ಬಿಷ್ಣೋಯ್ ಗುಂಪಿನಿಂದ ಸಲ್ಮಾನಖಾನ್ ಗೆ ಬೆದರಿಕೆ!
ಮುಂಬಯಿ – ನಟ ಸಲ್ಮಾನ್ ಖಾನರ ಮನೆಯ ಹೊರಗೆ ಏಪ್ರಿಲ್ 14 ರಂದು ಬೆಳಿಗ್ಗೆ ಮನಬಂದಂತೆ ಗುಂಡಿನ ದಾಳಿ ಮಾಡಿದ್ದಾರೆ. ಈ ಪ್ರಕರಣವನ್ನು ಫೇಸಬುಕ್ ನಲ್ಲಿ ಅನ್ಮೋಲ್ ಬಿಷ್ಣೋಯ್ ಹೆಸರಿನ ವ್ಯಕ್ತಿಯು ಈ ಗುಂಡಿನ ದಾಳಿಯಲ್ಲಿ ತನ್ನ ಕೈವಾಡವಿದೆ ಎಂದು ಒಪ್ಪಿಕೊಂಡಿದ್ದಾನೆ. ಇದರಿಂದಾಗಿ ಇದರಲ್ಲಿ ಬಿಷ್ಣೋಯ್ ಗುಂಪಿನ ಪ್ರಭಾವವಿದೆಯೆಂದು ಸಾಬೀತಾಗಿದೆ.
ಈ ಸಂದರ್ಭದಲ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಕೆಳಗಿನಂತೆ ಹೇಳಲಾಗಿದೆ.
(ಸೌಜನ್ಯ: NEWS 18)
“ನಾವು ಶಾಂತಿಯನ್ನು ಬಯಸುತ್ತೇವೆ. ದಬ್ಬಾಳಿಕೆಯ ವಿರುದ್ಧ ಯುದ್ಧದಿಂದ ಪರಿಹಾರ ಸಿಗುವುದಾದರೆ ಯುದ್ಧವೇ ಆಗಲಿ. ಸಲ್ಮಾನ ಖಾನ್, ನಾವು ‘ಟ್ರೇಲರ್’ (ಚಲನಚಿತ್ರದ ಸಂಕ್ಷಿಪ್ತ ಭಾಗ) ತೋರಿಸಲು ಇದನ್ನು ಮಾಡಿದ್ದೇವೆ. ನಿನಗೆ ನಮ್ಮ ಶಕ್ತಿ ತಿಳಿಯಬೇಕು ಎಂದು ಇದನ್ನು ಮಾಡಿದ್ದೇವೆ ಮತ್ತು ನಮ್ಮನ್ನು ಪರೀಕ್ಷಿಸಬೇಡ, ನಿನಗೆ ಇದು ಕೊನೆಯ ಎಚ್ಚರಿಕೆಯಾಗಿದೆ. ತದನಂತರ ಖಾಲಿ ಮನೆಯ ಮೇಲೆ ಗುಂಡು ಹಾರಿಸುವುದಿಲ್ಲ. ದಾವೂದ್ ಇಬ್ರಾಹಿಂ ಮತ್ತು ಛೋಟಾ ಶಕೀಲರನ್ನು ದೇವರು ಎಂದು ತಿಳಿದಿದ್ದೀಯಾ. ಅವರ ಹೆಸರಿನಲ್ಲಿ ನಾವು ಎರಡು ನಾಯಿಗಳನ್ನು ಸಾಕಿದ್ದೇವೆ ಮತ್ತೆ ಹೆಚ್ಚು ಮಾತನಾಡುವ ಅಭ್ಯಾಸ ನನಗಿಲ್ಲ.
ಜೈ ಶ್ರೀ ರಾಮ್ ಜೈ ಭಾರತ್ , ಸಲಾಂ ಶಾಹಿದಾ
(ಲಾರೆನ್ಸ್ ಬಿಷ್ಣೋಯ್ ಗ್ರೂಪ್)
ಗೊಲ್ಡಿ ಬ್ರಾರ, ರೋಹಿತ್ ಗೋದರಾ,
ಕಾಲಾ ಜಠಾರಿ’’
Two unidentified individuals on a motorcycle fired shots outside Bollywood actor Salman Khan’s residence in Mumbai’s Bandra early Sunday morning. Mumbai Police have identified and charged the assailants with attempted murder and violations of the Arms Act.#SalmanKhan #Mumbai… pic.twitter.com/heorlhqmgJ
— ABP LIVE (@abplive) April 14, 2024