ಒಡಹುಟ್ಟಿದ ಮಕ್ಕಳನ್ನು ಸಾಕಲು ಸಾಧ್ಯವಾಗದೆ 3 ಹೆಣ್ಣುಮಕ್ಕಳಿಗೆ ವಿಷ ಕುಡಿಸಿದರು
ಜಲಂಧರ (ಪಂಜಾಬ್) – ಬಿಹಾರದ ಕಟಿಹಾರ ಮೂಲದ ದಂಪತಿಗಳು ತಮ್ಮ 4 ಹೆಣ್ಣು ಮಕ್ಕಳು ಮತ್ತು 1 ಮಗನೊಂದಿಗೆ ಕಾನ್ಪುರ ಜಾಲಂಧರದಲ್ಲಿ ವಾಸಿಸುತ್ತಿದ್ದರು. ಈ ದಂಪತಿಗಳು ತಮ್ಮ 3 ಹಿರಿಯ ಹೆಣ್ಣು ಮಕ್ಕಳಿಗೆ ವಿಷ ಬೆರೆಸಿದ ಹಾಲು ಕುಡಿಯಲು ಕೊಟ್ಟಿದ್ದಾರೆ. ಮೂವರೂ ಹುಡುಗಿಯರು ಚಡಪಡಿಸಿ ಸಾವನ್ನಪ್ಪಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ತಂದೆ-ತಾಯಿಯನ್ನು ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯನುಸಾರ ಆರೋಪಿ ಸುಶೀಲ ಮಂಡಲಾಗೆ ಮದ್ಯಪಾನದ ಚಟ ಇತ್ತು. ಅವನ ಸಂಪಾದನೆ ಅತ್ಯಲ್ಪವಾಗಿತ್ತು. ಇದರಿಂದ ಐದೂ ಮಕ್ಕಳನ್ನು ಸಾಕಲು ಸಾಧ್ಯವಾಗದ ಕಾರಣ ಪತ್ನಿಯ ಸಹಾಯದೊಂದಿಗೆ ತನ್ನ 3 ಹಿರಿಯ ಹೆಣ್ಣು ಮಕ್ಕಳ ಹತ್ಯೆ ಮಾಡಿದನು. ತಮ್ಮನ್ನು ರಕ್ಷಿಸಿಕೊಳ್ಳಲು, ಸುಶೀಲ ಮತ್ತು ಅವನ ಪತ್ನಿ ಮಂಜುದೇವಿಯು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಸುಳ್ಳು ಕಥೆಯನ್ನು ಹೆಣೆದರು; ಆದರೆ ಪೊಲೀಸರು ಹುಡುಕಾಟ ನಡೆಸಿದಾಗ ಸತ್ಯ ಹೊರಬಿದ್ದಿದೆ. ಪೊಲೀಸರು ಸುಶೀಲ ಮಂಡಲ ಮತ್ತು ಆತನ ಪತ್ನಿ ಮಂಜುದೇವಿಯನ್ನು ಬಂಧಿಸಿದ್ದಾರೆ. ಈ ದಂಪತಿಯ ಉಳಿದ ಇಬ್ಬರು ಮಕ್ಕಳಾದ ಅನುಷ್ಕಾ (2 ವರ್ಷ) ಮತ್ತು ಶಾನಿ (1 ವರ್ಷ) ಅವರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
जाति गिनने वाले बिहार से कमाने पंजाब आए सुशील मंडल, फिर भी पेट भरने को पड़े लाले तो तीन बेटियों को दूध में जहर देकर मार डाला#Punjab #jalandhar #murdershttps://t.co/nytohc1UP1
— ऑपइंडिया (@OpIndia_in) October 4, 2023