ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ತಾಜಗಂಜ್ ನ ನಾಗಲಪಾಯಿಮಾ ಮಸೀದಿಯಲ್ಲಿ ಓರ್ವ ಮಹಿಳೆಯ ಹತ್ಯೆಯಾಗಿರುವ ಘಟನೆ ಬಹಿರಂಗವಾಗಿದೆ. ಗುರುತು ಸಿಗಬಾರದು ಎಂದು ಮಹಿಳೆಯ ತಲೆಯನ್ನು ಕಲ್ಲಿನಿಂದ ಚಚ್ಚಿದ್ದರು. ಮೃತ ಮಹಿಳೆಯ ಪರ್ಸನಲ್ಲಿ ಸಿಕ್ಕ ಛಾಯಾಚಿತ್ರದಿಂದ ಅವಳ ಗುರುತು ಸಿಕ್ಕಿದೆ. ಮಹಿಳೆ ಅರ್ಧನಗ್ನ ಸ್ಥಿತಿಯಲ್ಲಿದ್ದಳು. ಅವಳ ಮೇಲೆ ಅತ್ಯಾಚಾರ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸುದ್ದಿ ಸಂಸ್ಥೆಯೊಂದು ಪ್ರಕಟಿಸಿದ ವರದಿಯ ಪ್ರಕಾರ, ಘಟನೆ ನಡೆದ ಸ್ಥಳದಲ್ಲಿ ದೊರೆತ ಪರ್ಸ್‌ನಲ್ಲಿ ಯುವಕನೊಬ್ಬನ ಛಾಯಾಚಿತ್ರ ಪತ್ತೆಯಾಗಿದೆ. ಪೊಲೀಸರು ತನಿಖೆ ಆರಂಭಿಸಿದಾಗ ಆ ಯುವಕನ ಹೆಸರು ಅಮೀರ್ ಖಾನ್ ಎಂದು ತಿಳಿದು ಬಂದಿದೆ. ಪೊಲೀಸರು ಅಮೀರ್ ಖಾನ್ ಮನೆ ತಲುಪಿದಾಗ , ಅಮೀರನ ತಾಯಿಯು ಮಾತನಾಡಿ, ಅಮೀರನ ಛಾಯಾಚಿತ್ರವನ್ನು ಅವಳೇ ಮಹಿಳೆಗೆ ಕೊಟ್ಟಿರುವುದಾಗಿ ತಿಳಿಸಿದ್ದಳು. ಆ ಮಹಿಳೆ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದು, ಅವಳಿಗೆ ಭೂತಬಾಧೆ ಮಾಡುವವರ ಪರಿಚಯವಿತ್ತು. ಅಮೀರನ ತಾಯಿಯ ಹೇಳಿಕೆಯಂತೆ, ಅವಳ ಮಗನಿಗೆ ಒಳ್ಳೆಯ ನೌಕರಿ ಸಿಗುವಂತೆ ಅವನ ಮೇಲೆ ಏನಾದರೂ ಮಾಟ ಮಾಡಬೇಕೆಂದು ಅವಳಿಗೆ ಕೊಟ್ಟಿದ್ದಳು.
A woman’s half-naked body found in a mosque in Agra: Suspected of rape and murder!
Had such an event taken place in a temple, the progressives would have created hue and cry!
Now that this incident has occurred in a mosque, be sure that they will not utter a word!#CrimeNews… pic.twitter.com/ISTUhhivNH
— Sanatan Prabhat (@SanatanPrabhat) May 20, 2024
ಪೊಲೀಸರು ಮೃತ ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮೃತ ಮಹಿಳೆಗೆ 35 ವರ್ಷ ವಯಸ್ಸಾಗಿದ್ದು, ಅವಳ ವಿವಾಹವಾಗಿತ್ತು. ಅವಳ ಗಂಡ ಅವಳನ್ನು ಬಿಟ್ಟು ಹೋಗಿದ್ದನು. ಅವಳಿಗೆ 15 ವರ್ಷದ ಓರ್ವ ಮಗಳಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಪಿಯೂಷ್ ಕಾಂತ್ ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಘಟನೆಯು ದೇವಸ್ಥಾನದಲ್ಲಿ ನಡೆದಿದ್ದರೆ, ಇಲ್ಲಿಯವರೆಗೆ ಪುರೋಗಾಮಿಗಳು ಆಕಾಶ-ಪಾತಾಳ ಒಂದು ಮಾಡುತ್ತಿದ್ದರು. ಈಗ ಈ ಘಟನೆ ಮಸೀದಿಯಲ್ಲಿ ನಡೆದಿರುವುದರಿಂದ ಅವರು ಏನೂ ಮಾತನಾಡುವುದಿಲ್ಲ ಎನ್ನುವುದನ್ನು ತಿಳಿಯಿರಿ. |