Defense Land Encroachment : ದೇಶದ ರಕ್ಷಣಾ ಇಲಾಖೆಯ ೧೦ ಸಾವಿರದ ೨೪೯ ಎಕರೆ ಭೂಮಿಯ ಮೇಲೆ ಅತಿಕ್ರಮಣ

ರಕ್ಷಣಾ ರಾಜ್ಯಸಚಿವ ಸಂಜಯ ಸೇಠ

ನವ ದೆಹಲಿ – ದೇಶಾದ್ಯಂತ ರಕ್ಷಣಾ ಇಲಾಖೆಯ ೧೮ ಲಕ್ಷ ಎಕರೆ ಭೂಮಿ ಇದ್ದು ಅದರಲ್ಲಿ ೧೦ ಸಾವಿರದ ೩೫೪ ಎಕರೆ ಭೂಮಿಯಲ್ಲಿ ಅತಿಕ್ರಮಣ ಮಾಡಲಾಗಿದೆ, ಎಂದು ರಕ್ಷಣಾ ರಾಜ್ಯಸಚಿವ ಸಂಜಯ ಸೇಠ ಇವರು ರಾಜ್ಯಸಭೆಯಲ್ಲಿ ಒಂದು ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದರು.

ಅಮೇರಿಕ ಸಂಸ್ಥೆಯ ಮೂಲಕ ಸಿಗುವ ನಿಧಿಯ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ! – ಭಾಜಪದ ಸಂಸದ ನಿಶಿಕಾಂತ ದುಬೆ

ಭಾಜಪದ ಸಂಸದ ನಿಶಿಕಾಂತ ದುಬೆ

ಭಾಜಪ ಸಂಸದ ನಿಶಿಕಾಂತ  ದುಬೆ ಇವರು ಯು.ಎಸ್.ಎ.ಐ.ಡಿ. ಮೂಲಕ (ಯುನೈಟೆಡ್ ಸ್ಟೇಟ್ ಏಜೆನ್ಸಿ ಆಫ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಮೂಲಕ) ಅಮೇರಿಕಾ ಭಾರತದಲ್ಲಿ ಬಿರುಕು ಮೂಡಿಸುವುದಕ್ಕಾಗಿ ವಿವಿಧ ಸಂಸ್ಥೆಗಳಿಗೆ ಹಣ ನೀಡುತ್ತಿರುವ ದಾವೆ ಮಾಡುತ್ತಾ ಈ ಪ್ರಕರಣದ ವಿಚಾರಣೆ ನಡೆಸಲು ಸರಕಾರಕ್ಕೆ ಆಗ್ರಹಿಸಿದ್ದಾರೆ. ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಹೀಗೂ ಕೂಡ ಅವರು ಹೇಳಿದರು.ದುಬೆ ಇವರು, ವಿರೋಧಿಗಳು, ಯು.ಎಸ್.ಎ.ಐ.ಡಿ.ಗೆ ಜಾರ್ಜ್ ಸೋರೋಸ್ ಇವರ ಓಪನ್ ಸೊಸೈಟಿ ಫೌಂಡೇಶನ್ ಗೆ ಭಾರತದಲ್ಲಿ ಬಿರುಕು ಮೂಡಿಸುವುದಕ್ಕಾಗಿ ೫ ಸಾವಿರ ಕೋಟಿ ರೂಪಾಯಿ ನೀಡಿತ್ತು ಅಥವಾ ಇಲ್ಲವೋ ? ಅವರು ರಾಜೀವ ಗಾಂಧಿ ಫೌಂಡೇಶನ್ ಗೆ ಹಣ ನೀಡಿದರು ಅಥವಾ ಇಲ್ಲವೋ? ಎಂದು ಕೇಳಿದರು.

ಸಂಪಾದಕೀಯ ನಿಲುವು

ರಕ್ಷಣಾ ದಳ ತನ್ನ ಸ್ವಂತ ಭೂಮಿಯ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ, ಇದು ಲಜ್ಜಾಸ್ಪದ ! ಸರಕಾರವು ಕೇವಲ ಮಾಹಿತಿ ನೀಡದೆ ಸಮರೋಪಾದಿಯಲ್ಲಿ ಈ ಭೂಮಿಯನ್ನು ಮುಕ್ತಗೊಳಿಸಲು ಅಭಿಯಾನ ನಡೆಸಿ ನಂತರ ಅದರ ಮಾಹಿತಿ ಸಂಸತ್ತಿನಲ್ಲಿ ನೀಡಬೇಕು !