ಅಮೇರಿಕಾದಲ್ಲಿ ಟ್ರಂಪ್ ಸರಕಾರದಿಂದ 9 ಸಾವಿರದ 500 ಸರಕಾರಿ ನೌಕರರ ಅಮಾನತ್ತು !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಸರಕಾರವು 9 ಸಾವಿರದ 500 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಟ್ರಂಪ್ ಅವರ ಸಲಹೆಗಾರ ಎಲೋನ್ ಮಸ್ಕ್ ಅವರು ಸರಕಾರಿ ಉದ್ಯೋಗಗಳನ್ನು ಕಡಿತಗೊಳಿಸುವ ಅಭಿಯಾನವನ್ನು ಕೈಗೆತ್ತಿಕೊಂಡಿದ್ದಾರೆ. ವಜಾಗೊಂಡ ನೌಕರರುಗಳಲ್ಲಿ ಬಹುತೇಕ ನೌಕರರು ಸರಕಾರಿ ಭೂಮಿಯಲ್ಲಿರುವ ಉದ್ಯಮಗಳ ನಿರ್ವಹಣೆಯನ್ನು ನೋಡಿಕೊಳ್ಳುವುದು ಮತ್ತು ಮಾಜಿ ಸೈನಿಕರ ಆರೋಗ್ಯ ಸೇವೆ ನೋಡಿಕೊಳ್ಳುವುದು ಮುಂತಾದ ಸೇವೆಗಳಿಗೆ ಸಂಬಂಧಿಸಿದ್ದರು. ಅಮೇರಿಕಾವು ಈ ಮೊದಲೇ 75 ಸಾವಿರ ಕಾರ್ಮಿಕರಿಗೆ ನಿವೃತ್ತಿಯನ್ನು ಪ್ರಸ್ತಾಪಿಸುವ ಮೂಲಕ ಕೆಲಸದಿಂದ ವಜಾಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಸಂಪಾದಕೀಯ ನಿಲುವು

ರಾಷ್ಟ್ರೀಯ ಹಿತಾಸಕ್ತಿಗಾಗಿ ಕಠಿಣ ನಿರ್ಧಾರಗಳನ್ನು ಹೇಗೆತೆಗೆದುಕೊಳ್ಳಬೇಕು, ಇದನ್ನು ಟ್ರಂಪ್‌ರಿಂದ ಕಲಿಯಬೇಕು!