ಹಲವು ಸೌಲಭ್ಯಗಳನ್ನು ಹೊಂದಿರುವ ಈ ರೈಲು ಜಿಂದ್ ನಿಂದ ಸೋನಿಪತ್ ಮಾರ್ಗದಲ್ಲಿ ಸಂಚರಿಸಲಿದೆ

ಸೋನಿಪತ (ಹರಿಯಾಣ) – ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲು ಹರಿಯಾಣದ ಜಿಂದ್ ನಿಂದ ಸೋನಿಪತ್ ಮಾರ್ಗದಲ್ಲಿ ಸಂಚರಿಸಲು ಸಂಪೂರ್ಣವಾಗಿ ಸಜ್ಜಾಗಿದೆ. ಈ ಉಪಕ್ರಮದ ಮೂಲಕ ಭಾರತೀಯ ರೈಲ್ವೆಯು ಹಸಿರು ಊರ್ಜೆಯ ದಿಕ್ಕಿನಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ. ಈ ರೈಲಿನ ಕ್ಷಣಚಿತ್ರವನ್ನು ಹರಿಯಾಣದ ಮುಖ್ಯಮಂತ್ರಿ ನಾಯಬ್ ಸೈನಿ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವೀಡಿಯೊದ ಮೂಲಕ ಹಂಚಿ ಕೊಂಡಿದ್ದಾರೆ. ಈ ವೀಡಿಯೊದಲ್ಲಿ ಹೈಡ್ರೋಜನ್ ರೈಲು ಹರಿಯಾಣದ ಹೆಮ್ಮೆಯಾಗಿದ್ದು, ಶೀಘ್ರದಲ್ಲೇ ಇದರ ನಿಯಮಿತ ಸಂಚಾರ ಪ್ರಾರಂಭವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಶಬ್ದರಹಿತ ಮತ್ತು ಮಾಲಿನ್ಯಮುಕ್ತ ಪ್ರಯಾಣ
ಈ ರೈಲಿನ ವಿಶೇಷತೆಯೆಂದರೆ ಇದು ಸಂಪೂರ್ಣವ ಶಾಂತವಾಗಿ ಸಂಚರಿಸಲಿದ್ದು, ಇದರಿಂದ ಶಬ್ದ ಮಾಲಿನ್ಯವು ಬಹುತೇಕ ಶೂನ್ಯವಾಗಿರಲಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ರೈಲು ಒಂದು ಬಾರಿಗೆ ಅಂದಾಜು 2 ಸಾವಿರದ 600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ರೈಲ್ವೆ ಆಡಳಿತ ಮಂಡಳಿಯ ಮಾಹಿತಿಯ ಪ್ರಕಾರ, ನಿಯಮಿತ ಸೇವೆಗೆ ತರುವ ಮೊದಲು ಇದರ ಅಂತಿಮ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯ ಸಮಯದಲ್ಲಿ ತಾಂತ್ರಿಕ ಅಂಶಗಳು, ಸುರಕ್ಷತಾ ಮಾನದಂಡಗಳು ಮತ್ತು ವೇಗವನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಗುರುಗ್ರಾಮದ ಪ್ರಯೋಗಾಲಯದಲ್ಲಿ ಅನಿಲದ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಪ್ರಾಯೋಗಿಕ ಸಂಚಾರ ನಡೆಯಲಿದೆ. ಸದ್ಯಕ್ಕೆ ಇದರ ನಿಖರವಾದ ದಿನಾಂಕ ನಿಗದಿಯಾಗಿಲ್ಲ.
ವೇಗ ಮತ್ತು ದಕ್ಷತೆ
ಹೈಡ್ರೋಜನ್ ರೈಲು ಪ್ರತಿ ಗಂಟೆಗೆ 110 ರಿಂದ 140 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಈ ರೈಲು ಪರಿಸರ ಸ್ನೇಹಿಯಾಗಿರುವುದರ ಜೊತೆಗೆ ಸಮಯವನ್ನೂ ಉಳಿಸಲಿದೆ. ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹೈಡ್ರೋಜನ್ ರೈಲು ಜಾಲವನ್ನು ವಿಸ್ತರಿಸುವುದು ಸರಕಾರ ಮತ್ತು ರೈಲ್ವೆ ಆಡಳಿತದ ಗುರಿಯಾಗಿದೆ.
ಭಾರತ ಹೈಡ್ರೋಜನ್ ರೈಲು ಹೊಂದಿರುವ ವಿಶ್ವದ ಆರನೇ ರಾಷ್ಟ್ರವಾಗಲಿದೆಭಾರತ ಹೈಡ್ರೋಜನ್ ರೈಲು ಹೊಂದಿರುವ ವಿಶ್ವದ ಆರನೇ ದೇಶವಾಗಿ ಶೀಘ್ರದಲ್ಲೇ ಹೊರಹೊಮ್ಮಲಿದೆ. ಈ ಕ್ಷೇತ್ರದಲ್ಲಿ ಜರ್ಮನಿಯು ಮೊದಲು 2018 ರಲ್ಲಿ ಹೈಡ್ರೋಜನ್ ಚಾಲಿತ ರೈಲನ್ನು ಪ್ರಾರಂಭಿಸಿತು. ನಂತರ ಚೀನಾ (2022), ಜಪಾನ್ (2022), ಕೆನಡಾ (2023), ಅಮೇರಿಕಾ (2025) ದೇಶಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಹೈಡ್ರೋಜನ್ ರೈಲುಗಳನ್ನು ಚಾಲನೆಗೆ ತಂದಿವೆ. |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein