ಕರ್ನಾಟಕದ ಹಿಂದೂ ದೇವಾಲಯಗಳಿಗೆಂದು ಮೀಸಲಿಟ್ಟ ಹಣವನ್ನು ಇತರ ಧಾರ್ಮಿಕ ಸಂಸ್ಥೆಗಳಿಗೆ ಖರ್ಚು ಮಾಡಲಾಗುವುದಿಲ್ಲ !

ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂ ದೇವಾಲಯಗಳಿಗೆ ಮೀಸಲಿಟ್ಟ ಹಣವನ್ನು ಪುರೋಹಿತರು ಮತ್ತು ಇತರ (ಮುಸ್ಲಿಂ ಇತ್ಯಾದಿ) ಧಾರ್ಮಿಕ ಸಂಸ್ಥೆಗಳ ನೌಕರರಿಗೆ ನೀಡಲಾಗುತ್ತದೆ. ಇದರ ವಿರುದ್ಧ ವಿವಿಧ ಹಿಂದೂ ಸಂಘಟನೆಗಳು ಮತ್ತು ಮುಖಂಡರು ಇತ್ತೀಚೆಗೆ ವ್ಯಕ್ತಪಡಿಸಿದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ‘ಇಂತಹ ಎಲ್ಲಾ ಆರ್ಥಿಕ ಸಹಾಯವನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಆದೇಶಿಸಿದ್ದಾರೆ.

ತಮಿಳುನಾಡಿನಲ್ಲಿ ಕಳೆದ ೩೬ ವರ್ಷಗಳಲ್ಲಿ ಹಿಂದೂ ದೇವಾಲಯದ ೪೭೦೦೦ ಎಕರೆ ಭೂಮಿ ನಾಪತ್ತೆ !

ಭಕ್ತರು ನಿದ್ರಿಸುತ್ತಿರುವುದರಿಂದ ಜನ್ಮಹಿಂದುಗಳೇ ದೇವಾಲಯಗಳ ಭೂಮಿಯನ್ನು ಕಬಳಿಸುತ್ತಿರುವುದು ಶೋಭಿಸುವಂತಹದ್ದಲ್ಲ ! ದೇವಾಲಯಗಳು ಮತ್ತು ದೇವಾಲಯದ ಆಸ್ತಿಯನ್ನು ರಕ್ಷಿಸುವುದು ಸಹ ಭಕ್ತಿಯೇ ಆಗಿದೆ ಎಂದು ಹಿಂದೂಗಳು ಯಾವಾಗ ಅರಿತುಕೊಳ್ಳುವರು ?

ಗಾಜಿಯಾಬಾದ್‍ನ ಡಾಸನಾ ದೇವಿ ದೇವಸ್ಥಾನಕ್ಕೆ ಸಂದೇಹಾಸ್ಪದವಾಗಿ ಬಂದ ಇಬ್ಬರು ಪೊಲೀಸ್ ವಶದಲ್ಲಿ !

ಪ್ರಸಿದ್ಧ ಡಾಸನಾ ದೇವಿ ದೇವಸ್ಥಾನದಲ್ಲಿ ಜೂನ್ ೨ ರ ರಾತ್ರಿ ಇಬ್ಬರು ಯುವಕರನ್ನು ದೇವಾಲಯದ ಸೇವಕರು ಹಿಡಿದಿದ್ದಾರೆ. ಇಬ್ಬರೂ ಯುವಕರು ತಾವು ಹಿಂದೂಗಳೆಂದು ಹೇಳಿಕೊಂಡು ದೇವಾಲಯದ ಪ್ರವೇಶದ್ವಾರಕ್ಕೆ ಬಂದಿದ್ದರು; ಆದರೆ ವಿಚಾರಣೆ ವೇಳೆ ಅವರಲ್ಲಿ ಒಬ್ಬರು ಮುಸಲ್ಮಾನ ಎಂದು ತಿಳಿದುಬಂದಿದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅವತಾರಿ ಕಾರ್ಯದೊಂದಿಗೆ ಸಂಬಂಧಿಸಿದ ಹೆಸರಿನ ಸಾಕ್ಷಿಯನ್ನು ನೀಡುವ ರಾಜಸ್ಥಾನದ ‘ಶ್ರೀಸತ್ ಚಿತ್ ದೇವಿ’ ದೇವಸ್ಥಾನ !

ರಾಜಸ್ಥಾನದ ಜೋಧಪುರದಲ್ಲಿ ಓಶಿಯಾ ಹೆಸರಿನ ಊರು ಇದೆ. ಇಲ್ಲಿ ಸತ್ಚಿಯಾದೇವಿಯ ದೇವಸ್ಥಾನವಿದೆ. ಈ ದೇವಿ ಎಂದರೆ ‘ಸತ್ಚಿತ್ ದೇವಿಯಾಗಿದ್ದಾಳೆ. ಸಾಧ್ಯವಾದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ದೇವಸ್ಥಾನದ ದರ್ಶನವನ್ನು ಪಡೆಯಬೇಕು. ಈ ದೇವಸ್ಥಾನಕ್ಕೆ ಹೋಗುವುದು ಬಹಳ ಮಹತ್ವದ್ದಾಗಿದೆ.