ಒರ್ವನನ್ನು ಥಳಿಸಿದರು !
ಮುಂಬಯಿ – ಮುಲುಂಡ (ಪಶ್ಚಿಮ)ನಲ್ಲಿ ಹಣದ ಬಗ್ಗೆ ನಡೆದ ಸಣ್ಣ ವಿವಾದದಿಂದ ಸಚಿವಾಲಯದ ಮುಖ್ಯಮಂತ್ರಿ ಕಚೇರಿಯ ಗ್ರೂಪ ಡಿ ನೌಕರನನ್ನು ಮುಸ್ಲಿಮರು ಹರಿತವಾದ ಮಾರಕಾಸ್ತ್ರದಿಂದ ಇರಿದು ಹತ್ಯೆ ಮಾಡಿದ್ದಾರೆ. ಕೊಲೆಯಾದ ಯುವಕನ ಹೆಸರು ಅಕ್ಷಯ ನಾರ್ವೇಕರ ಆಗಿದೆ. ಈ ಪ್ರಕರಣದಲ್ಲಿ ಇಮ್ರಾನ ಮೆಹಮೂದ ಖಾನ್, ಸಲೀಂ ಮೆಹಮೂದ ಖಾನ್, ಫಾರೂಕ ಬಾಗವಾನ, ನೌಶಾದ ಬಾಗವಾನ ಮತ್ತು ಅಬ್ದುಲ ಬಾಗವಾನ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ನ್ಯಾಯಾಲಯವು ಈ ಎಲ್ಲಾ ಆರೋಪಿಗಳನ್ನು ಮೇ 8 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಅಕ್ಷಯ ನಾರ್ವೇಕರ ಜೊತೆಗಿದ್ದ ಆಕಾಶ ಸಾಬಳೆಗೂ ಮುಸಲ್ಮಾನರು ಥಳಿಸಿದ್ದಾರೆ. ಸಾಬಳೆ ಅವರ ಸ್ಥಿತಿ ಗಂಭೀರವಾಗಿದ್ದು, ಅವರು ಶೀವ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
1. ಏಪ್ರಿಲ್ 28 ರಂದು ಅಕ್ಷಯ ನಾರ್ವೇಕರ ಅವರು ಠಾಣೆಯ ಕಿಸನ ನಗರದಲ್ಲಿರುವ ಇಮ್ರಾನ ಚಿಕನ ಸೆಂಟರ್‌ನಿಂದ ಚಿಕನ್ ತಂದೂರಿಯನ್ನು ಖರೀದಿಸಿದ್ದರು. ಈ ವೇಳೆ ನಗದು ಇಲ್ಲದ ಕಾರಣ ಇಮ್ರಾನ ಮತ್ತು ಅಕ್ಷಯ ನಡುವೆ ವಾಗ್ವಾದ ನಡೆದಿದೆ. ಆಗ ಅಕ್ಷಯ ‘ಗೂಗಲ್ ಪೇ’ ಮೂಲಕ ಹಣ ಪಾವತಿಸಿದ್ದಾರೆ.
2. ಅದೇ ದಿನ ಸಂಜೆ, ಅಕ್ಷಯ ನಾರ್ವೇಕರ ಮತ್ತು ಆಕಾಶ ಸಾಬಳೆ ಅವರು ಮುಲುಂಡ (ಪಶ್ಚಿಮ) ನಲ್ಲಿರುವ ಇಮ್ರಾನ ಅವರ ಸ್ನೇಹಿತ ಸಲೀಮ ಅವರ ಚಿಕನ ಸೆಂಟರಗೆ ಹೋಗಿದ್ದರು. ಅಲ್ಲಿ ಇಮ್ರಾನ ಇದ್ದ. ಈ ವೇಳೆ ಅವರ ನಡುವೆ ವಾಗ್ವಾದ ನಡೆದು ಜಗಳ ಮಾಡಿಕೊಂಡಿದ್ದಾರೆ. ಈ ವಾದದ ನಂತರ ಅಕ್ಷಯ ನಾರ್ವೇಕರ ಮತ್ತು ಆಕಾಶ ಸಾಬಳೆ ಠಾಣೆಗೆ ಹೊರಟು ಹೋದರು.
3. ಬಳಿಕ ಸಲೀಂ ಮತ್ತು ಇಮ್ರಾನ ಇಬ್ಬರೂ ಅವರ ಬೆನ್ನಟ್ಟಿದ್ದರು. ಠಾಣೆಯ ವೈಶಾಲಿನಗರ ಬಸ ನಿಲ್ದಾಣದಲ್ಲಿ ನಿಂತಿದ್ದ ಅಕ್ಷಯ ನಾರ್ವೇಕರ ಮತ್ತು ಆಕಾಶ ಸಾಬಳೆ ಮೇಲೆ ಸಲೀಂ ಮತ್ತು ಇಮ್ರಾನ ಮಟನ ಕೊಯ್ಯುವ ಚೂರಿ ಮತ್ತು ಕಬ್ಬಿಣದ ರಾಡನಿಂದ ಹಲ್ಲೆ ನಡೆಸಿದ್ದಾರೆ.
4. ಅಕ್ಷಯ ನಾರ್ವೇಕರ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಕಾಶ ಅಲ್ಲಿಯೇ ಮೂರ್ಛೆ ಹೋದರು.
ಸಂಪಾದಕೀಯ ನಿಲುವುಸಣ್ಣ ವಿವಾದದಿಂದ ನೇರವಾಗಿ ಹಿಂದೂಗಳ ಕೊಲ್ಲುವಷ್ಟು ಉದ್ಧಟರಾಗಿರುವ ಮುಸ್ಲಿಮರು ! ಇಂತಹವರಿಗೆ ಪಾಠವನ್ನು ಕಲಿಸಲು ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ? |