ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಶನಲ್‌ನ ವರದಿಯ ಪ್ರಕಾರ ಭಾರತದಲ್ಲಿ ಭ್ರಷ್ಟಾಚಾರದಲ್ಲಿ ಹೆಚ್ಚಳ !
ನವದೆಹಲಿ – 2023 ರ ‘ಟ್ರಾನ್ಸ್ಪರೆನ್ಸಿ ಇಂಟರನ್ಯಾಷನಲ್’ ವರದಿಯ ಪ್ರಕಾರ, ಭ್ರಷ್ಟಾಚಾರದಲ್ಲಿ ಜಗತ್ತಿನ 180 ದೇಶಗಳಲ್ಲಿ ಭಾರತವು 93 ನೇ ಸ್ಥಾನದಲ್ಲಿದೆ ಎಂದು ತೋರಿಸಲಾಗಿದೆ. 2022ರಲ್ಲಿ ಭಾರತ 85ನೇ ಸ್ಥಾನದಲ್ಲಿತ್ತು. ಇದರರ್ಥ ಭಾರತದಲ್ಲಿ 2022 ಕ್ಕೆ ಹೋಲಿಸಿದರೆ 2023 ರಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆಯೆಂದು ಕಂಡು ಬರುತ್ತಿದೆ. ಯಾವ ದೇಶದಲ್ಲಿ ಭ್ರಷ್ಟಾಚಾರ ಕಡಿಮೆ ಇದೆಯೋ, ಅವುಗಳ ಹೆಸರು ಮೊದಲ ಸ್ಥಾನದಲ್ಲಿರುತ್ತದೆ ಮತ್ತು ಯಾವ ದೇಶದಲ್ಲಿ ಭ್ರಷ್ಟಾಚಾರ ಅಧಿಕವಿದೆಯೋ, ಅವುಗಳ ಹೆಸರು ಕೆಳಗೆ ತೋರಿಸಲಾಗುತ್ತದೆ. ಇದಕ್ಕನುಸಾರವಾಗಿ ಪಾಕಿಸ್ತಾನದ ಕ್ರಮಾಂಕ 133 ನೇ ಸ್ಥಾನದಲ್ಲಿದೆ,ಹಾಗೆಯೇ ಚೀನಾ 76ನೇ ಸ್ಥಾನದಲ್ಲಿದೆ. ಸೋಮಾಲಿಯಾ ಅತ್ಯಂತ ಭ್ರಷ್ಟ ರಾಷ್ಟ್ರವಾಗಿ ಅಂದರೆ 180ನೇ ಸ್ಥಾನದಲ್ಲಿದೆ.
ಈ ಕ್ರಮಾಂಕಕ್ಕಾಗಿ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ತಜ್ಞರು ಪ್ರತಿಯೊಂದು ದೇಶದಲ್ಲಿ ಸಾರ್ವಜನಿಕ ವಲಯದ ಭ್ರಷ್ಟಾಚಾರವನ್ನು ಮೌಲ್ಯಮಾಪನ ಮಾಡುತ್ತಾರೆ. ತದ ನಂತರ, ಪ್ರತಿ ದೇಶಕ್ಕೆ 0 ರಿಂದ 100 ಗುಣಗಳನ್ನು ನೀಡಲಾಗುತ್ತದೆ. ಯಾವ ದೇಶದಲ್ಲಿ ಭ್ರಷ್ಟಾಚಾರ ಇದೆಯೋ, ಅಷ್ಟು ಕಡಿಮೆ ಗುಣಗಳನ್ನು ನೀಡುತ್ತಾರೆ. ಅದರ ಆಧಾರದ ಮೇಲೆ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ. 2023 ರ ವರದಿಯಲ್ಲಿ, ಭಾರತವು 39 ಗುಣಗಳನ್ನು ಪಡೆದಿದ್ದು, ವರ್ಷ 2022 ರಲ್ಲಿ ಅದಕ್ಕೆ 40 ಗುಣಗಳು ಸಿಕ್ಕಿದೆ. ಕೇವಲ ಒಂದು ಗುಣದಿಂದ ಭಾರತವು 8 ನೇ ಸ್ಥಾನಕ್ಕೆ ಕುಸಿದಿದೆ.
ಸಂಪಾದಕೀಯ ನಿಲುವುಭಾರತವು 85 ನೇ ಸ್ಥಾನದಲ್ಲಿದ್ದುದು ಏನೂ ಸಮಾಧಾನದ ವಿಷಯವಾಗಿರಲಿಲ್ಲ; ಅಧರೆ ಅದರೆಡೆಗೆ ಗಂಭೀರತೆಯಲ್ಲಿ ನೋಡಿರದೇ ಇದ್ದುದರಿಂದ ಮತ್ತು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮವಾಗದೇ ಇರುವುದರಿಂದಲೇ ಭಾರತದಲ್ಲಿ ಭ್ರಷ್ಟಾಚಾರದಲ್ಲಿ ಹೆಚ್ಚಳವಾಗಿದೆಯೆನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ, ಭಾರತದಲ್ಲಿ ಭ್ರಷ್ಟಾಚಾರ ಗಂಭೀರ ಸಮಸ್ಯೆಯಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಭ್ರಷ್ಟರಿಗೆ ಮರಣದಂಡನೆ ವಿಧಿಸಿದರೆ ಮಾತ್ರ ಈ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ! |