ಅಜ್ಮೀರ್ (ರಾಜಸ್ಥಾನ)ನಲ್ಲಿ 2 ಬಾಂಗ್ಲಾದೇಶಿ ನುಸುಳುಕೋರರ ಬಂಧನ !

ಅಜ್ಮೀರ್ (ರಾಜಸ್ಥಾನ) – ರಾಜಾಸ್ಥಾನದ ಅಜ್ಮೀರ್ ನಲ್ಲಿ ‘ವಿಶೇಷ ಕಾರ್ಯಪಡೆ’ ಯ (ಸ್ಪೆಷಲ್ ಟಾಸ್ಕ್ ಪೊರ್ಸ)(ಎಸ್‌.ಟಿ.ಎಫ್.ನ) ಪೊಲೀಸರು ಇಬ್ಬರು ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಿದ್ದಾರೆ. ಅವರಿಬ್ಬರೂ ಅಜ್ಮೀರ್‌ನ ದರ್ಗಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಬಂಧಿತ ಬಾಂಗ್ಲಾದೇಶಿ ನುಸುಳುಕೋರರ ಹೆಸರು ಅಲಂಗೀರ್ ಮತ್ತು ಶಾಹೀನ್ ಎಂದಿದೆ. ನುಸುಳುಕೋರರನ್ನು ಹಿಡಿಯುವುದಕ್ಕಾಗಿನಡೆಸಲಾಗುತ್ತಿರುವ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ.

2012ರಲ್ಲೂ ಅಲಂಗೀರ್ ಮತ್ತು ಶಾಹೀನ್ ಸಿಕ್ಕಿಬಿದ್ದಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಂತರ ಅವರನ್ನು ದೇಶದಿಂದ ಗಡೀಪಾರು ಮಾಡಲಾಗಿತ್ತು; ಆದರೆ ಅವರು ಮತ್ತೆ ಬಾಂಗ್ಲಾದೇಶದ ಗಡಿ ದಾಟಿ ಭಾರತಕ್ಕೆ ಬಂದು ಅಜ್ಮೀರ್‌ನಲ್ಲಿ ವಾಸಿಸತೊಡಗಿದರು. ಈ ಹಿಂದೆ ಪೋಲಿಸರು ಜೈಪುರದಲ್ಲೂ ನೂರಾರು ನುಸುಳುಕೋರರನ್ನು ಹಿಡಿದಿದ್ದರು. (ಇದರಿಂದ ನುಸುಳುಕೋರರಿಗೆ ಭಾರತವು ಧರ್ಮಛತ್ರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಈ ಪರಿಸ್ಥಿತಿಯನ್ನು ಬದಲಾಯಿಸಲು ‘ಹಿಂದೂ ರಾಷ್ಟ್ರ’ವೇ ಬೇಕು ! – ಸಂಪಾದಕರು)