ಗಾಜಿಯಾಬಾದ್ (ಉತ್ತರ ಪ್ರದೇಶ) ನಲ್ಲಿ ನಡೆದ ಘಟನೆ

ಘಾಜಿಯಾಬಾದ್ (ಉತ್ತರ ಪ್ರದೇಶ) – ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದ ಮುಸ್ಲಿಂ ಹುಡುಗಿ ಶೀಬಾಳನ್ನು ಆಕೆಯ ಆಪ್ತರು ಮತ್ತು ಸಂಬಂಧಿಕರೇ ಹತ್ಯೆ ಮಾಡಿದ್ದಾರೆ. ಸಹೋದರರು ಆಕೆಯನ್ನು ಇಲ್ಲಿನ ಮುರಾದ್‌ನಗರದ ಗಂಗಾಹಾರ್ ಕಾಲುವೆಗೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯ ದೇಹವನ್ನು ಕಾಲುವೆಗೆ ಎಸೆದರು. ಸಹೋದರ ಸೂಫಿಯಾನ್ ಮತ್ತು ಸೋದರಸಂಬಂಧಿ ಮಹತಾಬ್ ಇವರಿಗೆ ಶೀಬಾ ತನ್ನ ಹಿಂದೂ ಗೆಳೆಯನೊಂದಿಗೆ ಮಾತನಾಡುವುದನ್ನು ಇಷ್ಟಪಡಲಿಲ್ಲ. ಹೀಗಾಗಿ ತಾವೇ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ.
ಮೂಲತಃ ಉತ್ತರಾಖಂಡದ ರೂಡ್ಕಿ ಜಿಲ್ಲೆಯವರಾದ 17-18 ವರ್ಷದ ಶೀಬಾ ಸ್ಥಳೀಯ ಹಿಂದೂ ಹುಡುಗನನ್ನು ಪ್ರೀತಿಸುತ್ತಿದ್ದಳು. ಇದನ್ನು ಆಕೆಯ ಸಹೋದರರಾದ 21 ವರ್ಷದ ಸುಫಿಯಾನ್ ಮತ್ತು 24 ವರ್ಷದ ಮಹತಾಬ್ ವಿರೋಧಿಸಿದರು. ಇದರಿಂದಾಗಿ ಇಬ್ಬರೂ ಯಾವುದೋ ನೆಪದಲ್ಲಿ ಆಕೆಯನ್ನು ದೆಹಲಿಯಲ್ಲಿರುವ ಆಕೆಯ ಸಂಬಂಧಿಕರ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿಯೂ ತನ್ನ ಹಿಂದೂ ಪ್ರಿಯತಮ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಈ ವಿಷಯ ತಿಳಿದ ಇಬ್ಬರೂ ಕೋಪಗೊಂಡು ಆಕೆಯನ್ನು ಕೊಂದಿದ್ದಾರೆ. ಇಬ್ಬರೂ ಕಾಲುವೆ ಸ್ಥಳದಿಂದ ಹಿಂತಿರುಗುತ್ತಿದ್ದಾಗ, ಪೊಲೀಸರಿಗೆ ಅವರ ಮೇಲೆ ಅನುಮಾನ ಬಂದಿತು. ಪೊಲೀಸರು ಆತನನ್ನು ಹಿಡಿದಾಗ, ಅವನು ತಕ್ಷಣ ತನ್ನ ಅಪರಾಧವನ್ನು ಒಪ್ಪಿಕೊಂಡರು. ಉಪ ಪೊಲೀಸ್ ಆಯುಕ್ತ (ಗ್ರಾಮೀಣ) ವಿವೇಕ ಚಂದ್ರ ಯಾದವ ಈ ಅಪರಾಧದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಹಾಗೂ ಪೊಲೀಸ್ ತಂಡಗಳು ಕಾಲುವೆಗೆ ಎಸೆದಿರುವ ಶೀನಾ ಮೃತದೇಹ ಪತ್ತೆಗೆ ಶ್ರಮಿಸುತ್ತಿವೆ.
ಸಂಪಾದಕೀಯ ನಿಲುವುಲವ್ ಜಿಹಾದ್‌ನಲ್ಲಿ ಹಿಂದೂಗಳಿಗೆ ‘ಪ್ರೀತಿಗೆ ಧರ್ಮದಲ್ಲಿ ಸ್ಥಾನ ಇರುವುದಿಲ್ಲ’ ಎಂದು ಹೇಳಿ ಅವರನ್ನು ಮತಾಂಧರೆಂದು ಹೇಳುವ ಜಾತ್ಯತೀತವಾದಿ ಗುಂಪಿಗೆ ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ಚಕಾರವನ್ನೂ ಎತ್ತುವುದಿಲ್ಲ. ಆದ್ದರಿಂದ ಈಗ ಹಿಂದೂಗಳೇ ಇಂಥವರಿಗೆ ಉತ್ತರ ಕೊಡಬೇಕು ! |
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!