ಗುಜರಾತ್‍ನಲ್ಲಿ ಭಾಜಪ ಸರಕಾರ ಅಧಿಕಾರದಲ್ಲಿದ್ದಾಗ, ಮತಾಂಧರು ಹಿಂದೂ ಮಹಿಳೆಯರ ಮೇಲೆ ದಾಳಿ ಮಾಡುವ ಧೈರ್ಯ ಮಾಡುವುದು ಅಪೇಕ್ಷಿತವಿಲ್ಲ, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು
ಪಾಟಣ (ಗುಜರಾತ್) – ಇಲ್ಲಿ ಯಾಸಿನ್ ಮಜಿಖಾನ್ ಬಲೋಚ್ ಎಂಬ ಯುವಕನು ಓರ್ವ ವಿವಾಹಿತ ಹಿಂದೂ ಮಹಿಳೆಯು ಮದುವೆಯಾಗಲು ನಿರಾಕರಿಸಿದ್ದಕ್ಕಾಗಿ ಹಲ್ಲೆ ನಡೆಸಿದ್ದಾನೆ. ಇದರಿಂದ ಇಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಗೃಹರಾಜ್ಯ ಸಚಿವ ಹರ್ಷ ಸಂಘವಿ ಇವರು `ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಯಾರನ್ನೂ ಬಿಡುವುದಿಲ್ಲ’, ಎಂದು ಹೇಳಿದ್ದಾರೆ. ಈ ಮಹಿಳೆ ಮನೆಯಲ್ಲಿ ಒಬ್ಬಂಟಿ ಇದ್ದಾಗ ಯಾಸಿನ್ ಆಕೆಯ ಮನೆಗೆ ನುಗ್ಗಿ ಮದುವೆಯಾಗುವಂತೆ ಒತ್ತಡ ಹೇರಲಾರಂಭಿಸಿದ. ಮಹಿಳೆಯು ನಿರಾಕರಿಸಿದಾಗ, ಕೊಲೆಯ ಬೆದರಿಕೆ ಹಾಕಿದ್ದಾನೆ. ಇಬ್ಬರು 2 ವರ್ಷಗಳಿಂದ ಪರಸ್ಪರ ಪರಿಚಿತರು. ಇದಕ್ಕೂ ಮುನ್ನ ಯಾಸಿನ್ ಮಹಿಳೆಯ ಪತಿಗೂ ಕೊಲೆಯ ಬೆದರಿಕೆ ಹಾಕಿದ್ದ.
Gujarat: Communal tension prevails in Radhanpur after Hindu woman attacked by a Muslim man in her own home https://t.co/jZkxmPUFu6
— OpIndia.com (@OpIndia_com) January 30, 2022