ಠಾಣೆ – ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶ್ರೀ ಮಲಂಗಾಡದ ಬಗ್ಗೆ ನೀಡಿದ ಭರವಸೆಯನ್ನು ಅವರು ಖಂಡಿತವಾಗಿ ಪೂರೈಸುತ್ತಾರೆ. ಶೀಘ್ರದಲ್ಲೇ ಜನರ ಭಾವನೆಗಳನ್ನು ಈಡೇರಿಸಲಾಗುವುದು ಎಂದು ಶಿವಸೇನೆಯ ಸಂಸದ ಡಾ. ಶ್ರೀಕಾಂತ ಶಿಂದೆ ಇವರು ಭರವಸೆ ನೀಡಿದ್ದಾರೆ. ಕಲ್ಯಾಣ ತಾಲೂಕಿನ ಶ್ರೀ ಮಲಂಗಡ ಸಮೀಪದ ಉಸಾತಣೆಯಲ್ಲಿ ಹರಿನಾಮ ಸಪ್ತಾಹ ನಡೆಯುತ್ತಿದೆ. ಅಲ್ಲಿನ ವಾರಕರಿಯರನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಭರವಸೆ ನೀಡಿದರು. ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ‘ಸಾರ್ವಜನಿಕ ಭಾವನೆ ಅರಿತು ಶೀಘ್ರವೇ ಶ್ರೀ ಮಲಂಗಡ ಮುಕ್ತ ಮಾಡುವುದಾಗಿ’ ಭರವಸೆ ನೀಡಿದ್ದರು. ಇದರ ವಿರುದ್ಧ ಎಂ.ಐ.ಎಂ.ನ ಓವೈಸಿ ಕೂಡ ಪ್ರತಿಕ್ರಿಯಿಸಿದ್ದರು.
ಕಳೆದ ಹಲವು ವರ್ಷಗಳಿಂದ ಮಲಂಗಡದ ಮೇಲೆ ಅತಿಕ್ರಮಣ !
ನವನಾಥರ ಪೈಕಿ 2 ನಾಥರ ಸಮಾಧಿಗಳು ಹಾಗೂ ಮುಖ್ಯವಾಗಿ ಮಚ್ಚಿಂದ್ರನಾಥ ಇವರ ಸಮಾಧಿಯಾಗಿರುವ ಶ್ರೀ ಮಲಂಗಡ್‌ನಲ್ಲಿ ಹಾಜಿಮಲಾಂಗ್ ಎಂಬ ಹೆಸರಿನ ದರ್ಗಾವನ್ನು ನಿರ್ಮಿಸಲಾಗಿದೆ, ಹಿಂದೂಗಳು ಇಲ್ಲಿಗೆ ಹೋಗಿ ಪೂಜೆ, ಆರತಿ ಮಾಡಲು ಸಾಕಷ್ಟು ವಿರೋಧವ್ಯಕ್ತವಾಗುತ್ತಿದೆ, ಜೊತೆಗೆ ಅಲ್ಲಿ ಹಲವು ವರ್ಷಗಳಿಂದ ಈ ಹೋರಾಟ ನಡೆಯುತ್ತಿದೆ. 13 ನೇ ಶತಮಾನದಲ್ಲಿ ಯೆಮನ್‌ನಿಂದ ಬಂದ ಸೂಫಿ ಫಕೀರ ಹಾಜಿ ಅಬ್ದುಲ್ ರಹಮಾನ್ ಶಾ ಮಲಾಂಗ್ ಅಲಿಯಾಸ್ ಮಲಾಂಗ್ ಬಾಬಾ ಅವರ ಕಬ್ರವನ್ನು ಈ ಸ್ಥಳದಲ್ಲಿ ನಿರ್ಮಿಸಲಾಗಿದೆ. 80ರ ದಶಕದಿಂದಲೂ ಶಿವಸೇನೆ ಈ ಬಗ್ಗೆ ಹೋರಾಟ ನಡೆಸುತ್ತಿದೆ. ಈ ಸೂತ್ರ ನ್ಯಾಯಾಲಯದ ಮೆಟ್ಟಿಲೇರಿದೆ.