ಕಾಂಗ್ರೆಸ ಪಕ್ಷ ಜನಸಂಖ್ಯಾ ನಿಯಂತ್ರಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನನಗೆ 4 ಮಕ್ಕಳಾಗುತ್ತಿರಲಿಲ್ಲ ! – ಭಾಜಪದ ಸಂಸದ ರವಿ ಕಿಶನ

ಭಾಜಪ ಸಂಸದ ಹಾಗೂ ನಟ ರವಿ ಕಿಶನ

ನವ ದೆಹಲಿ : ಕಾಂಗ್ರೆಸ ಪಕ್ಷ ಜನಸಂಖ್ಯಾ ನಿಯಂತ್ರನಣಾ ಕಾಯ್ದೆಯನ್ನು ಜಾರಿಗೆ ತಂದಿದ್ದರೆ ನನಗೆ 4 ಮಕ್ಕಳಾಗುತ್ತಿರಲಿಲ್ಲ ಎಂದು ಉತ್ತರ ಪ್ರದೇಶದ ಗೋರಖಪುರದ ಭಾಜಪ ಸಂಸದ ಹಾಗೂ ನಟ ರವಿ ಕಿಶನ ಹೇಳಿದ್ದಾರೆ.

ರವಿ ಕಿಶನ ತಮ್ಮ ಮಾತನ್ನು ಮುಂದುವರೆಸುತ್ತಾ, 4 ಮಕ್ಕಳ ಬಗ್ಗೆ ವಿಚಾರ ಮಾಡಿದಾಗ ಬೇಸರವೆನಿಸುತ್ತದೆ. ಇದು ಕಾಂಗ್ರೆಸ್ ಪಕ್ಷದ ತಪ್ಪು. ಅವರ ಸರಕಾರವಿತ್ತು. ಕಾನೂನು ಅವರ ಕೈಯಲ್ಲಿತ್ತು. ಆಗ ನಮಗೆ ಅರಿವಿರಲಿಲ್ಲ, ನಾವು ಚಿಕ್ಕವರಾಗಿದ್ದೆವು ಎಂದು ಹೇಳಿದರು.