ಮೈಸೂರು : ಮೈಸೂರಿನ ರಾಜ ವಂಶಸ್ಥ ಯದುವೀರ ಅವರ ಅಜ್ಜಿ 83 ವರ್ಷದ ಶ್ರೀಮತಿ ಉಮಾ ಗೋಪಾಲರಾಜ ಅರಸು ಅವರು ನಿಧನರಾಗಿದ್ದಾರೆ. ಮೈಸೂರಿನ ಲಕ್ಷ್ಮಿಪುರಂ ನಿವಾಸದಲ್ಲಿ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.
`ಅಜ್ಜಿ ಯಾವಾಗಲೂ ಸರಳ, ಕರುಣಾಳು ಮತ್ತು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರು ತಮ್ಮ ಮಕ್ಕಳು, ಮೊಮ್ಮಕ್ಕಳ ವ್ಯಕ್ತಿತ್ವ, ನಡವಳಿಕೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಅವರು ನನಗೆ ಮತ್ತು ನನ್ನ ಕುಟುಂಬಕ್ಕೆ ಎಷ್ಟು ಪ್ರಾಮುಖ್ಯವಾಗಿದ್ದರು, ಅಮೂಲ್ಯವಾಗಿದ್ದರು ಎಂಬುದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅವರ ಅಗಲಿಕೆ ನಮ್ಮ ಜೀವನದಲ್ಲಿ ಶೂನ್ಯವನ್ನು ಸೃಷ್ಠಿಸಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ` ಎಂದು ಅಜ್ಜಿ ನಿಧನದ ಬಗ್ಗೆ ಯದುವೀರ ಅವರು ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಭಾವನೆಯನ್ನು ಹಂಚಿಕೊಂಡಿದ್ದಾರೆ.
(ಸೌಜನ್ಯ – Vistara News)
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!