ಅಫ್ಘಾನಿಸ್ತಾನದಿಂದ ೭೦೦ ಸಿಕ್ಖ್ ಹಾಗೂ ಹಿಂದೂಗಳನ್ನು ಭಾರತಕ್ಕೆ ಕರೆತರಲಾಗುವುದು !

ಅಫ್ಘಾನಿಸ್ತಾನದಲ್ಲಿ ಮತಾಂಧರಿಂದ ಹಾಗೂ ಜಿಹಾದಿ ಭಯೋತ್ಪಾದಕರಿಂದ ಸಿಕ್ಖ್ ಹಾಗೂ ಹಿಂದೂಗಳ ಮೇಲಾಗುತ್ತಿರುವ ದಾಳಿಯಿಂದಾಗಿ ಭಾರತ ಸರಕಾರ ಅಲ್ಲಿರುವ ೭೦೦ ಸಿಕ್ಖ್ ಹಾಗೂ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ನೀಡಲಿದೆ. ಅದಕ್ಕಾಗಿ ಅವರನ್ನು ಶೀಘ್ರದಲ್ಲೇ ದೆಹಲಿಗೆ ಕರೆತರುವ ವ್ಯವಸ್ಥೆಯನ್ನು ಮಾಡಲಿದೆ.

ಬಂಗಾಲದ ಉತ್ತರ ೨೪ ಪರಗಣಾದಲ್ಲಿ ಭಾಜಪ ಕಛೇರಿಯ ಮೇಲೆ ಅಜ್ಞಾತರಿಂದ ನಾಡಬಾಂಬ್‌ನಿಂದ ದಾಳಿ

ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆಯ ಜಗತದಲದಲ್ಲಿ ಜುಲೈ ೧೯ ರಂದು ಬೆಳಿಗ್ಗೆ ಭಾಜಪದ ಕಛೇರಿಯ ಮೇಲೆ ಅಜ್ಞಾತರು ನಾಡಬಾಂಬ್‌ನಿಂದ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಕಛೇರಿಯಲ್ಲಿ ಯಾರೂ ಉಪಸ್ಥಿತರಿರಲಿಲ್ಲ. ಆದ್ದರಿಂದ ಇಲ್ಲಿ ಯಾರಿಗೂ ಜೀವಹಾನಿಯಾಗಲಿಲ್ಲ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.

ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುತ್ತಿರುವುದು ‘ಬಾಲಿವುಡ್’ನ ಷಡ್ಯಂತ್ರ ! – ನಟಿ ಪಾಯಲ ರೊಹತಗಿ

‘ಪಿಕೆ’ಯಂತಹ ಚಲನಚಿತ್ರ, ‘ಪಾತಾಲಲೋಕ’ನಂತಹ ವೆಬ್‌ಸೀರಿಸ್ ಮಾಧ್ಯಮಗಳಿಂದ ಹಿಂದೂ ಧರ್ಮದ ಮೇಲೆ ಕ್ರಮಬದ್ಧವಾಗಿ ಆಘಾತ ಮಾಡುವ ‘ಬಾಲಿವುಡ್’ನ ಷಡ್ಯಂತ್ರವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಧರ್ಮ, ದೇವತೆಗಳು, ಪರಂಪರೆ ಇತ್ಯಾದಿಗಳನ್ನು ಅಣಕಿಸಲಾಗುತ್ತಿದೆ. ಹಿಂದೂ ಸಮಾಜ ಇದರ ಬಗ್ಗೆ ಧ್ವನಿ ಎತ್ತದ ಕಾರಣ ‘ಬಾಲಿವುಡ್’ನಲ್ಲಿ ಹಿಂದೂದ್ರೋಹಕ್ಕೆ ನೀರುಗೊಬ್ಬರ ಹಾಕಲಾಗುತ್ತಿದೆ.

ಇಸ್ಲಾಂಗೆ ಮತಾಂತರವಾಗಿ ಅಥವಾ ಸಾಯಲು ಸಿದ್ಧರಾಗಿ ! – ‘ಜನಮ ಟಿವಿ’ಗೆ ಇಸ್ಲಾಮಿಕ್ ಸ್ಟೇಟ್‌ನಿಂದ ಬೆದರಿಕೆ

ಇಸ್ಲಾಮಿಕ್ ಸ್ಟೇಟ್ ಕೇರಳದ ರಾಷ್ಟ್ರವಾದಿ ವಿಚಾರಸರಣಿಯ ‘ಜನಮ ಟಿವಿ’ ಈ ವಾಹಿನಿಯ ಎಲ್ಲ ಸಿಬ್ಬಂದಿಗಳಿಗೆ ‘ಇಸ್ಲಾಂಗೆ ಮತಾಂತರವಾಗಿ ಅಥವಾ ಸಾಯಲು ಸಿದ್ಧರಾಗಿ’ ಎಂದು ಬೆದರಿಕೆಯೊಡ್ಡಿದೆ. ಇಸ್ಲಾಮಿಕ್ ಸ್ಟೇಟ್‌ನ ಕೇರಳ ಶಾಖೆಯು ‘ಇನ್ಸ್ಟಾಗ್ರಾಮ್’ನಿಂದ ಈ ಬೆದರಿಕೆಯನ್ನು ಹಾಕಿದ್ದಾರೆ.

ಭಗವಾನ ಕಾರ್ತಿಕೇಯನ ಸ್ತೋತ್ರವನ್ನು ಅವಮಾನಿಸಿದ ಪೆರಿಯಾರವಾದಿ ಯೂ ಟ್ಯೂಬ್ ಚಾನಲ್‌ನ ಇಬ್ಬರ ಬಂಧನ

ತಮಿಳುನಾಡು ಪೊಲೀಸರ ಸೈಬರ್ ಅಪರಾಧ ಶಾಖೆಯ ಅಧಿಕಾರಿಗಳು ಪೆರಿಯಾರವಾದಿ ಕಾರ್ಯಕರ್ತರಿಂದ ನಡೆಸಲಾಗುತ್ತಿರುವ ಯೂ ಟ್ಯೂಬ್ ಚಾನಲ್ ‘ಕರುಪ್ಪಾರ ಕುಟಮ’ನ (ಕಪ್ಪುವರ್ಣೀಯರ ಸಮೂಹ) ವಿರುದ್ಧ ಅಪರಾಧವನ್ನು ದಾಖಲಿಸಿ ಈ ಪ್ರಕರಣದಲ್ಲಿ ಎಮ್. ಸೆಂಥಿಲ ವಾಸನ ಹಾಗೂ ನಿರೂಪಕ ಸುರೇಂದ್ರನ್ ಇವರನ್ನು ಬಂಧಿಸಿದ್ದಾರೆ.

ಕೊಯಂಬತ್ತೂರು (ತಮಿಳುನಾಡು) ಇಲ್ಲಿ ಅಜ್ಞಾತರಿಂದ ೩ ದೇವಸ್ಥಾನಗಳನ್ನು ಒಡೆದು ಸುಟ್ಟರು

ಜುಲೈ ೧೭ ರ ರಾತ್ರಿ ಅಜ್ಞಾತರು ಟೌನ್ ಹಾಲ್‌ನ ಹತ್ತಿರ ಇರುವ ಮಗಾಲಿಯಮ್ಮನ್ ದೇವಸ್ಥಾನ, ರೈಲು ನಿಲ್ದಾಣದ ಬಳಿ ಇರುವ ವಿನಯನಗರ ದೇವಸ್ಥಾನ ಹಾಗೂ ನಲ್ಲಮಪಲಾಯಮ್‌ನ ಸೆಲವಾ ಪ್ರದೇಶದ ವಿನಯಗರ ದೇವಸ್ಥಾನ ಈ ೩ ಹಿಂದೂ ದೇವಸ್ಥಾನಗಳನ್ನು ಒಡೆದು ಬೆಂಕಿ ಹಚ್ಚಿದರು. ಒಡೆಯುವವರು ಇಲ್ಲಿಯ ಒಂದು ದೇವಸ್ಥಾನದಲ್ಲಿರುವ ತ್ರಿಶೂಲಕ್ಕೂ ಹಾನಿ ಮಾಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

೫ ಸಾವಿರ ವರ್ಷಗಳ ಹಿಂದೆ ಪ್ರಪ್ರಥಮವಾಗಿ ರಾವಣನು ವಿಮಾನವನ್ನು ಹಾರಿಸಿದ್ದನು ! – ಶ್ರೀಲಂಕಾ ಸರಕಾರದ ಹೇಳಿಕೆ

ಶ್ರೀಲಂಕಾ ಸರಕಾರವು ರಾವಣ ಹಾಗೂ ಆತನ ವಿಮಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಜನರಿಗೆ ಕಾಗದಪತ್ರ ಅಥವಾ ಪುಸ್ತಕಗಳ ಮಾಧ್ಯಮದಿಂದ ಇರುವಂತಹ ಯಾವುದೇ ಪ್ರಕಾರದ ಮಾಹಿತಿಗಳು ಇದ್ದಲ್ಲಿ ಅದನ್ನು ನೀಡಬೇಕು ಎಂದು ಹೇಳಿದೆ. ಈ ಬಗ್ಗೆ ವಿವಿಧ ದಿನಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಾಶಿಸಿದೆ.

ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸಂಚಾರ ನಿಷೇಧ ಜಾರಿಗೊಳಿಸುವುದಿಲ್ಲ ! – ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಸಂಚಾರ ನಿಷೇಧ ಜಾರಿಗೊಳಿಸುವುದಿಲ್ಲ. ರಾಜ್ಯದ ಮುಖ್ಯಮಂತ್ರಿಯವರೂ ಇದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ಹೇಳಿದ್ದಾರೆ. ಜುಲೈ ೨೦ ರಂದು ಇದರ ಬಗ್ಗೆ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ !

ಭಾರತ ಮತ್ತು ಸಂಪೂರ್ಣ ಜಗತ್ತು ಚೀನಾವನ್ನು ಎಲ್ಲ ದಿಕ್ಕುಗಳಲ್ಲಿ ಮುತ್ತಿಗೆ ಹಾಕಿರುವುದರಿಂದ ಅದು ಬೇರೆ ಪರ್ಯಾಯವಿಲ್ಲದೆ ಮಾಡಿದ ತಾತ್ಕಾಲಿಕ ಕೃತಿ ಇದು; ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಜಗತ್ತು ಮೂರನೆ ಮಹಾಯುದ್ಧದ ಹೊಸ್ತಿಲಿನಲ್ಲಿ ನಿಂತಿದೆ ಹಾಗೂ ಜಗತ್ತಿನ ಎಲ್ಲ ದೇಶಗಳೊಂದಿಗೆ ಗಡಿಯಲ್ಲಿ ಜಗಳವಾಡುವ ಚೀನಾ ಇಂದು ಅದರ ಕೇಂದ್ರ ಬಿಂದುವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ರಾಜಕೀಯ ಪಕ್ಷದ ನೇತಾರರು ಮತ್ತು ಕಾರ್ಯಕರ್ತರು ಯಾರೇ ಹಣ ಅಥವಾ ಹುದ್ದೆಯನ್ನು ನೀಡಿದರೆ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣದಲ್ಲಿರುವ ಜಾಗವನ್ನು ಬಿಟ್ಟು ಬೇರೆಕಡೆ ಎಲ್ಲಿಯೂ ಹೋಗುವುದಿಲ್ಲ.