|

ಪ್ರಯಾಗರಾಜ್ – ಮಹಾಕುಂಭದಲ್ಲಿ ಹಿಂದೂ ರಾಷ್ಟ್ರ ಮತ್ತು ಸನಾತನ ಬೋರ್ಡ (ಮಂಡಲ) ಸ್ಥಾಪನೆಯ ಬೇಡಿಕೆ ತೀವ್ರಗೊಂಡ ನಂತರ, ಇಲ್ಲಿನ ಮಹರ್ಷಿ ಯೋಗಿ ಸಂಸ್ಥೆಯು ಭಗವಾನ ಶ್ರೀರಾಮನ ಚಿತ್ರವಿರುವ ನೋಟುಗಳನ್ನು ಚಲಾವಣೆಗೆ ತರಬೇಕೆಂದು ಒತ್ತಾಯಿಸಿದೆ. ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಆಗಿದ್ದಾಗ ಈ ಬೇಡಿಕೆಯನ್ನು ಮಾಡಲಾಗಿತ್ತು; ಆದರೆ, ಆ ಸಮಯದಲ್ಲಿ, ಭಾರತದಲ್ಲಿ ಎರಡು ರೀತಿಯ ಕರೆನ್ಸಿಯನ್ನು ಬಳಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿತ್ತು. ನೆದರ್ಲ್ಯಾಂಡ್ಸ್‌ನಲ್ಲಿ ಶ್ರೀ ರಾಮನ ಚಿತ್ರವನ್ನು ವಿನ್ಯಾಸಗೊಳಿಸಲು ಮತ್ತು ಪ್ರಸಾರ ಮಾಡಲು ‘ದಿ ಗ್ಲೋಬಲ್ ಕಂಟ್ರಿ ಆಫ್ ವರ್ಲ್ಡ್ ಪೀಸ್’ ಜೊತೆ ಸಹಕರಿಸಿದ ಅದೇ ಸಂಸ್ಥೆ ಈ ಬೇಡಿಕೆಯನ್ನು ಪುನರುಚ್ಚರಿಸಿದೆ. ಈಗ ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಹಿರಿಯ ಅರ್ಥಶಾಸ್ತ್ರಜ್ಞರು ಆರ್‌ಬಿಐ ಅನ್ನು ಭೇಟಿ ಮಾಡಲು ಯೋಜಿಸುತ್ತಿದ್ದಾರೆ. ಈ ಬೇಡಿಕೆಯನ್ನು ಮೋದಿ ಸರಕಾರ ಗಮನಿಸಬಹುದು ಎಂದು ಸಂಸ್ಥೆ ಆಶಿಸುತ್ತದೆ. ಶ್ರೀರಾಮನ ಚಿತ್ರವಿರುವ ಈ ಕರೆನ್ಸಿಯನ್ನು ಹಾಲೆಂಡ್, ಜರ್ಮನಿ ಸೇರಿದಂತೆ 30 ದೇಶಗಳಲ್ಲಿ ಬಳಸಲಾಗುತ್ತಿತ್ತು. ಈ ಸಂಸ್ಥೆಯು ಅತ್ಯಂತ ಶ್ರೀಮಂತ ಆಧ್ಯಾತ್ಮಿಕ ಸಂಸ್ಥೆಯಾಗಿದ್ದು, ಮಹರ್ಷಿ ಮಹೇಶ್ ಯೋಗಿಯೊಂದಿಗೆ ಸಂಬಂಧ ಹೊಂದಿದೆ. ಈ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವ ಮಹರ್ಷಿ ಸಂಸ್ಥಾನದ ಆಶ್ರಮವು ಪ್ರಯಾಗರಾಜ್‌ನ ಮಹಾಕುಂಭದ ಅರೆಲ್‌ನಲ್ಲಿದೆ.
ಸಂಸ್ಥೆಯ ಮುಖ್ಯಸ್ಥ ಬ್ರಹ್ಮಚಾರಿ ಗಿರಿಶ ಮಹಾರಾಜ ಇವರು ಮಾತನಾಡುತ್ತಾ, “ಎಲ್ಲರೂ ರೂಪಾಯಿ, ಡಾಲರ್ ಮತ್ತು ಯೂರೋಗಳ ಬಗ್ಗೆ ಹೆಚ್ಚು ಮಾತನಾಡುತ್ತಾರೆ”. ಎಲ್ಲರಿಗೂ ಸಂಪತ್ತು ಬೇಕು. ಆದರೆ, ಮಹರ್ಷಿ ಮಹೇಶ್ ಯೋಗಿ ಇವರಿಗೆ, ಜನರು ದಿನವಿಡೀ ರಾಮ-ರಾಮ ಜಪ ಮಾಡುವುದು ಹೇಗೆ? ಆದ್ದರಿಂದ, ಅವರು ರಾಮ ಹೆಸರಿನ ಕರೆನ್ಸಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದರು. ಇದರ ಬಗ್ಗೆ ಮುಂದುವರೆದು, ತಜ್ಞರಿಂದ ಸಲಹೆ ಪಡೆಯಲಾಯಿತು. ರಾಮಮುದ್ರೆಯನ್ನು ಮೊದಲು ನೆದರ್‌ಲ್ಯಾಂಡ್ಸ್‌ನಲ್ಲಿ ಮುದ್ರಿಸಲಾಯಿತು. ನಮ್ಮ ಸಂಸ್ಥೆ ಅದರಲ್ಲಿ ಭಾಗಿಯಾಗಿತ್ತು. 1 ರಾಮ ಮುದ್ರೆಯ ಮೌಲ್ಯವನ್ನು $10 ಕ್ಕೆ ನಿಗದಿಪಡಿಸಲಾಯಿತು. ಅದಾದ ನಂತರ, ಹಾಲೆಂಡ್, ಜರ್ಮನಿ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ಸೇರಿದಂತೆ 30 ದೇಶಗಳಲ್ಲಿ ರಾಮಮುದ್ರೆ ನಡೆಯಿತು. ಇದು ಒಂದು ದೊಡ್ಡ ಮತ್ತು ಒಳ್ಳೆಯ ಪ್ರಯೋಗವಾಗಿತ್ತು. ಅನೇಕ ಜನರು ಅದನ್ನು ಇಷ್ಟಪಟ್ಟರು. ನಂತರ ಅವರು ಭಾರತದಲ್ಲಿ ಅಂತಹ ಕರೆನ್ಸಿಯನ್ನು ನಡೆಸಲು ಪ್ರಯತ್ನಿಸಿದರು; ಆದರೆ ಯಶಸ್ವಿಯಾಗಲಿಲ್ಲ. ಈಗ, ಶ್ರೀ ರಾಮನ ಚಿತ್ರವಿರುವ ಕರೆನ್ಸಿಯನ್ನು ಪರಿಚಯಿಸುವ ಬಗ್ಗೆ ಚರ್ಚೆಗಳು ಪುನರಾರಂಭಗೊಂಡಿವೆ. ಹಣಕಾಸು ಮೇಲ್ವಿಚಾರಣೆ ಮಾಡುವ ಸಂಸ್ಥೆಯ ಹಿರಿಯ ಜನರು ಸರಕಾರದೊಂದಿಗೆ ಚರ್ಚಿಸುತ್ತಾರೆ. ಈ ಕರೆನ್ಸಿ ಸರಕಾರಕ್ಕೆ ಹೇಗೆ ಉಪಯುಕ್ತವಾಗಿದೆ ಎಂಬುದನ್ನು ನಾವು ವಿವರಿಸಲಿದ್ದೇವೆ. ಇದು ಒಂದು ಅಭಿವೃದ್ಧಿ ಕರೆನ್ಸಿಯಾಗಿದ್ದು, ಇದು ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಇರಲಿದೆ.” ಎಂದು ಹೇಳಿದೆ.