ಕರ್ಣಾವತಿಯಲ್ಲಿ ಕಾಂಗ್ರೆಸ ಕಚೇರಿಯ ಮೇಲೆ ‘ಹಜ ಹೌಸ’ ಎಂದು ಬರೆದ ಬಜರಂಗ ದಳದ ಕಾರ್ಯಕರ್ತರು !

ಕಾಂಗ್ರೆಸ್ಸಿನ ಪ್ರದೇಶಾಧ್ಯಕ್ಷರು ‘ಭಾರತದ ಬೊಕ್ಕಸದ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರದ್ದು’ ಎಂಬ ಹೇಳಿಕೆಗೆ ವಿರೋಧ!

ಕರ್ಣಾವತಿ (ಗುಜರಾತ) – ಭಾರತದ ಬೊಕ್ಕಸದ ಮೇಲೆ ಮೊದಲ ಅಧಿಕಾರ ಅಲ್ಪಸಂಖ್ಯಾತರಿಗೆ. ಭಾರತದ ಮಾಜಿ ಪ್ರಧಾನಿ ಮನಮೋಹನಸಿಂಗ ಕೂಡಾ ಇದನ್ನೇ ಹೇಳಿದ್ದಾರೆ’ ಎಂದು ಗುಜರಾತ ಕಾಂಗ್ರೆಸ ರಾಜ್ಯಾಧ್ಯಕ್ಷ ಜಗದೀಶ ಠಾಕೂರ ಇಲ್ಲಿ ಅಯೋಜಿಸಿದ್ದ ಸಧ್ಭಾವನಾ ಸಭೆಯಲ್ಲಿ ಹೇಳಿದರು.

(ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳಿದ್ದರೂ ಕಾಂಗ್ರೆಸ ನಿರಂತರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೂ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರು ಅವರಿಗೆ ಮತ ಹಾಕುವದಿಲ್ಲ. ಇನ್ನೂ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ ಬಹುಸಂಖ್ಯಾತ ಹಿಂದೂಗಳನ್ನು ನೋಯಿಸಿ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದೆ. ಅಂತಹ ಕಾಂಗ್ರೆಸ ಶೀಘ್ರದಲ್ಲೇ ರಾಜಕೀಯವಾಗಿ ಕೊನೆಗೊಂಡರೆ ಆಶ್ಚರ್ಯವೇನಿದೆ? – ಸಂಪಾದಕ) ಇದಾದ ನಂತರ ಬಜರಂಗ ದಳದ ಕಾರ್ಯಕರ್ತರು ಕಾಂಗ್ರೆಸ ಕಚೇರಿಯ ಮೇಲೆ ‘ಹಜ ಹೌಸ’ ಎಂದು ಬರೆದಿದ್ದಾರೆ, ಹಾಗೆಯೇ ಕಾಂಗ್ರೆಸ ನಾಯಕರ ಚಿತ್ರಗಳಿಗೆ ಮಸಿ ಬಳಿದರು.