ಕಾಶ್ಮೀರದ ಮುಖ್ಯ ಧರ್ಮಗುರು ಮತ್ತು ‘ಹುರಿಯತ್ ಕಾನ್ಫರೆನ್ಸ್’ ಪ್ರತ್ಯೇಕತಾವಾದಿ ಸಂಘಟನೆಯ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರ ಮುನ್ಸೂಚನಾ(ಮುನ್ನೆಚರಿಕೆಯ) ಹೇಳಿಕೆ

ಶ್ರೀನಗರ (ಕಾಶ್ಮೀರ) – ಕಾಶ್ಮೀರದ ಮುಖ್ಯ ಧರ್ಮಗುರು ಮತ್ತು ‘ಹುರಿಯತ್ ಕಾನ್ಫರೆನ್ಸ್’ ಪ್ರತ್ಯೇಕತಾವಾದಿ ಸಂಘಟನೆಯ ಅಧ್ಯಕ್ಷ ಮಿರ್ವೈಜ್ ಉಮರ್ ಫಾರೂಕ್ ಅವರು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಅವರ ಹತ್ಯೆಯನ್ನು ಖಂಡಿಸಿದ್ದಾರೆ. ಖಮೇನಿ ಅವರ ಕ್ರೂರ ಹತ್ಯೆಯು ಮುಸ್ಲಿಂ ಜಗತ್ತನ್ನು ಬೆಚ್ಚಿಬೀಳಿಸಿದೆ ಎಂದು ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ಒಟ್ಟಾಗಿ ಈ ಕ್ರೌರ್ಯವನ್ನು ಮತ್ತು ಇರಾನ್ ವಿರುದ್ಧ ನಡೆಯುತ್ತಿರುವ ಆಕ್ರಮಣವನ್ನು ಖಂಡಿಸುತ್ತಾರೆ. ‘ಉಮ್ಮಾ’ (ಜಾಗತಿಕ ಮುಸ್ಲಿಂ ಸಮುದಾಯ) ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಬೇಕು. ಈ ಹತ್ಯೆ ಮತ್ತು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಆಕ್ರಮಣವನ್ನು ಖಂಡಿಸಬೇಕು. ಇದು ನಮ್ಮ ಐಕ್ಯತೆಯನ್ನು ಪ್ರದರ್ಶಿಸುವ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.
Mirwaiz Umar Farooq calls for “global Muslim unity” after Khamenei’s death.
Mehbooba Mufti calls Iran the “supreme voice of the Muslim world.”
Such statements aren’t casual remarks; they can mobilize street sentiment in Kashmir or elsewhere in India
Will the administration act… pic.twitter.com/iQ2rsD1qHb
— Sanatan Prabhat (@SanatanPrabhat) March 1, 2026
ಇರಾನ್ ನಲ್ಲಿ ಮುಸ್ಲಿಂ ಜಗತ್ತಿನ ಸರ್ವೋಚ್ಚ ಧ್ವನಿ! – ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ (ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಖಂಡಿಸಿದ್ದಾರೆ. ಅವರು ಈ ದಾಳಿಗಳನ್ನು ‘ಆಕ್ರಮಣಕಾರಿ ಕೃತ್ಯ’ ಎಂದು ಕರೆದಿದ್ದಾರೆ ಮತ್ತು ಇರಾನ್ ಅನ್ನು ‘ಮುಸ್ಲಿಂ ಜಗತ್ತಿನ ಸರ್ವೋಚ್ಚ ಧ್ವನಿ’ ಎಂದು ಬಣ್ಣಿಸಿದ್ದಾರೆ. ಯಾವುದೇ ಕ್ಷಿಪಣಿ ಇರಾನ್‌ನ ಸಾರ್ವಭೌಮತ್ವವನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾನು ಖಮೇನಿ ಅವರ ದೈವಿಕ ರಕ್ಷಣೆ ಮತ್ತು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಶಿಯಾ ಮುಸಲ್ಮಾನರಿಂದ ಪ್ರತಿಭಟನೆ!
ಖಮೇನಿ ಅವರ ಸಾವಿನ ಹಿನ್ನೆಲೆಯಲ್ಲಿ ಕಾಶ್ಮೀರದ ಶಿಯಾ ಸಮುದಾಯದವರು ಬೀದಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದ್ದಾರೆ. ಸೋನಾವರಿ, ಬಾರಾಮುಲ್ಲಾ, ಬಂಡಿಪೋರಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶಿಯಾ ಸಮುದಾಯದ ಪುರುಷರು ಮತ್ತು ಮಹಿಳೆಯರು ಖಮೇನಿ ಅವರ ಭಾವಚಿತ್ರ ಹಿಡಿದು ಇರಾನ್ ಪರ ಘೋಷಣೆಗಳನ್ನು ನೀಡಿದರು. ವಿವಿಧ ಮುಸ್ಲಿಂ ಸಂಘಟನೆಗಳು ಮತ್ತು ಶಿಯಾ ಧರ್ಮಗುರುಗಳು ಈ ಹತ್ಯೆಯನ್ನು ಖಂಡಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಹೇಳಿಕೆಗಳಿಂದ ನಾಳೆ ಕಾಶ್ಮೀರ ಹಾಗೂ ಭಾರತದ ಇತರ ಭಾಗಗಳಲ್ಲಿ ಮತಾಂಧ ಮುಸಲ್ಮಾನರು ದಂಗೆ ಎಬ್ಬಿಸಿದರೆ ಆಶ್ಚರ್ಯಪಡಬೇಕಿಲ್ಲ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ