ಹಿಸಾರ್ (ಹರಿಯಾಣ) – ಇಲ್ಲಿನ ಹಾನ್ಸಿ ಪ್ರದೇಶದ ತೋಶಮ್ ರಸ್ತೆಯಲ್ಲಿರುವ ಒಂದು ಇಟ್ಟಿಗೆ ಗೂಡಿನ ಸ್ಥಳದಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ 39 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಇದರಲ್ಲಿ 14 ಪುರುಷರು, 11 ಮಹಿಳೆಯರು ಮತ್ತು 14 ಮಕ್ಕಳು ಸೇರಿದ್ದಾರೆ. ಅವರ ಬಳಿ ಯಾವುದೇ ದಾಖಲೆಗಳು ಸಿಕ್ಕಿಲ್ಲ. ಅವರು, ಗಡಿ ದಾಟಿ ಬಾಂಗ್ಲಾದೇಶದಿಂದ ಬಂದಿದ್ದಾರೆ, ಎಂದು ಹೇಳಿದ್ದಾರೆ. ಆದಾಗ್ಯೂ, ‘ಗಡಿ ದಾಟಲು ಅವರಿಗೆ ಯಾರು ಸಹಾಯ ಮಾಡಿದರು,’ ಎಂದು ಅವರು ಹೇಳಿಲ್ಲ. ಭದ್ರತಾ ಪಡೆಗಳು ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿವೆ.
ರಹಸ್ಯ ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಯಶವರ್ಧನ್ ಹೇಳಿದ್ದಾರೆ. ಈಗ ಅವರ ದಾಖಲೆಗಳು ಪೂರ್ಣಗೊಂಡ ನಂತರ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಕಾನೂನು ನಿಬಂಧನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರನ್ನ ಗಡೀಪಾರು ಮಾಡುವ ಬಗ್ಗೆಯೂ ಸಹ ವಿಚಾರ ಮಾಡಲಾಗುತ್ತಿದೆ. ಹತ್ತಿರದಲ್ಲಿ ಯಾವುದೇ ಶಿಬಿರವಿಲ್ಲದ ಕಾರಣ, ದೆಹಲಿಯಲ್ಲಿನ ಶಿಬಿರದೊಂದಿಗೆ ಸಂಪರ್ಕ ಸಾಧಿಸಲಾಗುತ್ತಿದೆ. ಪೊಲೀಸರು ಅಲ್ಲಿನ ಇಟ್ಟಿಗೆ ಗೂಡುಗಳು ಮತ್ತು ಕಾರ್ಖಾನೆಗಳಲ್ಲಿನ ಕಾರ್ಮಿಕರನ್ನು ನಿರಂತರವಾಗಿ ತಪಾಸಣೆ ನಡೆಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿಯೂ ಇಂತಹ ತಪಾಸಣೆಗಳು ಮುಂದುವರಿಯುತ್ತವೆ ಎಂದಿದ್ದಾರೆ.
ಸಂಪಾದಕೀಯ ನಿಲುವುಇಂತವರಿಗೆ ಕೆಲಸ ನೀಡಿದ ಇಟ್ಟಿಗೆ ಗೂಡಿನ ಮಾಲೀಕನ ವಿರುದ್ಧವೂ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ! |