ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 112 ಭಾರತೀಯರು ಭಾರತಕ್ಕೆ ಮರಳಿದರು

ಅಮೃತಸರ (ಪಂಜಾಬ್) – ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರ ಮೂರನೇ ತಂಡ ಫೆಬ್ರವರಿ 16 ರಂದು ರಾತ್ರಿ 10 ಗಂಟೆಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಅಮೇರಿಕಾದ ವಾಯುದಳದ ಸಿ-17 ಎ ಗ್ಲೋಬಮಾಸ್ಟರ್ ವಿಮಾನದಲ್ಲಿ 112 ಭಾರತೀಯರು ತಲುಪಿದರು. ಇದರಲ್ಲಿ ಹರಿಯಾಣದ 44 ಮತ್ತು ಪಂಜಾಬ್‌ನ 33 ಜನರು ಇದ್ದಾರೆ. ವಿಮಾನ ನಿಲ್ದಾಣದಲ್ಲಿ ಅವರನ್ನು ವಿಚಾರಣೆ ನಡೆಸಲಾಯಿತು. ಒಟ್ಟು 18 ಸಾವಿರ ಭಾರತೀಯರನ್ನು ಅಮೆರಿಕದಿಂದ ವಾಪಸ್ ಕಳುಹಿಸಲಾಗುವುದು. ಇದರಲ್ಲಿ 5 ಸಾವಿರ ಜನರು ಹರಿಯಾಣದವರು ಎಂದು ಅಂದಾಜಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 335 ಭಾರತೀಯರನ್ನು ಸ್ವದೇಶಕ್ಕೆ ವಾಪಸ್ಸು ಕಳುಹಿಸಲಾಗಿದೆ.