ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಪೃಥ್ವಿಯಲ್ಲಿ ನಮ್ಮ ಸಮಯವು ಅಮೂಲ್ಯವಾಗಿದೆ. ದೇವರು ನಮಗೆ ಈ ಸಮಯವನ್ನು ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ನೀಡಿದ್ದಾನೆ. ನಾವು ಮತ್ತು ನಮ್ಮ ಮಕ್ಕಳು ನೋಡುತ್ತಿರುವ ಸೋಶಿಯಲ್ ಮೀಡಿಯಾದ ವಿಷಯಗಳು ಯಾವ ವಿಧದ್ದಾಗಿವೆ  ಎನ್ನುವುದರ ಬಗ್ಗೆ ನಾವು ಜಾಗೃತರಾಗಿದ್ದರೆ, ನಾವು ಪ್ರತಿಕೂಲ ವಿಷಯಗಳನ್ನು ವೀಕ್ಷಿಸದೇ ಆಧ್ಯಾತ್ಮಿಕ ಉನ್ನತಿಯೆಡೆಗೆ ಕೊಂಡೊಯ್ಯುವ ವಿಷಯಗಳನ್ನು ನೋಡಲು ಸಾಧ್ಯವಾಗುವುದು.

ದೆಹಲಿ ಗಲಭೆ ಮತ್ತು ಸಿಎಎ ವಿರೋಧಿ ಆಂದೋಲನದಲ್ಲಿ ಐ.ಎಸ್.ಐ ಕೈವಾಡ ! – ದೆಹಲಿ ಪೊಲೀಸ

ದೆಹಲಿ ಗಲಭೆಗಳು, ಹಾಗೆಯೇ ಸಿಎಎ ಮತ್ತು ಎನ್.ಆರ್.ಸಿ.ಯ ವಿರುದ್ಧದ ಆಂದೋಲನಗಳ ಹಿಂದೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್.ಐನ ಕೈವಾಡ ಇರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಐ.ಎಸ್.ಐ.ನ ಆದೇಶದ ಮೇರೆಗೆ ಖಲಿಸ್ತಾನ್ ಪರ ಬೆಂಬಲಿಗರು ಕೂಡ ಆಂದೋಲನಕ್ಕೆ ಸೇರಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮಾಲ್ಡೀವ್ಸ್ ಒಪ್ಪಿಗೆ ಇಲ್ಲದ ಕಾರಣ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ೧೯ ನೇ ಸಾರ್ಕ್ ಶೃಂಗಸಭೆ ರದ್ದು

೧೯ ನೇ ಸಾರ್ಕ್ ಶೃಂಗಸಭೆಯನ್ನು ಪಾಕಿಸ್ತಾನದಲ್ಲಿ ನಡೆಸಲು ಪ್ರಸ್ತಾಪಿಸಲಾಗಿತ್ತು; ಆದರೆ ಈ ಪ್ರಸ್ತಾಪವನ್ನು ತಡೆಯುವಲ್ಲಿ ಮಾಲ್ಡೀವ್ಸ್ ಭಾರತದ ಪರವಾಗಿ ನಿಂತಿತು. ಇದಕ್ಕೂ ಮುನ್ನ ೨೦೧೬ ರಲ್ಲಿ ಸಾರ್ಕ್ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಆ ವರ್ಷ ಪಾಕಿಸ್ತಾನದಲ್ಲಿ ಸಮ್ಮೇಳನದ ಆಯೋಜಕವಾಗಿತ್ತು; ಆದರೆ ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತೀಯ ಸೈನ್ಯದ ಮೇಲೆ ‘ಉರಿ ದಾಳಿ’ ನಡೆಸಿದರು.

ನಿಷೇಧಿಸಲಾಗಿದ್ದ ಚೀನಾದ ಆಪ್‌ಗಳು ಭಾರತದಲ್ಲಿ ಹೊಸ ರೂಪದಲ್ಲಿ ಪುನಃ ಸಕ್ರಿಯಗೊಂಡಿವೆ

ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ನಂತರ ಭಾರತವು ಚೀನಾದ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ರದ್ದುಗೊಳಿಸಲು ಪ್ರಾರಂಭಿಸಿತು, ಜೊತೆಗೆ ಚೀನಾದ ಆಪ್‌ಗಳನ್ನು ನಿಷೇಧಿಸಿತು; ಆದರೆ ಈಗ ಅದೇ ಆಪ್ ಗಳು ಹೊಸ ಹೆಸರು ಮತ್ತು ಕೆಲವು ಬದಲಾವಣೆಗಳೊಂದಿಗೆ ಭಾರತಕ್ಕೆ ಮರಳಿದ್ದೂ ಅವು ಕೋಟಿಗಟ್ಟಲೆ ಸಂಚಾರವಾಣಿಗಳಲ್ಲಿ ಡೌನ್‌ಲೋಡ್ ಆಗಿವೆ, ಎಂಬ ಮಾಹಿತಿಯು ಬೆಳಕಿಗೆ ಬಂದಿದೆ.

ಶ್ರೀಕೃಷ್ಣ ಜನ್ಮಭೂಮಿಯ ಮೇಲಿನ ಶಾಹಿ ಈದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಕೋರಿ ಮಥುರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಮಥುರಾದ ಶ್ರೀಕೃಷ್ಣ ಜನ್ಮಭೂಮಿಯ ೧೩.೩೭ ಎಕರೆ ಜಮೀನಿನ ಮಾಲೀಕತ್ವ ಮತ್ತು ಈ ಭೂಮಿಯಲ್ಲಿ ಶಾಹಿ ಇದ್ಗಾ ಮಸೀದಿಯ ಅತಿಕ್ರಮಣವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿಯನ್ನು ಭಗವಾನ್ ಕೃಷ್ಣ ವಿರಾಜ್ ಮಾನ್, ಕಟರಾ ಕೇಶವ್ ದೇವ್ ಕೆವಾಟ್ ಮತ್ತು ರಂಜನಾ ಅಗ್ನಿಹೋತ್ರಿಯೊಂದಿಗೆ ಒಟ್ಟು ೬ ಜನರು ಸಲ್ಲಿಸಿದ್ದಾರೆ.

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದ ನಂತರ ಆಡಳಿತವು ಚಿಕ್ಕಬಳ್ಳಾಪುರದ ಬೆಟ್ಟದ ಮೇಲಿನ ಸರ್ಕಾರಿ ಭೂಮಿಯಲ್ಲಿ ಹಾಕಲಾಗಿದ್ದ ಅಕ್ರಮ ಶಿಲುಬೆ ಮತ್ತು ಯೇಸುವಿನ ಮೂರ್ತಿಯನ್ನು ತೆಗೆದುಹಾಕಿತು !

ಇಲ್ಲಿನ ಸೊಸೇಪಾಳ್ಯ ಬೆಟ್ಟದಲ್ಲಿಯ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದ್ದ ಶಿಲುಬೆ ಮತ್ತು ಯೇಸುವಿನ ಬೃಹತ್ ಮೂರ್ತಿಯನ್ನು ಜಿಲ್ಲಾಡಳಿತ ತೆಗೆದುಹಾಕಿದೆ. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕುರಿತು ಕರ್ನಾಟಕ ಉಚ್ಚನ್ಯಾಯಾಲಯವು ತೀರ್ಪು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಪೂ. ರಮಾನಂದಣ್ಣ ಇವರು ಮೋಕ್ಷಗುರು ಗುರುದೇವರ ಬಗ್ಗೆ ವ್ಯಕ್ತಪಡಿಸಿದ ಭಾವಪೂರ್ಣ ಕೃತಜ್ಞತೆ !

ನೀವು ಮಾಡಿದ ಕೃಪೆಗಾಗಿ ನಾನು ಇನ್ನೆಷ್ಟೋ ಜನ್ಮ ತೆಗೆದುಕೊಂಡು ಬಂದರೂ, ನಿಮ್ಮ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ. ಈ ಕಲಿಯುಗದ ಘೋರ ಅಂಧಕಾರದ ಸುಳಿವಿನಲ್ಲಿ ಈ ಜೀವ ಸಿಲುಕಿ ಹಾಕಿಕೊಂಡಿತು. ಅಜ್ಞಾನದ ತುತ್ತ ತುದಿಯಲ್ಲಿ ಇದ್ದಂತಹ ಈ ಪಾಪಿ ಜೀವವನ್ನು, ಅನಂತ ಅಪರಾಧಗಳನ್ನು ಮಾಡಿದ ನನ್ನನ್ನು ಇದೆಲ್ಲದರಿಂದ ಹೊರತೆಗೆದು, ಅಷ್ಟು ಮಾತ್ರವಲ್ಲ ಅವೆಲ್ಲವನ್ನು ಕ್ಷಮಿಸಿ, ಜನ್ಮ-ಮೃತ್ಯು ಚಕ್ರದಿಂದ ಕೇವಲ ನೀವೇ ಪಾರು ಮಾಡಿದ್ದೀರಿ.

‘ಸನಾತನ ಶಾಪ್ ಈ ‘ಅಂಡ್ರೈಡ್ ಆಪ್ ಸದ್ಗುರು ನಂದಕುಮಾರ ಜಾಧವ ಇವರ ಶುಭಹಸ್ತದಿಂದ ಲೋಕಾರ್ಪಣೆ

‘ವಾಚಕರು ಈ ರಿಯಾಯತಿಯ ಲಾಭವನ್ನು ಪಡೆದುಕೊಳ್ಳಬೇಕು. ಜೊತೆಗೆ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳು, ಜಪಮಾಲೆ, ದೇವತೆಗಳ ಲಾಕೇಟ್ಸ್, ದೇವತೆಗಳ ಸಾತ್ತ್ವಿಕ ಚಿತ್ರಗಳು ಹಾಗೂ ಇತರ ಸಾತ್ತ್ವಿಕ ಉತ್ಪಾದನೆಗಳೂ ಖರೀದಿಗಾಗಿ ಲಭ್ಯವಿದೆ ಎಲ್ಲರೂ ಈ ಆಪ್‌ಅನ್ನು ಡೌನ್‌ಲೋಡ್ ಮಾಡಿರಿ, ಅದೇರೀತಿ ಈ ಬಗ್ಗೆ ಸಂಬಂಧಿಕರಿಗೆ ಹಾಗೂ ಪರಿಚಿತರಿಗೂ ತಿಳಿಸಿರಿ, ಎಂದು ಸಂಸ್ಥೆಯ ವತಿಯಿಂದ ಕರೆ ನೀಡಲಾಗಿದೆ.

ಅಧಿಕ ಮಾಸದಲ್ಲಿನ ಶುಭ-ಅಶುಭ ದಿನಗಳು ಮತ್ತು ಆ ದಿನಗಳ ಆಧ್ಯಾತ್ಮಿಕ ಮಹತ್ವ

ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಅಷ್ಟಮಿ ತಿಥಿಗೆ ‘ದುರ್ಗಾಷ್ಟಮಿ’ ಎನ್ನುತ್ತಾರೆ. ಈ ದಿನ ಶ್ರೀ ದುರ್ಗಾದೇವಿಯ ವ್ರತವನ್ನು ಮಾಡುತ್ತಾರೆ. ಅಸುರ ಶಕ್ತಿಗಳ ನಾಶವಾಗಿ ಭಯಮುಕ್ತವಾಗಲು ಈ ವ್ರತವನ್ನು ಮಾಡುತ್ತಾರೆ. ಈ ದಿನ ದುರ್ಗಾಸಪ್ತಶತಿ ಸ್ತೋತ್ರ, ಕವಚ, ಅರ್ಗಲಾ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ.

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಸಮಾಜಕ್ಕೆ ನಾಮಜಪ ಮುಂತಾದ ಸಾಧನೆಯ ಮಹತ್ವವು ತಿಳಿಯಬೇಕು ಹಾಗೂ ರಾಷ್ಟ್ರ ಮತ್ತು ಧರ್ಮ ಇವುಗಳ ಕಾರ್ಯದ ಪ್ರಸಾರವಾಗಬೇಕು’, ಎಂಬ ದೃಷ್ಟಿಯಿಂದ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಆನ್‌ಲೈನ್ ಸತ್ಸಂಗ ಮಾಲಿಕೆ’ಯನ್ನು ಪ್ರಸಾರ ಮಾಡಲಾಗುತ್ತಿದೆ. ದೇಶದಾದ್ಯಂತ ಸಂಚಾರಸಾರಿಗೆ ನಿರ್ಬಂಧವು ಜಾರಿಗೆ ಬಂದ ಕಾರಣ ಮನೆಮನೆಗೆ ಹೋಗಿ ಅಧ್ಯಾತ್ಮ ಪ್ರಸಾರ ಮಾಡಲು ಸಾಧ್ಯವಾಗುತ್ತಿಲ್ಲ.