ದೇವಸ್ಥಾನ ಸಮಿತಿಯು ಮುಖ್ಯಮಂತ್ರಿಗಳನ್ನು ಭೇಟಿಯಾಗಲಿದೆ !
ನವದೆಹಲಿ – ಆಂಧ್ರಪ್ರದೇಶದ ಭಾಜಪದಿಂದ ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ‘ಯಲ್ಲಿನ ೧ ಸಾವಿರ ಹಿಂದೂಯೆತರ ಸಿಬ್ಬಂದಿಗಳನ್ನು ತೆರವುಗೊಳಿಸಲು ಮನವಿ ಮಾಡಿದ್ದಾರೆ. ಆಂಧ್ರಪ್ರದೇಶದ ಭಾಜಪದ ವಕ್ತಾರರು ಮತ್ತು ‘ಟಿಟಿಡಿ’ ಯ ಸದಸ್ಯರಾದ ಭಾನುಪ್ರಕಾಶ ರೆಡ್ಡಿಯವರು, ದೇವಸ್ಥಾನ ಸಮಿತಿಯ ಸದಸ್ಯರು ಫೆಬ್ರುವರಿ ೧೪ ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರನ್ನು ಭೇಟಿಯಾಗಲಿರುವರು ಮತ್ತು ಅವರಿಗೆ ದೇವಸ್ಥಾನದಲ್ಲಿನ ಸೇವೆಗಳಿಂದ ಹಿಂದೂಯೆತರರನ್ನು ತೆರವುಗೊಳಿಸಲು ವಿನಂತಿಸುವರು, ಎಂದು ಹೇಳಿದರು.
‘ಟಿಟಿಡಿ’ತಿರುಪತಿ ದೇವಸ್ಥಾನದಲ್ಲಿನ ೧ ಸಾವಿರ ಹಿಂದೂಯೆತರ ಸಿಬ್ಬಂದಿಯನ್ನು ತೆರೆವು ಗೊಳಿಸುವ ಆಗ್ರಹ !
ದೇವಸ್ಥಾನ ಸಮಿತಿ ಮುಖ್ಯಮಂತ್ರಿಯನ್ನು ಭೇಟಿ ಮಾಡುವರು !
ನವದೆಹಲಿ – ಆಂಧ್ರಪ್ರದೇಶದ ಭಾಜಪವು ‘ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)’ನಲ್ಲಿರುವ ೧ ಸಾವಿರ ಹಿಂದೂಯೆತರ ಸಿಬ್ಬಂದಿಗಳನ್ನು ತೆರವುಗೊಳಿಸಲು ಮನವಿ ಮಾಡಿದೆ. ಆಂಧ್ರಪ್ರದೇಶದ ಭಾಜಪದ ವಕ್ತಾರರು ಮತ್ತು ‘ಟಿಟಿಡಿ’ಯ ಸದಸ್ಯರಾದ ಭಾನುಪ್ರಕಾಶ ರೆಡ್ಡಿಯವರು, ದೇವಸ್ಥಾನ ಸಮಿತಿಯ ಸದಸ್ಯರು ಫೆಬ್ರುವರಿ ೧೪ ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರನ್ನು ಭೇಟಿಯಾಗಲಿದೆ ಮತ್ತು ಅವರಿಗೆ ದೇವಸ್ಥಾನದಲ್ಲಿನ ಸೇವೆಗಳಿಂದ ಹಿಂದೂಯೆತರರನ್ನು ತೆರವುಗೊಳಿಸಲು ವಿನಂತಿಸಲಿದೆ.
ಇತ್ತೀಚಿಗೆ `ಟಿಟಿಡಿ’ಯು ದೇವಸ್ಥಾನದಲ್ಲಿನ ೧೮ ಹಿಂದೂಯೆತರ ಸಿಬ್ಬಂದಿಗಳನ್ನು ತೆಗೆದಿರುವ ಮಾಹಿತಿ ನೀಡಿತ್ತು. ಈ ಎಲ್ಲರನ್ನು ‘ಟಿಟಿಡಿ’ಯ ನಿಯಮದ ವಿರುದ್ಧ ಕೆಲಸ ಮಾಡಿದ್ದರಿಂದ ದೋಷಿಗಳೆಂದು ನಿರ್ಧರಿಸಲಾಗಿತ್ತು. ದೇವಸ್ಥಾನ ಆಡಳಿತದಿಂದ ಈ ಸಿಬ್ಬಂದಿಗಳಿಗೆ ೨ ದಾರಿಯನ್ನು ನೀಡಲಾಗಿದ್ದು, ಅದರಲ್ಲಿ ಮೊದಲನೆಯದು ಅವರು ಬೇರೆ ಸರಕಾರಿ ಇಲಾಖೆಗೆ ವರ್ಗಾವಣೆಯಾಗಬೇಕು ಅಥವಾ ಎರಡನೆಯದು ಸ್ವಯಂ ನಿವೃತ್ತಿ ಪಡೆಯಬೇಕು. ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ಈ ನಿರ್ಣಯವನ್ನು ತೆಗೆದಕೊಳ್ಳಲಾಗಿದೆ ಎಂದು ದೇವಸ್ಥಾನ ಮಂಡಳಿಯು ಹೇಳಿದೆ.