ಕಾನ್ಪುರ ( ಉತ್ತರಪ್ರದೇಶ) ದಲ್ಲಿ ಹಿಂದೂಗಳ ಮತಾಂತರಕ್ಕೆ ಯತ್ನ ಮತ್ತು ಬಂಧನ !

  • ತೈವಾನಿ ಭಾಷೆಯ ಸಾಹಿತ್ಯ ಪತ್ತೆ !

  • ಗುಪ್ತಚರ ಇಲಾಖೆ ವಿಚಾರಣೆ ನಡೆಸುತ್ತಿದೆ !

ಕಾನ್ಪುರ (ಉತ್ತರಪ್ರದೇಶ) – ಒಳ್ಳೆಯ ನೌಕರಿ, ಉದ್ಯೋಗ, ವಿವಾಹ ಇತ್ಯಾದಿ ಆಮಿಷಗಳನ್ನೊಡ್ಡಿ ಬಡ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಪ್ರಯತ್ನಿಸುವ ಅಭಿಜೀತ ಮತ್ತು ರಜತನನ್ನು ಕಾನ್ಪುರ ಪೊಲೀಸರು ಒಂದು ಫ್ಲ್ಯಾಟನಿಂದ ಬಂಧಿಸಿದ್ದಾರೆ. ಹಾಗೆಯೇ ಜೀವನ, ಶಿವಾಂಗ, ಶೀತಲ, ಜಾಬಿನ, ರಾಣಾಜಿ ಮತ್ತು ಏಕಾಲಾ ಇವರನ್ನು ವಶಕ್ಕೆ ಪಡೆದಿದ್ದಾರೆ. ಅವರ ಬಳಿ ತೈವಾನಿ ಭಾಷೆಯಲ್ಲಿ ಬರೆದ ಪುಸ್ತಕಗಳು ದೊರಕಿವೆ. ಅವರನ್ನು ಉಗ್ರ ನಿಗ್ರಹ ದಳ, ಗುಪ್ತಚರ ಇಲಾಖೆ, ಸೈನ್ಯದ ಗುಪ್ತಚರ ಇಲಾಖೆ ಮುಂತಾದ ವ್ಯವಸ್ಥೆಗಳಿಂದ ವಿಚಾರಣೆ ನಡೆಸಲಾಗುತ್ತಿದೆ.

1. ಸ್ಥಳೀಯ ನಾಗರಿಕರು ಈ ಫ್ಲಾಟನಲ್ಲಿ ಮತಾಂತರ ನಡೆಯುತ್ತಿದೆಯೆಂದು ದೂರು ನೀಡಿದ್ದರು. ಹಾಗೆಯೇ ವಿಶ್ವ ಹಿಂದೂ ಪರಿಷತ್ತು ಮತ್ತು ಬಜರಂಗ ದಳದವರೂ ಕೂಡ ಇಲ್ಲಿಗೆ ಹೋಗಿ ನೋಡಿದಾಗ ಅಲ್ಲಿ 50 ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಪುರುಷರು ಕಂಡು ಬಂದಿದ್ದರು. ವಿಶ್ವ ಹಿಂದೂ ಪರಿಷತ್ತಿನ ಪದಾಧಿಕಾರಿ ಆನಂದ ಸಿಂಹ ಇವರು, ಇಲ್ಲಿ ನಮಗೆ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಸಾಹಿತ್ಯಗಳು ಕಂಡು ಬಂದಿದ್ದು, ಇಲ್ಲಿ 8 ರಿಂದ 10 ಜನರನ್ನು ಹಿಂದೂ ಧರ್ಮವನ್ನು ಬಿಟ್ಟು ಕ್ರೈಸ್ತರಾಗುವಂತೆ ಹೇಳಲಾಗುತ್ತಿತ್ತು ಎಂದು ತಿಳಿಸಿದ್ದಾರೆ.

2. ಫ್ಲ್ಯಾಟ್ ನಲ್ಲಿ ಸಂಚಾರವಾಣಿ ಸಿಕ್ಕಿದ್ದು, ಅದರಲ್ಲಿ ಮತಾಂತರ ವಿಷಯದ ಸಾಹಿತ್ಯ ಕಂಡು ಬಂದಿದೆ. ವಿಚಾರಣೆಯಲ್ಲಿ ಅವರಿಗೆ ಆಮಿಷ ತೋರಿಸಿ ಮತಾಂತರಗೊಳಿಸಲಾಗಿದ್ದು, ಇಂತಹ 4 ಜನರ ಮಾಹಿತಿ ಕಂಡು ಬಂದಿತು. ಅವರು ಮತಾಂತರಗೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಈಗ ಬಂಧಿಸಿರುವವರಿಗೆ ಹಣಕಾಸನ್ನು ಯಾರು ಪೂರೈಸುತ್ತಿದ್ದರು, ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದೆ.

ಸಂಪಾದಕೀಯ ನಿಲುವು

  • ಹಿಂದೂಗಳ ಇಲ್ಲಿಯವರೆಗಿನ ಇತಿಹಾಸದಲ್ಲಿ ಅವರು ಎಂದಿಗೂ ಇತರ ಧರ್ಮದವರನ್ನು ಮತಾಂತರಗೊಳಿಸಿಲ್ಲ; ಆದರೆ ಜಗತ್ತಿನಲ್ಲಿ ಅತ್ಯಧಿಕ ಹಿಂದೂಗಳನ್ನೇ ಮತಾಂತರಗೊಳಿಸಲಾಗಿದೆ. ಇದಕ್ಕೆ ಹಿಂದೂಗಳ ಅಸಹಾಯಕತೆಯೇ ಕಾರಣವಾಗಿದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರವೇ ಬೇಕು !
  • ದೇಶದಲ್ಲಿ ಮತಾಂತರದ ವಿರುದ್ಧ ಕಠಿಣ ಕಾನೂನು ಇಲ್ಲದಿರುವುದರಿಂದ ಹಿಂದೂಗಳ ಮತಾಂತರ ಮುಂದುವರಿದಿದೆ, ಇದು ಹಿಂದೂಗಳಿಗೆ ಲಜ್ಜಾಸ್ಪದ !