ದೆಹಲಿಯಲ್ಲಿನ ಜೆ.ಎನ್.ಯು. ಕಾಲೇಜಿನ ಗೋಡೆಗಳ ಮೇಲೆ ‘ಬಾಬ್ರಿ ಮತ್ತೆ ಕಟ್ಟುವೆವು’ ಎಂಬ ಬರಹ !

ದೆಹಲಿ – ದೆಹಲಿಯಲ್ಲಿನ ಕುಪ್ರಸಿದ್ಧ ಜವಾಹರಲಾಲ ನೆಹರು ಕಾಲೇಜಿನ ಬಂದು ಗೋಡೆಯ ಮೇಲೆ ಬಾಬರಿ ಮತ್ತೆ ಕಟ್ಟುವೆವು, ಎಂದು ಬರೆದಿರುವುದು ಬೆಳಕಿಗೆ ಬಂದಿದೆ. ಅದರ ಪಕ್ಕಕ್ಕೆ ಕಾಂಗ್ರೆಸ್ಸಿನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ ಹೆಸರು ಕೂಡ ಬರೆಯಲಾಗಿದೆ. ಅದರ ಕೆಳಗೆ ಡಿಸೆಂಬರ್ ೬ ಎಂದು ತಾರೀಕು ಬರೆಯಲಾಗಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಕಾಲೇಜಿನ ಆಡಳಿತದಿಂದ ತಕ್ಷಣ ಗೋಡೆಯ ಮೇಲಿನ ವಿಷಯ ಅಳಿಸುವುದಕ್ಕಾಗಿ ಗೋಡೆಗೆ ಬಣ್ಣ ಹಚ್ಚಿದ್ದಾರೆ.

೧. ಬಾಬ್ರಿಯ ಘೋಷಣೆ ಬರೆದ ನಂತರ ಕಾಲೇಜ್ ಆಡಳಿತದಿಂದ ಎಲ್ಲಾ ಗೋಡೆಗಳ ಮೇಲಿನ ಘೋಷಣೆ ಮತ್ತು ಭೀತ್ತಿ ಪತ್ರಕಗಳನ್ನು ತೆಗೆದು ಹಾಕುವ ಆದೇಶ ನೀಡಿದೆ. ಕಾಲೇಜ ಸಂಕೀರ್ಣದಲ್ಲಿ ಸತರ್ಕತೆಯ ಎಚ್ಚರಿಕೆ ನೀಡಲಾಗಿದ್ದು ಈ ರೀತಿ ಮತ್ತೆ ಮತ್ತೆ ನಡೆಯುವುದರಿಂದ ಅದರ ತನಿಖೆ ನಡೆಸುವುದಕ್ಕಾಗಿ ಒಂದು ಸಮಿತಿ ಸ್ಥಾಪಿಸಲಾಗಿದೆ. ಅದರ ಜೊತೆಗೆ ಎಲ್ಲಾ ವಿಭಾಗದ ಸುರಕ್ಷಾ ವ್ಯವಸ್ಥೆ ಹೆಚ್ಚಿಸುವ ಆದೇಶ ನೀಡಲಾಗಿದೆ.

೨. ಕಾಲೇಜಿನ ಆಡಳಿತದಲ್ಲಿನ ಹಿರಿಯ ಅಧಿಕಾರಿಗಳು, ಎಲ್ಲಾ ವಿಭಾಗದ ಮುಖ್ಯಸ್ಥರ ಜೊತೆಗೆ ಚರ್ಚಿಸಿ ಅವರಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಸಂದರ್ಭದಲ್ಲಿ ಪರಿಶೀಲಿಸಲು ಹೇಳಲಾಗಿದೆ. ಪರಿಶೀಲನೆಯ ವರದಿ ಒಂದು ವಾರದಲ್ಲಿ ಪ್ರಸ್ತುತಪಡಿಸುವ ಆದೇಶ ಕೂಡ ಸಮಿತಿಗೆ ನೀಡಲಾಗಿದೆ ಎಂದು ಹೇಳಿದರು.

ಈ ಬರಹಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ! – ಎನ್.ಎಸ್.ಯು.ಐ.’ ನ ಕಳ್ಳಾಟ

ಇನ್ನೊಂದು ಕಡೆ ಎನ್.ಎಸ್.ಯು.ಐ. ನ ಜೆ.ಎನ್.ಯು ದಲ್ಲಿನ ಅಧ್ಯಕ್ಷ ಸುಧಾಂಶು ಶೇಖರ ಇವರು ತೇಪೆ ಹಾಕುತ್ತಾ, ಈ ಗೋಡೆಯ ಮೇಲೆ ನಮ್ಮ ಸಂಘಟನೆಯ ಹೆಸರು ಕಪ್ಪು ಮಸಿಯಲ್ಲಿ ಮೊದಲಿನಿಂದಲೇ ಬರೆಯಲಾಗಿತ್ತು. ಅದರ ಮೇಲೆ ಯಾರೋ ಕೆಂಪು ಮಸಿ ಬಳಸಿ ಈ ವಿವಾದಿತ ಬರಹ ಬರೆದಿದ್ದಾರೆ. ಅದರ ಜೊತೆಗೆ ನಮ್ಮ ಯಾವುದೇ ಸಂಬಂಧವಿಲ್ಲ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಸಂಪಾದಕರ ನಿಲುವು

* ಈ ಕಾಲೇಜಿನಲ್ಲಿ ಭಾರತ ಮತ್ತು ಹಿಂದೂ ವಿರೋಧದಲ್ಲಿ ವಿಷಕಾರುವ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತುಂಬಿದ್ದರೆ, ಅಲ್ಲಿ ಹೀಗೆ ನಡೆದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ ?

* ಇಂತಹ ಕೃತ್ಯಗಳು ಮಾಡುವವರು, ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಬಾಬರ ಇತಿಹಾಸ ಪುಟ ಸೇರಿದನು. ಅವನ ಬೆಂಬಲಿಗರ ರಾಜಕೀಯ ಭವಿಷ್ಯ ಕೂಡ ಕೊನೆಯ ಕ್ಷಣ ಎಣಿಸುತ್ತಿದೆ. ಆದ್ದರಿಂದ ಈ ರೀತಿಯ ಘೋಷಣೆ ಬರೆಯುವುದು, ಎಂದರೆ ತನ್ನನ್ನು ತಾನು ನಗೆ ಪಾಟಲು ಮಾಡಿಕೊಂಡಂತೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು !