Close
ಭಾದ್ರಪದ ಶುಕ್ಲಪಕ್ಷ ದ್ವಿತೀಯ, ಕಲಿಯುಗ ವರ್ಷ ೫೧೧೯

ಹಬ್ಬ – ವ್ರತಗಳು

ಚಂದ್ರದರ್ಶನ ನಿಷೇಧ

ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು; ಏಕೆಂದರೆ ಚಂದ್ರನು ಮನಸ್ಸನ್ನು ಕಾರ್ಯಮಾಡಲು ಉದ್ಯುಕ್ತಗೊಳಿಸುವವನಾಗಿದ್ದಾನೆ. ಸಾಧಕರಿಗಂತೂ ಮನೋಲಯ ಮಾಡುವುದಿರುತ್ತದೆ. ಗ್ರಹಮಾಲೆಯಲ್ಲಿ ಚಂದ್ರನು ಚಂಚಲನಾಗಿದ್ದಾನೆ, ಅಂದರೆ ಅವನ ಆಕಾರವು ಸಣ್ಣದು-ದೊಡ್ಡದು ಆಗುತ್ತಿರುತ್ತದೆ, ಹಾಗೆಯೇ ಶರೀರದಲ್ಲಿ ಮನಸ್ಸು ಚಂಚಲವಾಗಿದೆ.

ಧಾರ್ಮಿಕ ಉತ್ಸವದ ಸಮಯದಲ್ಲಿ ಬಲವಂತವಾಗಿ ಚಂದಾ ಕೇಳುವವರ ವಿರುದ್ಧ ಇಂದೇ ಕ್ರಮಕೈಗೊಳ್ಳಿರಿ !

ಶ್ರೀ ಗಣೇಶೋತ್ಸವದ ಸಮಯದಲ್ಲಿ ಬಲವಂತವಾಗಿ ನಿಧಿ ಸಂಗ್ರಹಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಪ್ರತಿಯೊಬ್ಬ ದೇಶಪ್ರೇಮಿ ನಾಗರಿಕನ ಹಾಗೂ ಪೊಲೀಸರ ಕರ್ತವ್ಯವಾಗಿದೆ. ಇಂದು ಧಾರ್ಮಿಕ ಉತ್ಸವ ಕ್ಕಾಗಿ ಚಂದಾ ವಸೂಲಿ ಮಾಡುವಾಗ ಬಲ ಪ್ರಯೋಗಿಸುವವರು ಮುಂದೆ ಸುಲಿಗೆ ಮಾಡುವವರಾಗಿ ನಿರ್ಮಾಣವಾಗುತ್ತಾರೆ, ಎಂಬುದನ್ನು ಗಮನದಲ್ಲಿಡಿ. ಈ ರೀತಿ ಬಲವಂತ ಮಾಡುವವರ ವಿರುದ್ಧ ಪೊಲೀಸರಲ್ಲಿ ದೂರು ನೀಡಿ. ದಣಿವಾರಿಸಲು, ರಾತ್ರಿಯೆಲ್ಲಾ ಮಂಟಪಕ್ಕೆ ಪಹರೆ ನೀಡಲು ಎಂದು ನೆಪ ಹೇಳಿ ಗಣೇಶೋತ್ಸವದ ಸ್ಥಳದಲ್ಲಿ ಜೂಜಾಡುವುದು ಹಾಗೂ ಮದ್ಯಪಾನ ಮಾಡುವುದು, ಇವೆಲ್ಲವೂ ಧರ್ಮವಿರೋಧಿ ಯಾಗಿದೆ. ಗಣೇಶೋತ್ಸವದಲ್ಲಿ […]

ಶ್ರೀ ಗಣೇಶಮೂರ್ತಿಯ ವಿಸರ್ಜನೆ

‘ಭಾದ್ರಪದ ಶುಕ್ಲ ಚತುರ್ಥಿಯಂದು ಜನರು ಜೇಡಿ ಮಣ್ಣಿನ ಗಣಪತಿಯ ಮೂರ್ತಿಯನ್ನು ಮಾಡಿ ಅದನ್ನು ಪೂಜಿಸುತ್ತಾರೆ. ಅದರ ಮೂಲ ಕಾರಣವೆಂದರೆ, ಶ್ರಾವಣ ಶುಕ್ಲ ಚತುರ್ಥಿಯಿಂದ ಭಾದ್ರಪದ ಶುಕ್ಲ ಪಕ್ಷ ಚತುರ್ಥಿಯ ತನಕ ಪ್ರತಿದಿನ ಗಣಪತಿಯ ಮೂರ್ತಿ ತಯಾರಿಸಿ ಅದರ ಪೂಜೆ ಮಾಡಬೇಕು ಹಾಗೂ ಅದನ್ನು ವಿಸರ್ಜನೆ ಮಾಡಬೇಕು,

ಶ್ರೀ ಗಣೇಶಚತುರ್ಥಿಯಂದು ಪೂಜಿಸಬೇಕಾದ ಮೂರ್ತಿಯನ್ನು ಧರ್ಮಶಾಸ್ತ್ರಕ್ಕನುಸಾರ ತಯಾರಿಸಿಕೊಳ್ಳುವುದರ ಬಗ್ಗೆ ಸಂದೇಹ ನಿವಾರಣೆ

ಚಿತ್ರಕಲೆಯ ಹೆಸರಲ್ಲಿ ಮನಬಂದ ರೂಪದಲ್ಲಿ ಗಣಪತಿ ಬಿಡಿಸುವುದು : ವಿದ್ಯಾರ್ಥಿ ಮಿತ್ರರೇ, ಗಣಪತಿಯನ್ನು ಯಾವುದೇ ರೂಪದಲ್ಲಿ ಬಿಡಿಸುವುದು ಕಲೆಯಲ್ಲ. ಇದು ಪಾಪವಾಗಿದೆ. ಕಾರ್ಟೂನ್ ರೂಪದಲ್ಲಿ ಹಾಗೂ ಯಾವುದೇ ರೂಪದಲ್ಲಿ ಗಣಪತಿ ಬಿಡಿಸುವುದು, ದೇವರ ಅವಮಾನವೇ ಆಗಿದೆ.

ಶ್ರೀ ಗಣೇಶಚತುರ್ಥಿ ಕಾಲದಲ್ಲಿ ಮಾಡುವಂತಹ ಉಪಾಸನೆಯ ಹಿಂದಿನ ಶಾಸ್ತ್ರ

ದೇವತೆಗಳಿಗೆ ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆ ಮಾಡುವಾಗ ಮಾಡಬೇಕಾದ ಕೃತಿ ಮತ್ತು ಹೇಳಬೇಕಾದ ಮಂತ್ರ ಇವುಗಳ ಅರ್ಥವನ್ನು ತಿಳಿದುಕೊಂಡು ಪೂಜೆ ಮಾಡಿದರೆ ಅದು ಹೆಚ್ಚು ಭಾವಪೂರ್ಣವಾಗಿ ದೇವತೆಗಳ ಕೃಪೆಯಾಗುತ್ತದೆ. ಈ ಕಿರುಗ್ರಂಥದಲ್ಲಿ ಶ್ರೀ ಗಣೇಶನ ಪೂಜೆಯ ಪೂರ್ವತಯಾರಿ, ಹಾಗೆಯೇ ಶ್ರೀ ಗಣೇಶ ಪೂಜಾವಿಧಿಯನ್ನು ಅರ್ಥಸಹಿತ ಕೊಡಲಾಗಿದೆ.

ಉತ್ಸವದ ಸಮಯದಲ್ಲಿ ಆದರ್ಶ ಮೆರವಣಿಗೆಯನ್ನು ಮಾಡುವ ಪದ್ಧತಿ !

ಮೆರವಣಿಗೆಯೆಂದರೆ ಉತ್ಸವಮೂರ್ತಿಯ ಕುರಿತು ವ್ಯಕ್ತಪಡಿಸುವ ಪ್ರೇಮವಾಗಿದೆ. ಆದರೆ ಮೆರವಣಿಗೆಯ ಹೆಸರಿನಲ್ಲಿ ಒಂದು ವೇಳೆ ತಪ್ಪು ಆಚರಣೆಗಳು ಆಗುತ್ತಿದ್ದರೆ, ಅದು ಉತ್ಸವ ಮೂರ್ತಿಯ ಅಪಮಾನವೇ ಆಗಿದೆ. ಹೀಗಿರುವಾಗ ಇಂತಹ ಮೆರವಣಿಗೆಗಳು ಉತ್ಸವಮೂರ್ತಿಗೆ ಇಷ್ಟವಾಗಬಹುದೇ ? ಇಲ್ಲವಲ್ಲ ? ಆದುದರಿಂದ ಮುಂದಿನ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಶ್ರೀ ಗಣೇಶಮೂರ್ತಿಯ ವಿಸರ್ಜನೆಯನ್ನು ಕೃತಕ ಕೊಳ (ಟ್ಯಾಂಕಿ)ದಲ್ಲಿ ಏಕೆ ಮಾಡಬಾರದು ?

‘ಮಾಲಿನ್ಯಮುಕ್ತ ಗಣೇಶಮೂರ್ತಿ ವಿಸರ್ಜನೆ’ಯ ಹೆಸರಿನಡಿಯಲ್ಲಿ ಕೆಲವು ಮಹಾನಗರ ಪಾಲಿಕೆಗಳು, ಸ್ಥಳೀಯ ಆಡಳಿತಗಳು, ಧರ್ಮ ದ್ರೋಹಿ ಸಂಘಟನೆಗಳು, ಸ್ವಯಂಸೇವಿ ಸಂಸ್ಥೆಗಳು ಮುಂತಾದವುಗಳಿಂದ ಅಲ್ಲಲ್ಲಿ ತಾತ್ಕಾಲಿಕ ನೀರಿನ ಕೊಳಗಳನ್ನು ನಿರ್ಮಿಸಲಾಗುತ್ತದೆ.

ಕು. ಸರ್ವಮಂಗಳ ಮೇದಿಯವರು ಚಿತ್ರ ಬಿಡಿಸಿ ಸಾಕಾರಗೊಳಿಸಿದ ಶ್ರೀ ಗಣೇಶನ ಭಾವಪೂರ್ಣ ಪೂಜೆ !

ಸೌ. ಉಮಕ್ಕಾ ರಚಿಸಿದ ಗಣೇಶ ಚತುರ್ಥಿಯ ಚಿತ್ರವನ್ನು ನೋಡಿ ‘ಇದರಿಂದ ನಾವೇನು ಕಲಿಯಬೇಕು? ಎಂದು ವಿಚಾರ ಮಾಡುತ್ತಿರುವಾಗ ಮುಂದಿನ ಚಿತ್ರ ಮನಸ್ಸಲ್ಲಿ ಮೂಡಿತು. ಪ.ಪೂ. ಗುರುದೇವ, ಪ್ರತಿದಿನ ನಮ್ಮಿಂದ ಸೂಕ್ಷ್ಮ ರೂಪದಲ್ಲಿ ಗಣಪತಿಯ ಪೂಜೆಯನ್ನು (ಸಾಧನೆ) ಮಾಡಿಸಿಕೊಂಡು ಸಾಧನೆಯಲ್ಲಿ ಮುಂದು ಮುಂದಕ್ಕೆ ಕರೆದೊಯ್ಯುತ್ತಿದ್ದಾರೆ.

ದೂರ್ವೆ ಮತ್ತು ಕೆಂಪು ಹೂವನ್ನು ಹೇಗೆ ಅರ್ಪಿಸಬೇಕು ?

ದೂರ್ವೆಗಳನ್ನು ವಿಷಮ ಸಂಖ್ಯೆಯಲ್ಲಿ (ಕಡಿಮೆ ಪಕ್ಷ ಮೂರು, ಐದು, ಏಳು ಅಥವಾ ಇಪ್ಪತ್ತೊಂದು ಇತ್ಯಾದಿ) ಅರ್ಪಿಸಬೇಕು. ದೂರ್ವೆಯ ಗರಿಗಳು ಸಹ ವಿಷಮ ಸಂಖ್ಯೆಯಲ್ಲಿರಬೇಕು. ಎಳೆಯ ದೂರ್ವೆಯ ಗೊಂಚಲುಗಳನ್ನು ನೀರಿನಲ್ಲಿ ಮುಳುಗಿಸಿ. ಅರ್ಪಿಸುವಾಗ ಗಣೇಶನ ಮುಖವನ್ನು ಬಿಟ್ಟು ಸಂಪೂರ್ಣ ಮೂರ್ತಿಯು ಮುಚ್ಚುವಂತೆ ಅರ್ಪಿಸಬೇಕು. ದಾಸವಾಳ ಅಥವಾ ಇತರ ಕೆಂಪು ಹೂವುಗಳನ್ನು ಅರ್ಪಿಸುವಾಗ ತೊಟ್ಟು ಶ್ರೀ ಗಣೇಶನ ಚರಣಗಳ ಕಡೆಗೆ, ಹೂವಿನ ಎಸಳುಗಳ ಭಾಗವು ನಮ್ಮ ಕಡೆಗೆ ಬರುವಂತೆ ಅರ್ಪಿಸಬೇಕು.

ಗಣೇಶತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು

ಮುಂದೆ ನೀಡಿದ ರಂಗೋಲಿಯಿಂದ ಶ್ರೀ ಗಣೇಶತತ್ತ್ವವನ್ನು ಆಕರ್ಷಿತ ಮತ್ತು ಪ್ರಕ್ಷೇಪಿಸುವುದರಿಂದ ಅಲ್ಲಿನ ವಾತಾವರಣದಲ್ಲಿ ಗಣೇಶತತ್ತ್ವವು ತುಂಬಿ ಅದರಿಂದ ಎಲ್ಲರಿಗೂ ಲಾಭವಾಗುತ್ತದೆ.   ರಂಗೋಲಿಯಲ್ಲಿ ಸಾಧ್ಯವಾದಷ್ಟು ಚಿತ್ರದಲ್ಲಿ ತೋರಿಸಿದ ಬಣ್ಣಗಳನ್ನು ಬಳಸಬೇಕು. ಕಾರಣ ಈ ಬಣ್ಣ ಸಾತ್ತ್ವಿಕವಾಗಿದೆ. ಇಂತಹ ಬಣ್ಣದಿಂದ ರಂಗೋಲಿಯ ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುತ್ತದೆ. ರಂಗೋಲಿಯ ಸಾತ್ತ್ವಿಕತೆಯು ಹೆಚ್ಚಾದರೆ ದೇವತೆಯ ತತ್ತ್ವ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗಲು ಸಹಾಯವಾಗುತ್ತದೆ. ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳ ಶಕ್ತಿಯು ಒಟ್ಟಿಗೆ ಇರುತ್ತದೆ, ಈ ಅಧ್ಯಾತ್ಮ ಶಾಸ್ತ್ರದಲ್ಲಿನ ತತ್ತ್ವಕ್ಕನುಸಾರ […]