ಹೊಸ ದೆಹಲಿ – ಕೇಂದ್ರ ಸರಕಾರವು ಅಮೇರಿಕಾದ ‘ಜಾನ್ಸನ್ ಆಂಡ್ ಜಾನ್ಸನ್’ ಸಂಸ್ಥೆಯು ತಯಾರಿಸಿದ ಕೊರೋನಾ ವಿರುದ್ಧದ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆಗೆ ಒಪ್ಪಿಗೆ ಸಿಕ್ಕಿದೆ. ಇತರ ಸಂಸ್ಥೆಗಳು ತಯಾರಿಸಿದ ಕೊರೋನಾ ವಿರುದ್ಧದ ಲಸಿಕೆಗಳ ಎರಡು ಡೋಸ್ ತೆಗೆದುಕೊಳ್ಳಬೇಕಾಗುತ್ತದೆ. ಅದೇ ‘ಜಾನ್ಸನ್ ಆಂಡ್ ಜಾನ್ಸನ್’ ಸಂಸ್ಥೆಯ ಲಸಿಕೆಯ ಒಂದೇ ಡೋಸ್ ಸಾಕಾಗುತ್ತದೆ. ಭಾರತದಲ್ಲಿ ಇದುವರೆಗೆ ೫ ಸಂಸ್ಥೆಗಳ ಕೊರೋನಾ ವಿರುದ್ಧ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.