ತ್ರಾವಣಕೋರ ದೇವಸ್ವಮ್ ಮಂಡಳಿಗೆ ಸಂಬಂಧಿಸಿದ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಶಿಕ್ಷಕರ ನೇಮಕ

ತ್ರಾವಣಕೊರ ದೇವಸ್ವಮ್ ಮಂಡಳಿಯ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಮುಸಲ್ಮಾನ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಇಂತಹ ೪ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಶಮಿರಾ, ಬುಶರಾ ಬೇಗಮ್, ಮುಬಾಶ ಹಾಗೂ ಸುಮಯ್ಯಾ ಮಹಮ್ಮದ ಇವರ ಸಮಾವೇಶ ಇದೆ.

ಪೂರ್ವ ಲಡಾಖನಲ್ಲಿ ಭಾರತೀಯ ಸೈನಿಕರ ಸಿದ್ಧತೆಯಿಂದ ವಿರೋಧಕರಿಗೆ ಕಠಿಣ ಸಂದೇಶ ರವಾನೆಯಾಗಿದೆ ! – ರಕ್ಷಣಾಸಚಿವ

ಭಾರತೀಯ ವಾಯುದಳವು ಬಾಲಾಕೋಟದಲ್ಲಿ ಆಧುನಿಕ ಪದ್ದತಿಯಿಂದ ಮಾಡಿದ ದಾಳಿ ಹಾಗೂ ಪೂರ್ಣ ಲಡಾಕನಲ್ಲಿ ತ್ವರಿತವಾಗಿ ಸಾಮಗ್ರಿಗಳನ್ನು ಒಟ್ಟು ಮಾಡಿದ್ದರಿಂದ ವಿರೋಧಕರಿಗೆ ಕಠಿಣ ಸಂದೇಶ ರವಾನೆಯಾಗಿದೆ, ಎಂದು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಚೀನಾದ ಹೆಸರು ಉಚ್ಚರಿಸದೇ ಹೇಳಿದ್ದಾರೆ. ಭಾರತೀಯ ವಾಯುದಳದ ಮುಖ್ಯ ‘ಕಮಾಂಡರ‍್ಸ್’ಗಳಿಗಾಗಿ ಆಯೋಜಿಸಿದ ೩ ದಿನಗಳ ಪರಿಷತ್ತಿನ ಮೊದಲನೇ ದಿನದಲ್ಲಿ ಮಾತನಾಡಿದರು.

ದೇಶದಲ್ಲಿ ತ್ರಿವಳಿ ತಲಾಕ್ ಪ್ರಮಾಣ ಶೇ. ೮೨ ರಷ್ಟು ಇಳಿಕೆ ! – ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ ಅಬ್ಬಾಸ ನಕ್ವಿಯವರಿಂದ ಮಾಹಿತಿ

ದೇಶದಲ್ಲಿ ‘ಮುಸ್ಲಿಮ್ ಮಹಿಳಾ ವಿವಾಹ ಸಂರಕ್ಷಣ ಕಾಯ್ದೆ’ ಅಸ್ತಿತ್ವಕ್ಕೆ ಬಂದಾಗಿನಿಂದ ತ್ರಿವಳಿ ತಲಾಕ ಘಟನೆಗಳಲ್ಲಿ ಶೇ. ೮೨ ರಷ್ಟು ಇಳಿಕೆ ಆಗಿದೆ ಎಂದು ಕೇಂದ್ರದ ಅಲ್ಪಸಂಖ್ಯಾತ ಸಚಿವ ಮುಖ್ತಾರ ಅಬ್ಬಾಸ ನಕ್ವಿಯವರು ಮಾಹಿತಿಯನ್ನು ನೀಡಿದರು. ‘ಇತಿಹಾಸದಲ್ಲಿ ಆಗಸ್ಟ್ ೧ ರಂದು ‘ಮುಸ್ಲಿಮ್ ಮಹಿಳಾ ಅಧಿಕಾರ ದಿನ’ವಾಗಿದೆ’, ಎಂದು ಹೇಳಿದರು.

ಭಗವಾನ ಕಾರ್ತಿಕೇಯನ ಸ್ತುತಿಯನ್ನು ಅವಮಾನಿಸಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ಸರಕಾರವನ್ನು ಶ್ಲಾಘಿಸಿದ ನಟ ರಜನಿಕಾಂತ

ಭಗವಾನ ಕಾರ್ತಿಕೇಯನ ಸ್ತುತಿಯ ಅವಮಾನ ಮಾಡಿದ ಯೂ ಟ್ಯೂಬ್ ವಾಹಿನಿಯ ಮೇಲೆ ಸರಕಾರವು ಕ್ರಮಕೈಗೊಂಡಿದ್ದರಿಂದ ನಟ ರಜನಿಕಾಂತ ಇವರು ಸರಕಾರವನ್ನು ಶ್ಲಾಘಿಸಿದ್ದಾರೆ. ರಜನಿಕಾಂತ ಟ್ವೀಟ್ ಮಾಡುವ ಮೂಲಕ, ‘ಸ್ಕಂದ ಷಷ್ಠೀ ಕವಚಮ್’ಅನ್ನು ಭಗವಾನ ಕಾರ್ತಿಕೇಯನ ಗೌರವಾರ್ಥವಾಗಿ ಹಾಡಲಾಗುತ್ತದೆ.

ರಾಮಮಂದಿರದ ಭೂಮಿ ಪೂಜೆಗೆ ಆರಿಸಿದ ಅಗಸ್ಟ್ ೫ರ ಮುಹೂರ್ತ ಶುಭವಿಲ್ಲ ! – ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ರಾಮಮಂದಿರದ ಭೂಮಿ ಪೂಜೆಗೆ ಆರಿಸಿದ ಅಗಸ್ಟ ೫ರ ಮುಹೂರ್ತ ಶುಭವಿಲ್ಲ ಎಂದು ಜ್ಯೋತಿಷ್ಪೀಠಾಧೀಶ್ವರ ಹಾಗೂ ದ್ವಾರಕಾ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಹೇಳಿದ್ದಾರೆ.

ಭಾರತೀಯ ಸೇನಾ ಪಡೆಯಲ್ಲಿ ಶೇ. ೮೬ ರಷ್ಟು ಸೈನ್ಯ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ರಶಿಯನ್ ನಿರ್ಮಿತ ! – ಸ್ಟಿಸ್ಮನ ಸೆಂಟರ

ಭಾರತೀಯ ಸೇನಾಪಡೆಯಲ್ಲಿ ಶೇ. ೮೬ ರಷ್ಟು ಸೈನ್ಯ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳು ರಶಿಯನ್ ನಿರ್ಮಿತವಾಗಿವೆ, ಎಂಬ ಮಾಹಿತಿಯನ್ನು ಅಮೇರಿಕಾದ ‘ಸ್ಟಿಸ್ಮನ ಸೆಂಟರ್’ನ ವರದಿಯಲ್ಲಿ ಹೇಳಲಾಗಿದೆ. ನೌಕಾದಳದ ಶೇ. ೪೧ ರಷ್ಟು, ವಾಯುದಳದ ಎರಡು ಮೂರಂಶ ಸೈನಿಕರ ಉಪಕರಣಗಳು ರಶಿಯಾದಿಂದ ಆಮದು ಮಾಡಿಕೊಳ್ಳಲಾಗಿದೆ. ೨೦೧೪ ರಲ್ಲಿ ಶೇ. ೫೫ ಕ್ಕಿಂತಲೂ ಹೆಚ್ಚು ಉಪಕರಣಗಳು ರಶಿಯಾದಿಂದ ಆಮದು ಮಾಡಿಕೊಳ್ಳಲಾಗಿತ್ತು.

‘ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ ಜೀವನಪೂರ್ತಿ ಉಚಿತ ಧಾನ್ಯ ನೀಡುವೆನು !’ – ಮಮತಾ ಬ್ಯಾನರ್ಜಿಯವರಿಂದ ಜನರಿಗೆ ಆಮಿಷ

ತೃಣಮೂಲ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬಂದರೆ ಬಡವರಿಗೆ ಜೀವನಪೂರ್ತಿ ಉಚಿತವಾಗಿ ಧಾನ್ಯ ನೀಡುವುದು, ಎಂದು ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ‘ಆನ್‌ಲೈನ್’ ಸಭೆಯಲ್ಲಿ ಮತದಾರರಿಗೆ ಆಮಿಷ ನೀಡಿದ್ದಾರೆ. ರಾಜ್ಯದಲ್ಲಿ ೨೦೨೧ ರಲ್ಲಿ ವಿಧಾನಸಭೆ ಚುನಾವಣೆಯಾಗಲಿದ್ದು ಈ ಹಿನ್ನೆಲೆಯಲ್ಲಿ ಬ್ಯಾನರ್ಜಿಯವರು ಈ ಸಭೆಯನ್ನು ತೆಗೆದುಕೊಂಡಿದ್ದರು.

ಹಿಂದೂ ಧರ್ಮದ ಮೇಲೆ ಪುಸ್ತಕಗಳನ್ನು ಬರೆದು ತಮ್ಮನ್ನು ‘ತಜ್ಞ’ರು ಎಂದು ಹೇಳುಕೊಳ್ಳುವ ದೇವದತ್ತ ಪಟ್ನಾಯಕ ಇವರಿಂದ ಹಿಂದೂಗಳ ದೇವತೆಯ ಅವಮಾನ

ಹಿಂದೂ ಧರ್ಮ ಹಾಗೂ ಧರ್ಮಗ್ರಂಥಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿರುವಂತೆ ಹೇಳಿಕೊಂಡು ತಮ್ಮನ್ನೆ ತಾವು ‘ತಜ್ಞ’ರೆಂದು ಹೇಳಿಕೊಳ್ಳುವ ದೇವದತ್ತ ಪಟ್ನಾಯಕನವರು ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ.

ಭಾರತವು ನಿರ್ಮಿಸಿದ ಕೊರೋನಾ ಮೇಲಿನ ಮೊದಲನೇ ಲಸಿಕೆ ಮಾನವನ ಮೇಲೆ ಪ್ರಯೋಗ ಆರಂಭ

ಕೊರೋನಾ ರೋಗಾಣು ಮೇಲಿನ ‘ಕೋವ್ಯಾಕ್ಸಿನ್’ ಈ ಮೊದಲನೇಯ ದೇಶಿ ಲಸಿಕೆಯ ಮನುಷ್ಯನ ಮೇಲಿನ ಪ್ರಯೋಗವು ದೆಹಲಿಯ ‘ಎಮ್ಸ್’ ಆಸ್ಪತ್ರೆಯಲ್ಲಿ ಆರಂಭವಾಗಿದೆ. ಮೊದಲ ಹಂತದಲ್ಲಿ ೩೭೫ ಸ್ವಯಂಸೇವಕರಿಗೆ ‘ಕೊವ್ಯಾಕ್ಸಿನ್’ ಲಸಿಕೆ ನೀಡಲಾಗುವುದು. ‘ಎಮ್ಸ್’ ಆಸ್ಪತ್ರೆಯಲ್ಲಿ ೧೦೦ ಸ್ವಯಂಸೇವಕರ ಮೇಲೆ ಈ ಲಸಿಕೆಯ ಪರೀಕ್ಷಣೆ ಮಾಡಲಾಗುವುದು,

ಅಫ್ಘಾನಿಸ್ತಾನದಿಂದ ೭೦೦ ಸಿಕ್ಖ್ ಹಾಗೂ ಹಿಂದೂಗಳನ್ನು ಭಾರತಕ್ಕೆ ಕರೆತರಲಾಗುವುದು !

ಅಫ್ಘಾನಿಸ್ತಾನದಲ್ಲಿ ಮತಾಂಧರಿಂದ ಹಾಗೂ ಜಿಹಾದಿ ಭಯೋತ್ಪಾದಕರಿಂದ ಸಿಕ್ಖ್ ಹಾಗೂ ಹಿಂದೂಗಳ ಮೇಲಾಗುತ್ತಿರುವ ದಾಳಿಯಿಂದಾಗಿ ಭಾರತ ಸರಕಾರ ಅಲ್ಲಿರುವ ೭೦೦ ಸಿಕ್ಖ್ ಹಾಗೂ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡಲಿದೆ. ಅದಕ್ಕಾಗಿ ಅವರನ್ನು ಶೀಘ್ರದಲ್ಲೇ ದೆಹಲಿಗೆ ಕರೆತರುವ ವ್ಯವಸ್ಥೆಯನ್ನು ಮಾಡಲಿದೆ.