ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯಮ್ ಸ್ವಾಮಿಯವರ ಬೇಡಿಕೆ
ಸೂರತ (ಗುಜರಾತ) – ನೇತಾಜಿ ಸುಭಾಷ ಚಂದ್ರ ಬೋಸ್ ತೈವಾನ್ನಲ್ಲಿ ಹಠಾತ್ತನೆ ಸಾವನ್ನಪ್ಪಲಿಲ್ಲ. ಬದಲಾಗಿ, ಅವರನ್ನು ಕೊಲ್ಲಲಾಯಿತು. ಆಗಿನ ಸರಲಾರ ಸಾಕ್ಷ್ಯಗಳನ್ನು ದಮನಗೊಳಿಸಿ ದೇಶದ ಜನರಿಗೆ ಸತ್ಯವನ್ನು ಮರೆಮಾಡಿತು. ಈ ಪ್ರಕರಣದ ಎಲ್ಲಾ ಸಾಕ್ಷ್ಯಗಳನ್ನು ಬಹಿರಂಗಪಡಿಸಬೇಕೆಂದು ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಅದನ್ನು ಬಾರಡೋಲಿಯಲ್ಲಿ ಆಗ್ರಹಿಸಿದರು. ‘ರನ್ ಟು ರಿಮೆಂಬರ್ ಸುಭಾಷ ಸಂಗ್ರಾಮ್'(ಸುಭಾಷಚಂದ್ರ ಬೋಸರ ಸಂಗ್ರಾಂದ ನೆನಪಿಗಾಗಿ ಓಟ) ಮ್ಯಾರಥಾನ್ ಉದ್ಘಾಟಿಸಲು ಅವರು ಇಲ್ಲಿಗೆ ಬಂದಿದ್ದರು. ಇದರಲ್ಲಿ ಅಂದಾಜು 2 ಸಾವಿರ ಓಟಗಾರರು ಭಾಗವಹಿಸಿದ್ದರು.
ಡಾ. ಸ್ವಾಮಿಯವರು ಹೇಳಿದರು,
1. ಆಗಿನ ಪ್ರಧಾನಿ ನೆಹರೂ ಅವರ ಆಪ್ತ ಕಾರ್ಯದರ್ಶಿಯವರು ಹೇಳಿದ್ದರು, ನೆಹರೂರವರು ೧೯೪೫ ರಲ್ಲಿ ರಾತ್ರಿ ನನಗೆ ದೂರವಾಣಿ ಕರೆ ಮಾಡಿ ಆಗಿನ ಬ್ರಿಟಿಷ್ ಪ್ರಧಾನಿಗೆ ಪತ್ರ ಬರೆಯಲು ಹೇಳಿದರು. ಅವರು ನನಗೆ ಪತ್ರದಲ್ಲಿ “ಸುಭಾಷ್ ಚಂದ್ರ ಬೋಸ್ ಇನ್ನೂ ಜೀವಂತವಾಗಿದ್ದಾರೆ ಮತ್ತು ನಮ್ಮ ವಶದಲ್ಲಿದ್ದಾರೆ. ಮುಂದೆ ಏನು ಮಾಡಬೇಕೆಂದು ನಾವು ಒಟ್ಟಾಗಿ ನಿರ್ಧರಿಸಬೇಕು.’ಎಂದು ಬರೆಯಲು ಹೇಳಿದ್ದರು.
2. ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಸತ್ಯ ಹೊರಬರಬೇಕು. ಅವರು ತೈವಾನ್‌ನಲ್ಲಿ ಸಾಯಲಿಲ್ಲ. ಇಲ್ಲಿ ಯಾವುದೇ ವಿಮಾನ ಅಪಘಾತಕ್ಕೀಡಾಗಿಲ್ಲ ಎಂದು ಅಮೇರಿಕ ಕೂಡ ಹೇಳಿತ್ತು.
3. ನಾವು ಯಾವತ್ತೂ ರಷ್ಯಾವನ್ನು ಆ ವಿಷಯದ ಬಗ್ಗೆ ದಾಖಲೆಗಳನ್ನು ಒದಗಿಸುವಂತೆ ಎಂದಿಗೂ ಕೇಳಲಿಲ್ಲ. ದಾಖಲೆಗಳನ್ನು ತರಿಸಿಕೊಂಡು ತನಿಖೆ ನಡೆಸಬೇಕಿತ್ತು. ನರೇಂದ್ರ ಮೋದಿ ತನಿಖೆ ನಡೆಸುತ್ತಾರೆಂದು ನಾನು ಆಶಿಸಿದ್ದೆ; ಆದರೆ ಅವರು ಕೂಡ ತನಿಖೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಿಲ್ಲ.
4. ನಾನು ಕೇಂದ್ರ ಸಚಿವನಾಗಿದ್ದಾಗ, ಅಂದಿನ ಪ್ರಧಾನಿ ಚಂದ್ರಶೇಖರ ಅವರು ನನಗೆ ನೇರವಾಗಿ, ನೀವು ಈ ಅಂಶವನ್ನು ಮಂಡಿಸಿದರೆ, ಗದ್ದಲವಾಗುತ್ತದೆ ಎಂದು ಹೇಳಿದ್ದರು. ಎಲ್ಲಾ ಕಾಂಗ್ರೆಸ್ಸಿಗರು ಭಯಭೀತರಾಗಿದ್ದಾರೆ. ನಾನು ಈಗಲೂ ಈ ವಿಷಯದ ಬಗ್ಗೆ ಯಾರಾದರೂ ವಾದಿಸಲು ಬಯಸಿದರೆ, ಮುಂದುವರಿಯಿರಿ, ನಾನು ಸಿದ್ಧನಿದ್ದೇನೆ ಎಂದು ಹೇಳುತ್ತೇನೆ. ದಾಖಲೆಗಳು ಎಲ್ಲಿವೆ ಎಂದು ನಾನು ನಿಮಗೆ ತೋರಿಸಬಲ್ಲೆ. ದಾಖಲೆಗಳನ್ನು ತೆಗೆಸಿರಿ ಮತ್ತು ಅವುಗಳನ್ನು ಬಹಿರಂಗಗೊಳಿಸಿರಿ.