ಅಸ್ಸಾಂನಲ್ಲಿ ಬಹುವಿವಾಹ ವಿರೋಧಿ ಕಾನೂನು ರೂಪಿಸಲು ಜನರ ಬೆಂಬಲ ! – ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಜನರಿಂದ ಬಂದಿರುವ ೧೪೯ ಸೂಚನೆಗಳಲ್ಲಿನ ೧೪೬ ಸೂಚನೆಗಳ ಮೂಲಕ ಕಾನೂನಿಗೆ ಬೆಂಬಲ

ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಗುಹಾಟಿ (ಅಸ್ಸಾಂ) – ಬಹು ವಿವಾಹ ವಿರುದ್ಧ ಸ್ಥಾಪಿಸಲದ ಸಮಿತಿಯ ವರದಿ ಸರಕಾರದ ಬಳಿ ಬಂದಿದೆ. ಜನರು ಬಹುವಿವಾಹದ ವಿರುದ್ಧ ಕಾನೂನು ರೂಪಿಸಲು ಬೆಂಬಲ ನೀಡಿದ್ದಾರೆ. ಈಗ ಸರಕಾರ ಇದರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕರಡು ಮಸೂದೆ ಮಂಡಿಸುವುದು, ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಮಾಹಿತಿ ನೀಡಿದರು.

ಹಿಮಂತ ಬಿಸ್ವ ಸರಮಾ ಇವರು ಟ್ವೀಟ್ ಮಾಡಿ, ನಮಗೆ ಕರಡು ಮಸೂದೆಯ ಬಗ್ಗೆ ೧೪೯ ಸೂಚನೆಗಳು ದೊರೆತಿವೆ ಇದರಲ್ಲಿ ೧೪೬ ಸೂಚನೆಗಳು ಕಾನೂನಿನ ಪರವಾಗಿವೆ ಹಾಗೂ ೩ ಸಂಘಟನೆಯಿಂದ ಕರಡು ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮುಂದಿನ ೪೫ ದಿನದಲ್ಲಿ ಕರಡು ಮಸೂದೆಯ ಸ್ವರೂಪ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಒಂದಕ್ಕಿಂತ ಹೆಚ್ಚು ಪತ್ನಿ ಮಾಡಿಕೊಳ್ಳುವುದು ಇಸ್ಲಾಂನಲ್ಲಿ ಅನಿವಾರ್ಯ ಅಲ್ಲ ! – ನ್ಯಾಯಾಲಯದ ಅಭಿಪ್ರಾಯ

ಸಮಿತಿಯ ವರದಿಯಲ್ಲಿ, ಇಸ್ಲಾಂನ ಸಂದರ್ಭದಲ್ಲಿ ನ್ಯಾಯಾಲಯವು, ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಮಾಡಿಕೊಳ್ಳುವುದು ಇಸ್ಲಾಂನ ಅನಿವಾರ್ಯ ಅಂಗವಲ್ಲ’ ಎಂದು ಈ ಹಿಂದೆ ಹೇಳಿತ್ತು. ಪತ್ನಿಯರ ಸಂಖ್ಯೆ ಸೀಮಿತ ಗೊಳಿಸುವ ಕಾನುನು ಧರ್ಮ ಪಾಲನೆ ನಡೆಸುವ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ತದ್ವಿರುದ್ಧ ಕಾನೂನು ಸಾಮಾಜಿಕ ಕಲ್ಯಾಣ ಮತ್ತು ಸುಧಾರಣೆಗಾಗಿ ಇರುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಇಂತಹ ಕಾನೂನು ಸಂಪೂರ್ಣ ದೇಶದಲ್ಲಿ ರೂಪಿಸಬೇಕು !