ಅಲಿಗಡ (ಉತ್ತರ ಪ್ರದೇಶ) – ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 21 ರಂದು ಹೋಳಿ ಆಡುತ್ತಿದ್ದ ಹಿಂದೂ ವಿದ್ಯಾರ್ಥಿಗಳನ್ನು ಮುಸ್ಲಿಂ ವಿದ್ಯಾರ್ಥಿಗಳು ಥಳಿಸಿರುವುದು ವರದಿಯಾಗಿದ್ದು ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ವಿದ್ಯಾರ್ಥಿಗಳನ್ನು ಬೆನ್ನಟ್ಟಿ ಥಳಿಸುತ್ತಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ. ಹಿಂದೂ ವಿದ್ಯಾರ್ಥಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ಓಡುತ್ತಿರುವ ದೃಶ್ಯ ಕೂಡ ವಿಡಿಯೋದಲ್ಲಿ ಕಂಡುಬಂದಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಂದೂ ದೇವತೆಗಳನ್ನು ನಿಂದಿಸಿದ್ದರು ಎಂಬ ವರದಿಗಳಿವೆ.
Today, Muslims attacked Hindu students and misbehaved with female students who had organized Holi celebration at AMU.
Not to forget, just yesterday Assam STF caught AMU topper Haris Farooqi who is ISIS India head and was planning to plant IEDs in India.
But if you call them… pic.twitter.com/M1ez1N1N9R
— BALA (@erbmjha) March 21, 2024
1. “ನಾವು ಎಎಂಯುನ ಎಂಜಿನಿಯರಿಂಗ್ ವಿಭಾಗದ ಪರಿಸರದಲ್ಲಿ ಹೋಳಿ ಆಡಲು ಹೋದಾಗ, ಮುಸ್ಲಿಂ ವಿದ್ಯಾರ್ಥಿಗಳು ಗುಂಪಿನಲ್ಲಿ ಬಂದು ನಮ್ಮನ್ನು ಥಳಿಸಲು ಪ್ರಾರಂಭಿಸಿದರು,” ಎಂದು ದಾಳಿಗೊಳಗಾದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಅನೇಕ ಹಿಂದೂ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
2. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ಸಂತ್ರಸ್ತ ಹಿಂದೂ ವಿದ್ಯಾರ್ಥಿಗಳು ಪೊಲೀಸರಿಗೆ ನೀಡಿರುವ ದೂರಿನಲ್ಲಿ ‘ಹೋಳಿ ಆಡುವಾಗ ಹಲ್ಲೆ ನಡೆಸುವವರನ್ನು ಶಿಕ್ಷಿಸಬೇಕು’ ಎಂದು ಆಗ್ರಹಿಸಿದ್ದಾರೆ.
3. ದೂರಿನ ಪ್ರಕಾರ, ಮುಸ್ಲಿಂ ವಿದ್ಯಾರ್ಥಿಗಳಾದ ಮಿಸ್ವಾ, ಝಕಿಯುರ್ ರೆಹಮಾನ್, ಝೈದ್ ಶೆರ್ಬಾನಿ, ಶಾರುಖ್ ಸಾಬ್ರಿ, ಶೋಯೆಬ್ ಖುರೇಷಿ, ಅಹ್ಮದ್ ಮುಸ್ತಫಾ, ಅಫಾನ್ ಶೆರ್ಬಾನಿ, ಸೆಹ್ವಾನ್ ಖಾನ್, ಫೈಸಲ್, ಅರ್ಸಾನ್ ಸಿದ್ದಿಕಿ ಮೊದಲಾದವರು ಬಂದೂಕು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದಿದೆ.
ಸಂಪಾದಕೀಯ ನಿಲುವು‘ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರಾಗಿದ್ದಾರೆ’ ಎಂದು ಹೇಳುವವರು ಈ ಬಗ್ಗೆ ಏನು ಹೇಳುತ್ತಾರೆ ? |