ಪ್ರಯಾಗರಾಜ ಕುಂಭಮೇಳ 2025
ಪ್ರಯಾಗರಾಜ್, ಜನವರಿ 28 (ಸುದ್ದಿ) – ಮಹಾಕುಂಭವು ಶ್ರದ್ಧೆಯ ಮಹಾನ್ ಯಜ್ಞಕ್ರಿಯೆ ಆಗಿದೆ. ಮಹಾಕುಂಭವು ನಮ್ಮ ಸಂಸ್ಕೃತಿ ಮತ್ತು ಶ್ರದ್ಧೆಯ ಶ್ರೇಷ್ಠ ಸಂಕೇತವಾಗಿದೆ. ಈ ಅಪರೂಪದ ಸಂಯೋಜನೆ 144 ವರ್ಷಗಳ ನಂತರ ಬಂದಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಕುಂಭಮೇಳದಲ್ಲಿ ಸ್ನಾನ ಮಾಡಬೇಕು. ತ್ರಿವೇಣಿ ಸಂಗಮದ ನೀರು ಅಮೃತದಷ್ಟೇ ಶುದ್ಧ ಮತ್ತು ಜೀವದಾಯಕವಾಗಿದೆ ಎಂದು ಭಾಜಪ ಸಂಸದ ಮತ್ತು ನಟ ಶ್ರೀ. ಅರುಣ ಗೋವಿಲ್ ಇವರು ಜನವರಿ 27 ರಂದು ಹೇಳಿದರು. ಅವರು ಕುಂಭ ಕ್ಷೇತ್ರದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ನಂತರ ಮೇಲಿನ ಹೇಳಿಕೆಯನ್ನು ನೀಡಿದರು.
ಅವರು ಮಾತು ಮುಂದುವರೆಸಿ, “ಇಂದು ನಮಗೆ ಈ ಅಮೃತದಂತಹ ನೀರಿನಲ್ಲಿ ಸ್ನಾನ ಮಾಡುವ ಅವಕಾಶ ಸಿಕ್ಕಿತು, ಇದು ನಮಗೆ ಒಂದು ದೊಡ್ಡ ಭಾಗ್ಯವೇ ಆಗಿದೆ”. ಇಂದಿನ ಯುವ ಪೀಳಿಗೆಯೂ ಧರ್ಮ ಮತ್ತು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಸಾಧಿಸಲು ಬಯಸುತ್ತದೆ, ಇದು ನಮ್ಮ ಭವಿಷ್ಯಕ್ಕೆ ಸಕಾರಾತ್ಮಕ ಸಂಕೇತವಾಗಿದೆ. “ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳನ್ನು ಸಂರಕ್ಷಿಸಲು ಮತ್ತು ಹೆಚ್ಚಿಸಲು ಮಹಾ ಕುಂಭದಂತಹ ಕಾರ್ಯಕ್ರಮಗಳು ಮುಖ್ಯವಾಗಿವೆ.” ಎಂದು ಹೇಳಿದರು.