ಸರ್ವೋಚ್ಚ ನ್ಯಾಯಾಲಯವು ಆಯುಷ್ ಮತ್ತು ಹೋಮಿಯೋಪತಿ ವೈದ್ಯರಿಗೆ ಕೊರೋನಾ ಮೇಲಿನ ಔಷಧಿಗಳನ್ನು ಬರೆದು ಕೊಡಲು ಅನುಮತಿ ನೀಡಿದೆ

ನವ ದೆಹಲಿ – ೨೦೨೦ ರ ಮಾರ್ಚ್ ೬ ರಂದು ಕೇಂದ್ರ ಸರಕಾರದ ಆದೇಶಕ್ಕೆ ಸಮ್ಮತಿ ನೀಡಿರುವ ಸರ್ವೋಚ್ಚ ನ್ಯಾಯಾಲಯ, ಕೊರೋನಾ ರೋಗಿಗಳಿಗೆ ಚಿಕಿತ್ಸೆಗಾಗಿ ಔಷಧಿಗಳನ್ನು ಬರೆದು ಕೊಡಲು ಅರ್ಹ ಆಯುಷ್ ವೈದ್ಯರು ಮತ್ತು ಹೋಮಿಯೋಪತಿ ವೈದ್ಯರಿಗೆ ಅವಕಾಶ ನೀಡಿದೆ. ಆದ್ದರಿಂದ ವೈದ್ಯರು ಅವರು ಬರೆದು ಕೊಡುವ ಔಷಧಿಗಳು ಸರಕಾರದಿಂದ ಅನುಮೋದಿತ ಮಾತ್ರೆಗಳು ಅಥವಾ ಕಷಾಯಗಳಾಗಿವೆ ಮತ್ತು ಕೊರೋನಾ ರೋಗಿಗಳಿಗೆ ಸಾಮಾನ್ಯ ಚಿಕಿತ್ಸೆಯ ಜೊತೆಗೆ ನೀಡಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಅವರು ಬರೆದು ಕೊಡುವ ಔಷಧಗಳು ಕೊರೋನಾ ಮೇಲಿನ ಚಿಕಿತ್ಸೆಗಾಗಿ ಆಗಿರದೇ, ಆದರೆ ಕೊರೋನಾ ರೋಗಿಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೀಡಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು.

ವಿಚಾರಣೆಯ ಸಮಯದಲ್ಲಿ, ಹೋಮಿಯೋಪತಿ ವೈದ್ಯರು ಕೊರೋನಾದ ರೋಗಿಗಳಿಗೆ ರೋಗವನ್ನು ತಡೆಗಟ್ಟಲು ಉಪಾಯವೆಂದು ಬರುದು ಕೊಡಬಹುದು; ಆದರೆ ಅವುಗಳನ್ನು ಚಿಕಿತ್ಸೆ ಎಂದು ಕರೆಯಲಾಗುವುದಿಲ್ಲ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.