್ಟಕರ’, ಎಂದು ಹಿಂದೂಗಳ ಮಧ್ಯೆ ಚರ್ಚೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ಹಿಂದುತ್ವನಿಷ್ಟ ಸರಕಾರ ಇರುವಾಗ ಹೀಗಾಗುವುದು ಅಪೇಕ್ಷಿತವಲ್ಲ !