Commercial Gas Cylinder Price Reduction : ೧೯ ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ೭ ರೂಪಾಯಿ ಇಳಿಕೆ

ನವದೆಹಲಿ – ದೇಶದಲ್ಲಿ ೧೯ ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ೭ ರೂಪಾಯಿ ಇಳಿಕೆಯಾಗಿದೆ; ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಗಸ್ಟ್ 1, ೨೦೨೪ ರಿಂದ ಗೃಹಬಳಕೆ ಗ್ಯಾಸ್ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೀಗ ದೆಹಲಿಯಲ್ಲಿ ೧೯ ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ ೧ ಸಾವಿರದ ೭೯೭ ರೂಪಾಯಿಯಾಗಿದೆ. ಮೊದಲು ೧ ಸಾವಿರದ ೮೦೪ ರೂಪಾಯಿ ಇತ್ತು. ಈ ಗ್ಯಾಸ್ ಸಿಲಿಂಡರ್ ಮುಂಬಯಿನಲ್ಲಿ ೧ ಸಾವಿರದ ೭೪೯ ರೂಪಾಯಿ ೫೦ ಪೈಸೆಗೆ ಲಭ್ಯವಿದೆ.