ಅಸ್ಸಾಮಿನಲ್ಲಿ ಮುಸಲ್ಮಾನರ ೨ ಗುಂಪುಗಳ ನಡುವಿನ ಹೊಡೆದಾಟದಲ್ಲಿ ಒಬ್ಬನ ಸಾವು

ಗೌಹತ್ತಿ – ರಾಜ್ಯದಲ್ಲಿನ ಧುಬರಿ ಜಿಲ್ಲೆಯಲ್ಲಿನ ಬಿಲಾಸೀಪಾರಾದಲ್ಲಿ ಮಸೀದಿ ಸಮಿತಿಯ ೨ ಗುಂಪುಗಳ ನಡುವೆ ನಡೆದ ಹಿಂಸಾಚಾರದಲ್ಲಿ ಒಬ್ಬನು ಸಾವನ್ನಪ್ಪಿದರೆ ೨೦ ಜನರು ಗಾಯಗೊಂಡಿದ್ದಾರೆ. ಮೃತನಾದ ಮುಸಲ್ಮಾನನ ಹೆಸರು ಹಾರೂಲ ರಶೀದ ಎಂದು ಇತ್ತು. ರಶೀದನ ಸಾವಿನಿಂದ ಸಿಟ್ಟಾದ ಆತನ ಸಂಬಂಧಿಗಳು ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು ಹಾಗೂ ಆಕ್ರಮಣಕಾರರ ಮೇಲೆ ಕಾರ್ಯಾಚರಣೆ ಮಾಡಬೇಕೆಂದು ಮನವಿ ಮಾಡಿದರು. ಪೊಲೀಸರು ಆಶ್ವಾಸನೆಯನ್ನು ನೀಡಿದ ನಂತರವೇ ರಾಷ್ಟ್ರೀಯ ಹೆದ್ದಾರಿಯನ್ನು ತೆರವುಗೊಳಿಸಿದರು. ಈ ಹಿಂಸಾಚಾರದ ಪ್ರಕರಣದಲ್ಲಿ ೨ ಗುಂಪುಗಳಿಂದ ೨ ಬೇರೆ ಬೇರೆ ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ‘ಮಸೀದಿ ಸಮಿತಿಯು ಯಾವ ಗುಂಪಿನ ಅಧೀನದಲ್ಲಿರುವುದು ?’ ಎಂಬ ವಾದದಿಂದಾಗಿ ಹಿಂಸಾಚಾರ ನಡೆದಿರುವ ಮಾಹಿತಿಯು ಬಹಿರಂಗವಾಗಿದೆ.