ಛಗನ ಭುಜಬಲ ಅವರ ಹಿಂದೂ ವಿರೋಧಿ ಹೇಳಿಕೆ !

ನಾಸಿಕ – ಇಲ್ಲಿ ಆಯೋಜಿಸಲಾದ ಕೃಷಿ ಉತ್ಸವದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣದ ನಾಯಕ ಛಗನ್ ಭುಜಬಲ್ ಅವರು `ಹಿಮಾಲಯದಲ್ಲಿ ಅನೇಕ ಸಂತ-ಮಹಾತ್ಮರಿದ್ದಾರೆ, ಅವರನ್ನು ಏನು ಮಾಡಬೇಕು? ಅವರಿಂದ ಏನಾದರೂ ಉಪಯೋಗವಿದೆಯೇ? ನನಗೆ ಹೇಳಿರಿ,’ ಎಂದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ಟೀಕೆ ವ್ಯಕ್ತವಾಗುತ್ತಿದೆ.
ನಿಮ್ಮ ಪಕ್ಷದವರು ನಿಮ್ಮನ್ನೇ ಹಿಮಾಲಯಕ್ಕೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ ! – ತುಷಾರ ಭೋಸಲೆ, ಆಧ್ಯಾತ್ಮಿಕ ಒಕ್ಕೂಟ, ಭಾಜಪ

ಕೆಲವು ಸಾಧು-ಸಂತರು ಸಮಾಜದಲ್ಲಿದ್ದು ಕಾರ್ಯ ಮಾಡುತ್ತಿದ್ದರೆ ಇನ್ನು ಕೆಲವರು ಸಮಾಜದ ಕಲ್ಯಾಣಕ್ಕಾಗಿ ಹಿಮಾಲಯಕ್ಕೆ ಹೋಗಿ ತಪಸ್ಸು ಮತ್ತು ಸಾಧನೆ ಮಾಡುತ್ತಾರೆ. ಅವರು ಭುಜಬಲನಂತೆ ಸಮಾಜದ ಜೀವದ ಮೇಲೆ ತಮ್ಮ ಮನೆ ತುಂಬಿಕೊಳ್ಳುವುದಿಲ್ಲ ಅಥವಾ ತಮ್ಮ ಸ್ವಂತ ಪುತ್ರರು ಮತ್ತು ಸೋದರಳಿಯರನ್ನು ಶಾಸಕರು ಮತ್ತು ಸಂಸದರನ್ನಾಗಿ ಮಾಡಲು ಸಮಾಜವನ್ನು ಬಳಸುವುದಿಲ್ಲ. ಭುಜಬಲ್ ಅವರೇ, ನಿಮ್ಮ ಪಕ್ಷ ನಿಮ್ಮನ್ನೇ ಹಿಮಾಲಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದೆ. ಅತ್ತ ಕಡೆಗೆ ಸರಿಯಾಗಿ ನೋಡಿರಿ’, ಎಂದು ಹೇಳಿದರು. “ಸಾಧು- ಸಂತರ ಬೋಧನೆಯ ಕಾರ್ಯವನ್ನು ಮಾಡುತ್ತಾರೆ ಮತ್ತು ಅವರೇ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾರೆ’ ಎಂದು ಕೃಷಿ ಮತ್ತು ಮಾಜಿ ಸೈನಿಕರ ಕಲ್ಯಾಣ ಸಚಿವ ದಾದಾ ಭುಸೆ ಅವರು ಛಗನ ಭುಜಬಲ್ ಅವರಿಗೆ ಪ್ರತ್ಯುತ್ತರ ನೀಡಿದರು.
ಸಂಪಾದಕೀಯ ನಿಲುವುಇಂದು, ಪ್ರಪಂಚದಾದ್ಯಂತ ಅನೇಕ ಸಂಸ್ಕೃತಿಗಳು ನಾಶವಾಗಿವೆ, ಇನ್ನೂ ಕೆಲವು ಸಂಸ್ಕೃತಿಗಳು ಅಳಿವಿನ ಅಂಚಿನಲ್ಲಿವೆ. ಭಾರತದ ಮೇಲೆ ಅನೇಕ ಆಕ್ರಮಣಗಳು ನಡೆದವು; ಆದರೆ ಈ ಪರಿಸ್ಥಿತಿಯಲ್ಲಿಯೂ ಸಹ, ಹಾಗೂ ಹಿಮಾಲಯದಲ್ಲಿರುವ ಸಾಧು-ಸಂತರಿಂದಾಗಿ ಭಾರತೀಯ ಸಂಸ್ಕೃತಿ ಉಳಿದುಕೊಂಡಿದೆ ಮತ್ತು ಭಾರತದ ಅಸ್ತಿತ್ವವು ಸಹ ಅಖಂಡವಾಗಿದೆ, ಭುಜಬಲ್ ಪ್ರಗತಿಪರರು ಆಗಿದ್ದರಿಂದ ಅವರಿಗೆ ಸಾಧು-ಸಂತರ ಕೊಡುಗೆಯ ಹಿಂದಿರುವ ಅಧ್ಯಾತ್ಮಶಾಸ್ತ್ರ ಅರ್ಥವಾಗುವುದು ಎನ್ನುವ ಅಪೇಕ್ಷೆಯೂ ಇಲ್ಲ. ಈ ಸಾಧು-ಸಂತರಿಂದಲೇ ಭಾರತ ವಿಶ್ವಗುರುವಾಗಬಹುದು ಮತ್ತು ಇದೇ ಭಾರತದ ನಿಜವಾದ ಗುರುತಾಗಿದೆ; ಆದರೆ ಕೇವಲ ಪ್ರಗತಿಶೀಲತೆ ಮಾತ್ರ ಬಯಸುವ ಭುಜಬಲ್ ಅವರಿಗೆ ಇದರ ಬಗ್ಗೆ ಏನು ತಿಳಿಯುತ್ತದೆ ? |