ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ವಿಧಾನಸಭೆಯ ಅಧ್ಯಕ್ಷ ಯು.ಟಿ ಖಾದರ್ !

ಪ್ರಯಾಗರಾಜ್ – ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಅವರು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಅವರು ನಾಗಾ ಸಾಧುಗಳನ್ನು ಭೇಟಿಯಾಗಿ ಭಾರತದ ಸಂಪೂರ್ಣ ಸಂಸ್ಕೃತಿಯ ದರ್ಶನವನ್ನು ಪಡೆದರು.

ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ. ಖಾದರ ಮಹಾಕುಂಭಮೇಳದ ಕುರಿತು ಮಾತನಾಡಿ, ಮಹಾಕುಂಭಮೇಳದಲ್ಲಿ ಭಾರತದ ಸಂಸ್ಕೃತಿ ನೋಡಲು ಸಿಗುತ್ತದೆ. ಒಬ್ಬ ವ್ಯಕ್ತಿಯಾಗಿ ನಾವು ದೇಶದ ಎಲ್ಲಾ ಸ್ಥಳಗಳಿಗೆ ಹೋಗಲು ಸಾಧ್ಯವಿಲ್ಲ; ಆದರೆ ಇಂತಹ ಮಹಾ ಕುಂಭಮೇಳದಂತಹ ಕಾರ್ಯಕ್ರಮಗಳಲ್ಲಿ ಒಂದೇ ಸ್ಥಳದಲ್ಲಿ ವೈವಿಧ್ಯಮಯ ಸಂಸ್ಕೃತಿಯ ದರ್ಶನ ಕಾಣಬಹುದು ಎಂದರು.